ಬಳ್ಳಾರಿ ಜು 06.: ಸನಾತನ ಧರ್ಮ ಉಳಿಸುವ ಮತ್ತು ಬೆಳೆಸುವ ಕೆಲಸವನ್ನು ಬ್ರಾಹ್ಮಣ ಸಮುದಾಯ ಮಾಡುತ್ತಿದೆ. ಹೀಗಾಗಿ ಈ ಸಮುದಾಯ ಅಭಿವೃದ್ಧಿಗೆ ಸದಾ ಬದ್ಧ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು. ನಗರದ ರಾಯಲ್ ಕಾಲೋನಿಯಲ್ಲಿರುವ ವಿಠಲ ಕೃಷ್ಣ ದೇವಸ್ಥಾನದಲ್ಲಿ ಮಾತನಾಡಿದ ಅವರು ಉತ್ತರಾಧಿ ಮಠದ ಅಭಿವೃದ್ಧಿಗೆ 20 ಲಕ್ಷ, ಬದ್ರಿ ನಾರಾಯಣ ದೇವಸ್ಥಾನ ನಿರ್ಮಾಣಕ್ಕೆ 20 ಲಕ್ಷ ಮತ್ತು ರಾಯಲ್ ಕಾಲೋನಿಯ ವಿಠ್ಠಲ ಕೃಷ್ಣ ದೇವಸ್ಥಾನ ಜೀರ್ಣೋದ್ಧಾರಕ್ಕೆ 20 ಲಕ್ಷ ರೂ ಹಣ ಬಿಡುಗಡೆ ಮಾಡಿರುವುದಾಗಿ ಘೋಷಣೆ ಮಾಡಿದರು.
ಎರಡು ಮೂರು ದಿನದಲ್ಲಿ ದೇವಸ್ಥಾನ ಅಭಿವೃದ್ಧಿಯ ರೂಪುರೇಷೆಯ ಎಸ್ಟಿಮೇಟ್ ನೀಡಿದಲ್ಲಿ ಮುಂದಿನ ವಾರದಿಂದಲೇ ಕೆಲಸ ಆರಂಭಿಸುವಾಗಿ ಅವರು ಹೇಳಿದರು.ಇನ್ನೂ ಕೆರೆ ಕಟ್ಟೆಯ ಅಭಿವೃದ್ಧಿಗೆ ಈಗಾಗಲೇ ಐವತ್ತು ಲಕ್ಷ ಬಿಡುಗಡೆ ಯಾಗಿದ್ದು, ಅದರ ಕೆಲಸ ನಡೆದಿದೆ ಇನ್ನಷ್ಟು ಹಣ ಬೇಕಾದಲ್ಲಿ ಅದನ್ನು ನೀಡುವ ಭರವಸೆ ನೀಡಿದರು. ಇನ್ನೂ ತಮ್ಮ ಕುಟುಂಬ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಭಕ್ತರಾಗಿದ್ದು, ಸೂರ್ಯನಾರಾಯಣ ರೆಡ್ಡಿ ಯವರು ಅಂದರೆ ಬಳ್ಳಾರಿಯ ಬ್ರಾಹ್ಮಣ ಸಮುದಾಯಕ್ಕೆ ಹೆಚ್ಚು ಪ್ರೀತಿ ಇದೆ. ನಮ್ಮ ತಂದೆಯ ಮೇಲಿನ ಪ್ರೀತಿಯನ್ನು ನನಗೆ ನೀಡಿದ ಹಿನ್ನಲೆ ಇದೀಗ ಶಾಸಕರಾಗಿ ನಿಮ್ಮ ಸೇವೆ ಮಾಡುತ್ತಿರುವೆ ಎಂದರು. ಪ್ರಾಸ್ತವಿಕವಾಗಿ ಮಾತನಾಡಿದ ಬಿಕೆಬಿಎನ್ ಮೂರ್ತಿಯವರು ಬಳ್ಳಾರಿ ನಗರದಲ್ಲಿ ಶಾಸಕ ಭರತ ರೆಡ್ಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ವಿವರಣೆ ನೀಡಿದರು.
ಈ ವೇಳೆ ಬ್ರಾಹ್ಮಣ ಒಕ್ಕೂಟದ ಗೌರವ ಅಧ್ಯಕ್ಷ ಬಿ.ಕೆ. ಸುಂದರ್, ಅಧ್ಯಕ್ಷರಾದ ಆರ್. ಪ್ರಕಾಶ ರಾವ್, ಚಿದಂಬರ್, ಕಾರ್ಯದರ್ಶಿ ಕೃಷ್ಣ ಮೂರ್ತಿ, ರಘುರಾಮ, ಪಟವಾರಿ, ಉದಯ, ಕಲ್ಲಿನಾಥ್,ವೆಂಕಟೇಶ, ಗಿರಿ,ಶೋಭಾರಾಣಿ,ಕವಿತಾ, ಮಮತಾ ಸೇರಿದಂತೆ ಇತರರು ಇದ್ದರು.