ಬಳ್ಳಾರಿ : ಜುಲೈ 21ಕ್ಕೆ ಸಪ್ತ ಸ್ವರ ಕಲಾ ಸಮೂಹದಿಂದ ಸಂಗೀತ ಕಾರ್ಯಕ್ರಮ

Upayuktha
0


ಬಳ್ಳಾರಿ :
ಸಪ್ತ ಸ್ವರ ಕಲಾ ಸಮೂಹದಿಂದ ಸುಮಾರು ತಿಂಗಳುಗಳಿಂದ ಸ್ಥಳೀಯ ಸಂಗೀತ ಕಲಾವಿದರಿಗೆ ಪ್ರೋತ್ಸಾಹಿಸಲೆಂದು ಮೀನಾಕ್ಷಿ ನಿಲಯ ಬೈಠಕ್ ಎನ್ನುವ ಕಾರ್ಯಕ್ರಮವನ್ನು ಪ್ರತಿ ತಿಂಗಳು ನಡೆಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಜುಲೈ ತಿಂಗಳಿನ ಸಂಗೀತ ಕಾರ್ಯಕ್ರಮವನ್ನು ಜುಲೈ 21 ಭಾನುವಾರದಂದು ಸಂಜೆ 6.30 ಕ್ಕೆ ಬಳ್ಳಾರಿಯ ಗಾಂಧಿನಗರದ 3 ನೇ ಅಡ್ಡ ರಸ್ತೆ, ಬಾಲ ಭಾರತಿ ಶಾಲೆಯ ಹತ್ತಿರ ಮೀನಾಕ್ಷಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ. 


ಕಾರ್ಯಕ್ರಮವನ್ನು ಶ್ರೀ ಅನಿಲ್ ಶಾಖಾಪೂರ್ ಹಾಗೂ ಬಳ್ಳಾರಿಯ ಹಿರಿಯ ಕಲಾವಿದರಾದ ದೊಡ್ಡ ಬಸವ ಗವಾಯಿಗಳು ನಡೆಸಿಕೊಡಲಿದ್ದಾರೆ. ಇವರಿಗೆ ತಬಲಾ ಸಾಥ್ ನಲ್ಲಿ ಬಳ್ಳಾರಿಯ ಜನಪ್ರಿಯ ಕಲಾವಿದರಾದ ಶ್ರೀ ಪವಮಾನ್ ಅರಳಿ ಕಟ್ಟೆ ಮತ್ತು ಉದಯೋನ್ಮುಖ ಕಲಾವಿದರಾದ ಯೋಗೇಶ್ ಹಾಗೂ ಹಾರ್ಮೋನಿಯಂ ಸಾಥ್ ನಲ್ಲಿ ಪುಟ್ಟರಾಜು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಈ ಸಂಗೀತದ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

Post a Comment

0 Comments
Post a Comment (0)
Advt Slider:
To Top