ಪತ್ರಕರ್ತ ವಲಿಭಾಷರಿಗೆ ಪಾಟೀಲ್ ಪುಟ್ಟಪ್ಪ ಸ್ಮಾರಕ ರಾಜ್ಯ ಮಾಧ್ಯಮ ಪ್ರಶಸ್ತಿ

Upayuktha
0






  
































ಬೆಂಗಳೂರು: ಇಲ್ಲಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ರಾಜ್ಯ ಪತ್ರಕರ್ತರ ವೇದಿಕೆ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನ ನಿವೃತ್ತ ನ್ಯಾಯಮೂರ್ತಿ ಮಾಜಿ ಲೋಕಾಯುಕ್ತರಾದ ಸಂತೋಷ ಹೆಗಡೆರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಜ್ಯದ ಹಲವು ಪತ್ರಕರ್ತರಿಗೆ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಅಲ್ಲದೇ, ಕೆ.ಎಲ್.ಕುಂದರಗಿ ಅವರು ಬರೆದ ಸ್ವತಂತ್ರ ಸೇನಾನಿ ವೀರ ಸಾವರ್ಕರ್ ಎಂಬ ನಾಟಕದ ಪುಸ್ತಕವನ್ನು ಬಂಜಾರ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್. ಗೋವಿಂದಸ್ವಾಮಿ ಲೋಕಾರ್ಪಣೆ ಮಾಡಿದ್ದಾರೆ. ರಾಜ್ಯ ಹಲವಾರು ಪತ್ರಿಕೆಗಳನ್ನ ಬಳಸಿಕೊಂಡು ಲಾಂಗೆಸ್ಟ್ ಲ್ಯಾಮಿನೇಷನ್ ಅನ್ನು ಸಂಗಮೇಶ್ ಬಾದವಾಡಗಿಯವರು ಬಿಡುಗಡೆಗೊಳಿಸಿದರು.


ರಾಜ್ಯದ ಸಾಧಕ ಪತ್ರಕರ್ತರಿಗೆ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿ-ಹಾಸನದ ಜನಮಿತ್ರ ಪತ್ರಿಕೆಯ ಸಂಪಾದಕರಾದ ಎಂ.ಬಿ.ಮದನಗೌಡ., ಕೊಪ್ಪಳದ ಹಿರಿಯ ಪತ್ರಕರ್ತರಾದ ವಿ.ಆರ್. ತಾಳಿಕೋಟಿ, ಕಲಬುರ್ಗಿಯ ಹಿರಿಯ ಪತ್ರಕರ್ತರಾದ ಮೈಹಿಪಾಲ ರೆಡ್ಡಿ ಮುನ್ನೂರು, ಬಿಜಾಪುರ ಜಿಲ್ಲೆಯ ವಿಜಯ ಕರ್ನಾಟಕ ಪತ್ರಿಕೆಯ ಮುಖ್ಯಸ್ಥ ಸಂಗಮೇಶ್  ಚೂರಿ, ಬಳ್ಳಾರಿಯ ಜಾಗೃತಿ ಕಿರಣ ಹಾಗೂ ಗಣಿನಾಡು ಪತ್ರಿಕೆಯ ಸಂಪಾದಕರಾದ ಯಾಳ್ಫಿ ವಲಿಭಾಷ, ಯಾದಗಿರಿಯ ಸಂಯುಕ್ತ ಕರ್ನಾಟಕ ಪತ್ರಿಕೆಯ ಬಿ.ಎಸ್.ಹಿರೇಮಠ್, ಪಬ್ಲಿಕ್ ಟಿವಿಯ ಆ್ಯಂಕರ್ ಸೇತುರಾಮ ಅರವಿಂದ್, ರಾಮನಗರ ಜಿಲ್ಲೆಯ ವಿಜಯ ಕರ್ನಾಟಕ ಪತ್ರಿಕೆಯ ರವಿಕಿರಣ್,ಮಂಡ್ಯ ಜಿಲ್ಲೆಯ ರಾಜು ಮಳವಳ್ಳಿ ಸಂಯುಕ್ತ ಕರ್ನಾಟಕ ಪತ್ರಿಕೆ, ಚಾಮರಾಜನಗರ ಜಿಲ್ಲೆಯ ಕಾವೇರಿ ಎಕ್ಸ್ ಪ್ರೆಸ್ ಪತ್ರಿಕೆಯ ಸಂಪಾದಕರಾದ ಮಾಹದೇವ ಅವರು ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top