ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಯಶಸ್ವಿ ಸಮಾರೋಪ

Upayuktha
0


 ಗೋವಾ: ಹನ್ನೆರಡನೆಯ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಅಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ತನ್ನ ತಪಪೂರ್ತಿ (12 ವರ್ಷ) ಪೂರೈಸಿದೆ. ಈ ಅಧಿವೇಶನದ ಮಾಧ್ಯಮದಿಂದ ನಿರ್ಮಾಣಗೊಂಡ ಧರ್ಮನಿಷ್ಠ ಮತ್ತು ದೇಶಭಕ್ತರ ಸಂಘಟನೆಯಿಂದಾಗಿ ಇಂದು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ನಿರ್ಮಾಣದ ಸಂಕಲ್ಪಶಕ್ತಿಯ ಸ್ಪಂದನಗಳು ವೈಶ್ವಿಕ ಸ್ತರದಲ್ಲಿಯೂ ಅರಿವಾಗುತ್ತಿವೆ. ಹಿಂದೂ ರಾಷ್ಟ್ರವು ಈಶ್ವರನ ಇಚ್ಛೆಯಂತೆ ಸೂಕ್ತ ಸಮಯದಲ್ಲಿ ಸ್ಥಾಪನೆಯಾಗುತ್ತದೆ. ನಿಜವಾಗಿ ಹೇಳಬೇಕೆಂದರೆ, ಅಯೋಧ್ಯೆಯಲ್ಲಿ ಶ್ರೀರಾಮನಜನ್ಮಭೂಮಿಯಲ್ಲಿ ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆಯಾಗಿ ಸೂಕ್ಷ ದಲ್ಲಿ ‘ರಾಮ ರಾಜ್ಯ’ವು ಅಂದರೆ ಹಿಂದೂ ರಾಷ್ಟ್ರವು ಪ್ರಾರಂಭವಾಗಿದೆ. ಇದನ್ನು ಪೂರ್ಣರೂಪದಲ್ಲಿ ಸಾಕಾರಗೊಳಿಸಲು ಕೃತಿಯ ಸ್ತರದಲ್ಲಿ ದಿಶೆಯನ್ನು ಈ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ನಿರ್ಧರಿಸಲಾಯಿತು. ಸನಾತನ ಹಿಂದೂ ಧರ್ಮವು ಭಾರತದ ಆತ್ಮವಾಗಿದೆ. ಭಾರತ ದೇಶವು ಜೀವಂತವಾಗಿರಬೇಕಾಗಿದ್ದರೆ, ಈ ಆತ್ಮವು ಸುರಕ್ಷಿತವಾಗಿರುವುದು ಅವಶ್ಯಕವಾಗಿದೆ; ಆದರೆ ದೇಶವಿರೋಧಿ ಶಕ್ತಿಗಳಿಂದ ಅದರ ಮೇಲೆಯೇ ದಾಳಿ ನಡೆಸಲು ಪ್ರಯತ್ನಿಸಲಾಗುತ್ತಿವೆ. ಕೆಲವರು ಸನಾತನ ಧರ್ಮವನ್ನು ಉಚ್ಛಾಟಿಸುವ ಹೇಳಿಕೆಯನ್ನು ನೀಡುತ್ತಿದ್ದಾರೆ, ಇನ್ನು ಕೆಲವರು ಭಾರತದ (ಇಂಡಿಯಾ ಅಲ್ಲ) ತುಂಡು ಮಾಡುವುದಾಗಿ ಘೋಷಿಸುತ್ತಾರೆ; ಕೆಲವರು ಈ ದೇಶದ ಮೂಲ ಸ್ವಭಾವವಾಗಿರುವ ಹಿಂದೂ ಧರ್ಮೀಯರು ಹಿಂಸಾವಾದಿಗಳಾಗಿದ್ದಾರೆಂದು ಹೇಳಿಕೆ ನೀಡುತ್ತಿದ್ದಾರೆ. ಇದು ಕೇವಲ ಮಾತುಗಳು ಮಾತ್ರವಲ್ಲ, ಭಾರತದ ಸ್ವಾತಂತ್ರ್ಯದ ಶತಮಾನೋತ್ಸವದ ವರೆಗೆ ಅಂದರೆ 2047ರ ವರೆಗೆ ಭಾರತವನ್ನು ಇಸ್ಲಾಮಿಸ್ತಾನ್ ಆಗಿ ಪರಿವರ್ತಿಸುವ ಪಿತೂರಿಯ ಟೂಲ್‌ಕಿಟ್ ಆಗಿದೆ. ಅದನ್ನು ಎದುರಿಸಬೇಕಾಗಿದ್ದರೆ, ಮುಂಬರುವ ಕಾಲದಲ್ಲಿ ಹಿಂದೂ ರಾಷ್ಟ್ರದ ಬೇಡಿಕೆಯ ಒಂದು ವ್ಯಾಪಕ ಜನಾಂದೋಲನವನ್ನು ರಚಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ಹಿಂದೂ ಜಾಗೃತಿ ಮತ್ತು ಸಂಘಟನೆಯನ್ನು ಮಾಡುವುದರೊಂದಿಗೆ ಹಿಂದೂ ರಾಷ್ಟ್ರಕ್ಕಾಗಿ ಶಾರೀರಿಕ, ವೈಚಾರಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವ ನಿರ್ಧಾರವನ್ನು ‘ದ್ವಾದಶ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಅಂದರೆ ’ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಮಾಡಲಾಯಿತು. ಫೋಂಡಾ (ಗೋವಾ) ದಲ್ಲಿನ ಶ್ರೀರಾಮನಾಥ ದೇವಸ್ಥಾನದಲ್ಲಿ 24 ರಿಂದ 30 ಜೂನ ಈ ಕಾಲಾವಧಿಯಲ್ಲಿ ನಡೆದ ಈ ಮಹೋತ್ಸವದಲ್ಲಿ ಅಮೇರಿಕಾ, ಸಿಂಗಾಪುರ, ಇಂಡೋನೇಷ್ಯಾ, ಘಾನಾ (ದಕ್ಷಿಣ ಆಫ್ರಿಕಾ), ನೇಪಾಳ ಈ ದೇಶಗಳು ಸೇರಿದಂತೆ ಭಾರತದ 26 ರಾಜ್ಯಗಳ 1000 ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಮಹೋತ್ಸವದಲ್ಲಿ ಮೊದಲ 3 ದಿನಗಳು ‘ಹಿಂದೂ ರಾಷ್ಟ್ರ ಅಧಿವೇಶನ’ನಡೆಯಿತು, ಜೂನ್ 27 ರಂದು ‘ಹಿಂದೂ ವಿಚಾರಮಂಥನ ಮಹೋತ್ಸವ’, ಜೂನ್ 28ರಂದು ‘ಮಂದಿರ ಸಂಸ್ಕೃತಿ ಪರಿಷತ್ತು’ ಮತ್ತು ಕೊನೆಯ 2 ದಿನಗಳು ‘ನ್ಯಾಯವಾದಿಗಳ ಸಮಾವೇಶ’ ನಡೆಯಿತು.


ಸದ್ಯದ ಸೆಕ್ಯುಲರ ವ್ಯವಸ್ಥೆಯು ಅಮಾಯಕ ಹಿಂದೂಗಳ ಹತ್ಯೆಯನ್ನು ತಡೆಯಲು, ಹಿಂದೂ ಧರ್ಮದ ರಕ್ಷಣೆ ಮಾಡಲು, ಹಿಂದೂ ಧರ್ಮದವರಿಗೆ ಧಾರ್ಮಿಕ ಶಿಕ್ಷಣವನ್ನು ನೀಡುವಲ್ಲಿ ವಿಫಲವಾಗಿದೆ. ಆದ್ದರಿಂದಲೇ ದೇಶವಿರೋಧಿ ಮತ್ತು ಹಿಂದೂವಿರೋಧಿಗಳು ಭಾರತದ ಮೂಲ ಬೆನ್ನೆಲುಬಾಗಿರುವ ಸನಾತನ ಹಿಂದೂ ಧರ್ಮವನ್ನು ಗುರಿ ಮಾಡುತ್ತಿವೆ. ಆದೇ ರೀತಿ ಹಿಂದೂಗಳೂ ಎಲ್ಲ ಸಮಸ್ಯೆಗಳ ಮೂಲವಾಗಿರುವ ಸಂವಿಧಾನದಲ್ಲಿರುವ ಸೆಕ್ಯುಲರ ಮತ್ತು ಸೋಶಿಯಲಿಸ್ಟ ಈ ಶಬ್ದಗಳನ್ನು ತೆಗೆದುಹಾಕಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಒಕ್ಕೊರಳಿನಿಂದ ಒತ್ತಾಯಿಸಬೇಕು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  








إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top