ಬೆಂಗಳೂರು:"ನೃತ್ಯ ನೀರಾಜನ"

Upayuktha
0


ಬೆಂಗಳೂರು:
ಬೆಂಗಳೂರಿನ ಹೆಸರಾಂತ ಸಂಸ್ಥೆಯಾದ ನೃತ್ಯ ದಿಶಾ ಟ್ರಸ್ಟ್ ವತಿಯಿಂದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಆಗಸ್ಟ್ 2, ಶುಕ್ರವಾರ, ಸಂಜೆ 5-30ಕ್ಕೆ ಏರ್ಪಡಿಸಿರುವ "ನೃತ್ಯ ನೀರಾಜನ" (ಕಿರಿಯರ ನೃತ್ಯೋತ್ಸವ) ಕಾರ್ಯಕ್ರಮದಲ್ಲಿ ಸಂಸ್ಥೆಯ ಗುರು.ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ಶಿಷ್ಯೆಯರಾದ ಕು|| ಪಿ. ಭೂಷಿತಾ, ಕು|| ಎ. ಪಾರ್ನಿಕ ಮತ್ತು ಕು|| ಡಿ. ಶ್ರಾಗ್ವಿ ಇವರುಗಳು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. 


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದುಷಿ ಶ್ರೀಮತಿ ಉಷಾ ಬಸಪ್ಪ (ಸದಸ್ಯರು, ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ) ಹಾಗೂ ವಿದುಷಿ ಶ್ರೀಮತಿ ಪವಿತ್ರ ಪ್ರಶಾಂತ್ (ನಿರ್ದೇಶಕರು, ಪ್ರಣವಾಂಜಲಿ ಅಕಾಡೆಮಿ ಫಾರ್ ಪಫಾ೯ಮಿಂಗ್ ಆಟ್ಸ್೯) ವಹಿಸಲಿದ್ದಾರೆ. ಸಂಸ್ಥೆಯ ರೂವಾರಿ ಶ್ರೀ ಮಂಜುನಾಥ್ ಸ್ವಾಗತಿಸಲಿದ್ದಾರೆ ಎಂದು ಶ್ರೀಮತಿ ದರ್ಶಿನಿಯವರು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top