ಮಳೆ ಬೆಳೆ ಚೆನ್ನಾಗಿರಬೇಕೆಂದರೆ ಗಿಡ ಮರಗಳನ್ನು ಬೆಳಸಿ: ಎಚ್. ರಾಘವೇಂದ್ರಯ್ಯ

Upayuktha
0



ಬಳ್ಳಾರಿ: 
ನಾವು ನೀವು ಚೆನ್ನಾಗಿ ಆರೋಗ್ಯವಂತರಾಗಿ ಬದುಕಬೇಕಾದಲ್ಲಿ ಮಳೆ ಬೆಳೆ ಚೆನ್ನಾಗಿರಬೇಕು, ಮಳೆ ಬೆಳೆ ಬೇಕಾದಲ್ಲಿ ಸಮೃದ್ಧವಾದ ಮರಗಿಡಗಳಿರಬೇಕು ಅದಕ್ಕಾಗಿ ಪ್ರತಿಯೊಬ್ಬರು ಗಿಡ ಮರಗಳನ್ನು ನೆಟ್ಟು ಬೆಳೆಸಿರಿ ಎಂದು ಸಿರುಗುಪ್ಪ ವಲಯ ಅರಣ್ಯಾಧಿಕಾರಿ ಎಚ್  ರಾಘವೇಂದ್ರಯ್ಯ ಕರೆ ನೀಡಿದರು.


ಅವರು ಬಳ್ಳಾರಿ ಜಿಲ್ಲಾ ಸೀರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಾಮಾಜಿಕ ಅರಣ್ಯಾ ಯೋಜನೆಯಡಿಯಲ್ಲಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರಾದ ಸವಿತಾ ಮತ್ತು ಬೋಧಕ ಮತ್ತ ಬೋಧಕೇತರ ಸಿಬ್ಬಂದಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅಧಿಕಾರಿಗಳು ಇದ್ದರು.


إرسال تعليق

0 تعليقات
إرسال تعليق (0)
To Top