ಗೋವಿಂದ ದಾಸ ಕಾಲೇಜಿನಲ್ಲಿ "ಕಾರ್ಗಿಲ್ ವಿಜಯ ದಿವಸ್"

Upayuktha
0


ಸುರತ್ಕಲ್‌: ನಾವು ನಮ್ಮ ಮನೆಗಳಲ್ಲಿ ಶಾಂತಿಯಿಂದ ಸುರಕ್ಷಿತವಾಗಿರಲು ನಮ್ಮ ನೆಲವನ್ನು ತಮ್ಮೆಲ್ಲ ಸುಖ ದುಃಖಗಳನ್ನು ತ್ಯಾಗ ಮಾಡಿ ಕಾಯುತ್ತಿರುವ ನಮ್ಮ ಸೈನಿಕರು ಕಾರಣ. ದೇಶ ಕಾಯುವ ಸೈನಿಕರನ್ನು ಗೌರವಿಸಿ ಅವರ ಪಥವನ್ನು ಬೆಂಬಲಿಸುವ ಕಾರ್ಯ ನಮ್ಮಿಂದಾಗಬೇಕು. ಆ ಮೂಲಕ ಸಮೃದ್ಧ ಶಾಂತಿಯುತ ಸುರಕ್ಷಿತ ದೇಶವನ್ನು ಕಟ್ಟುವ ಕಾರ್ಯದಲ್ಲಿ ನಾವೆಲ್ಲ ಭಾಗಿಗಳಾಗಬೇಕು ಎಂದು ಹಿಂದು ವಿದ್ಯಾದಾಯಿನೀ ಸಂಘ, ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ನುಡಿದರು.


ಅವರು ಹಿಂದು ವಿದ್ಯಾದಾಯಿನೀ ಸಂಘ, ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ ಎನ್.ಸಿ.ಸಿ ಘಟಕ ಹಮ್ಮಿಕೊಂಡ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು.


ಎನ್.ಸಿ.ಸಿ ಅಧಿಕಾರಿ ಕ್ಯಾ. ಡಾ. ಸುಧಾ ಯು., ಮತ್ತು ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ  ಕಾರ್ಗಿಲ್ ವಿಜಯ ದಿವಸ್‌ನ ಆಚರಣೆಯ ಪ್ರಾಮುಖ್ಯತೆಯನ್ನು ವಿವರಿಸಿದರು. ಸಿ.ಪಿ.ಎಲ್. ಮಿನೆಲ್ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಸೈನಿಕರ ಯಶೋಗಾಥೆಯ ಬಗ್ಗೆ ಮಾತನಾಡಿದರು.


ಉಪಪ್ರಾಚಾರ್ಯ ಪ್ರೊ. ನೀಲಪ್ಪ ವಿ., ಐಶೆ ಸಂಯೋಜಕ ಪ್ರೊ. ವಾಮನ ಕಾಮತ್, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ.,. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ. ಭಾಗ್ಯಲಕ್ಷ್ಮೀ, ಗ್ರಂಥಪಾಲಕಿ ಡಾ. ಸುಜಾತ ಬಿ., ಉಪನ್ಯಾಸಕಿಯರಾದ ದಯಾ ಸುವರ್ಣ, ವಿದ್ಯಾ ಸಿ. ಪಾಟೀಲ್, ಅದಿತಿ, ಅಪೇಕ್ಷಾ ಭಂಡಾರಿ, ಕಛೇರಿ ಅಧೀಕ್ಷಕ ವೆಂಕಪ್ಪ ಮೂಲ್ಯ ಉಪಸ್ಥಿತರಿದ್ದರು.  ಕಾರ್ಗಿಲ್ ಯುದ್ಧದಲ್ಲಿ ಪ್ರಾಣಾರ್ಪಣೆಗೈದ ಯೋಧರಿಗೆ ಪುಷ್ಪಾಂಜಲಿ ಸಲ್ಲಿಸಿದರು.


ಎನ್.ಸಿ.ಸಿ. ಕೆಡೆಟ್‌ಗಳಾದ  ಧನ್ಯಶ್ರೀ ರಾವ್ ಸ್ವಾಗತಿಸಿ, ನಿಶಾ ವಂದಿಸಿದರು. ಸಿ.ಪಿ.ಎಲ್. ಯುಕ್ತಿ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top