ಬಳ್ಳಾರಿ, ಜು.04: ಆಂಧ್ರದ ಕರ್ನೂಲು ಜಿಲ್ಲೆಯ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳವರ ಸನ್ನಿಧಾನಕ್ಕೆ ಗುರುವಾರ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಭೇಟಿ ನೀಡಿ ಗುರು ರಾಯರ ವೃಂದಾವನದ ದರ್ಶನ ಪಡೆದರು.
ಈ ವೇಳೆ ಮಾವಿನ ಹಣ್ಣುಗಳ (ಫಲ ಅರ್ಪಣೆ) ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಕಾಂಗ್ರೆಸ್ ಮುಖಂಡರಾದ ರಾಂಪ್ರಸಾದ್, ಎಪಿಎಂಸಿ ನೂತನ ಅಧ್ಯಕ್ಷ ಕಟ್ಟೇಮನೆ ನಾಗೇಂದ್ರ, ಮೋಕಾ ನಾಗರಾಜ್, ಎಸ್.ಆರ್.ನಾರಾಯಯಣ ರೆಡ್ಡಿ, ಉದ್ಯಮಿ ವೀರಾ ರೆಡ್ಡಿ, ಆಪ್ತರಾದ ರತ್ನಬಾಬು, ಎಲ್.ಎನ್.ಶಾಸ್ತ್ರಿ ಸೇರಿದಂತೆ ಹಲವರು ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ