(ಮೋಸ್ಟ್ sensational ನೈಜ ಸುದ್ದಿ ಮತ್ತು ಕಾಲ್ಪನಿಕ ಭವಿಷ್ಯ..!)
ಅತಿ ಹೆಚ್ಚು ರೊಬೋ ಕಾರ್ಮಿಕರನ್ನು ಹೊಂದಿರುವ ದಕ್ಷಿಣ ದಕ್ಷಿಣ ಕೊರಿಯಾ ದೇಶದಲ್ಲಿ ವಿಚಿತ್ರ ಘಟನೆ ವರದಿಯಾಗಿದೆ. ದ.ಕೊರಿಯಾದ ಗುಮಿ ನಗರದಲ್ಲಿ ನಗರಸಭೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರೋಬೊ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಸುದ್ದಿಯಾಗಿದೆ.
ರೋಬೊದ ಈ ವರ್ತನೆ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಇದೊಂದು ಖಿನ್ನತೆಗೊಳಗಾದ ರೋಬೊ ಸಾವು ಎಂದು ವಿಶ್ಲೇಷಿಸಿದ್ದಾರೆ. 2023ರಿಂದ ನಗರಸಭೆ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸೈಬೋರ್ಗ್ ರೋಬೊ ನಿತ್ಯ ಬೆಳಿಗ್ಗೆಯಿಂದ ಸಂಜೆವರೆಗೆ ಎಲ್ಲರಂತೆ ಕೆಲಸ ನಿರ್ವಹಿಸುತ್ತಿತ್ತು.
ಕಳೆದ ಜೂನ್ 26ರಂದು ನಿತ್ಯ ಕೆಲಸದಲ್ಲಿದ್ದ ಈ ರೋಬೊ ಒಂದೇ ಜಾಗದಲ್ಲಿ ನಿಂತಂತೆ ಸುತ್ತು ಹಾಕಲು ಆರಂಭಿಸಿತು. ಬಳಿಕ ಸೀದಾ ನಡೆದುಕೊಂಡು ಹೋಗಿ 6 ಅಡಿ ಎತ್ತರದ ಮೆಟ್ಟಿಲುಗಳಿಂದ ಕೆಳಗೆ ಜಿಗಿಯಿತು. ಬಿದ್ದ ರೋಬೊ ನುಚ್ಚುನೂರಾಗಿದೆ ಎಂದು ವರದಿಯಾಗಿದೆ.
ತಜ್ಞರು ರೋಬೊ ದೇಹದ ಭಾಗಗಳ ಚೂರುಗಳನ್ನು ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಿದ್ದಾರೆ. ಈ ರೋಬೋದ ನಡವಳಿಕೆ ಊಹೆಗೂ ಮೀರಿದ್ದಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ರೋಬೋಟ್ ಸುಯಿಸೈಡ್, ವಿಶ್ವದಲ್ಲೇ ಮೊದಲ ಪ್ರಕರಣವಾಗಿದೆ.
(ಇದು ನೈಜ ಸುದ್ದಿ. ಕನ್ನಡದ ಬಹುತೇಕ ಪತ್ರಿಕೆಗಳೂ ಸೇರಿದಂತೆ, ರಾಷ್ಟ್ರೀಯ, ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಈ ಸುದ್ದಿ ಬಾರಿ ಸಂಚಲನ ಮೂಡಿಸಿದೆ)
**
ಆಶ್ಚರ್ಯ, ವಿಚಿತ್ರ, ವಿಸ್ಮಯಕಾರಿ, ಅನಿರೀಕ್ಷಿತ, ಶಾಕಿಂಗ್, ಬೆಚ್ಚಿಬೀಳುವ ಈ ರೋಬೋಟ್ ಆತ್ಮಹತ್ಯೆಯ ಸುದ್ದಿ ಓದಿದ ಮೇಲೆ, ಮುಂದಿನ ದಿನಗಳಲ್ಲಿ ಏನೇನು ಸಂಭವನೀಯ ಸುದ್ದಿಗಳು ಬರಬಹುದು!!?:
ರೋಬೋಗಳಿಂದ...
ಧಾರ್ಮಿಕ ಪ್ರತ್ಯೇಕತೆಗೆ ಆಗ್ರಹ,
ವಿಶ್ವದಲ್ಲಿ ಹೆಚ್ಚುತ್ತಿದೆ ರೋಬೋ ಧರ್ಮ,
ಹೊಸ ಜಾತಿ-ಜಾತಿ ಗಣನೆ,
ಮತಾಂತರ,
ಲವ್ ಜಿಹಾದ್,
ಸಿನಿಮಾ ನಟನೆ,
ಅಭಿಮಾನಿಗಳ ಸಂಘ ಸ್ಥಾಪನೆ,
ರಾಜಕೀಯ ಪ್ರವೇಶ,
ಭಿನ್ನಮತ,
ಪಕ್ಷಾಂತರ,
ಮಹಾ ಭ್ರಷ್ಟಾಚಾರ,
ಸನ್ಯಾಸ ದೀಕ್ಷೆ - ಮಠ ಸ್ಥಾಪನೆ,
ಪಾದಯಾತ್ರೆ,
ನೀಟ್ ಪರೀಕ್ಷೆ ಬರೆದು ವೈದ್ಯವೃತ್ತಿ,
ಲಾಯರ್ ಕೆಲಸ,
IAS ಪರೀಕ್ಷೆ ಉತ್ತೀರ್ಣ-ಕಾರ್ಯಾಂಗದಲ್ಲಿ ವೃತ್ತಿ,
ಟಿವಿ ಚಾನಲ್,
ಪೋಲೀಸ್ ಪಡೆ,
ಲೈಂಗಿಕ ದೌರ್ಜನ್ಯ,
ಶೆಡ್‌ಗೆ ಕರೆ ತಂದು ಕೊಲೆ,
ನ್ಯಾಯಾಂಗ ಬಂಧನ,
ಕೋರ್ಟ್ ವಿಚಾರಣೆ,
ಕಂಬಿ ಎಣಿಸುವಿಕೆ,
ರೋಬೋಸ್ತಾನ್-ಸಪರೇಟ್ ದೇಶಕ್ಕೆ ಆಗ್ರಹ,
ದೊಂಬಿ, ಪ್ರತಿಭಟನೆ,
ಬಾಂಬ್ ತಯಾರಿಕೆ,
ಮನು ಕುಲದ ಸರ್ವನಾಶ!
(ಕ್ಷಮಿಸಿ ಈ ಕೊನೆಯ ಸುದ್ದಿ ಓದುವ ಕಾಲಕ್ಕೆ, ನಾವೆಲ್ಲ ಯಾವುದಾದರು ಹುಣಸೇ ಮರದಲ್ಲಿ ನೇತಾಡ್ತಾ ಇರಬಹುದು!!?)
ಬ್ರೇಕಿಂಗ್ ನ್ಯೂಸ್ ಮುಕ್ತಾಯ!!!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ