ಜು.7ರಂದು ಪುರಭವನದಲ್ಲಿ ಭರತಾಂಜಲಿಯಿಂದ 'ನೃತ್ಯಾಮೃತಮ್-2024' ಸಂಭ್ರಮ

Upayuktha
0


ಮಂಗಳೂರು: ಭರತಾಂಜಲಿ ನೃತ್ಯ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವದ ಪ್ರಯುಕ್ತ 'ನೃತ್ಯಾಮೃತಮ್-2024' ನೃತ್ಯ ಸಂಭ್ರಮವು ಜುಲೈ 7ರಂದು ಭಾನುವಾರ ನಗರದ ಪುರಭವನದಲ್ಲಿ ಸಂಜೆ 4:30ರಿಂದ ನಡೆಯಲಿದೆ.


ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. 'ಕರ್ನಾಟಕ ಕಲಾಶ್ರೀ' ಗಳಾದ ಗುರು ಶ್ರೀಮತಿ ಕಮಲ ಭಟ್ ಹಾಗೂ ಗುರು ಶ್ರೀಮತಿ ರಾಜಶ್ರೀ ಉಳ್ಳಾಲ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.


ಅಂಕುರ, ವಲ್ಲರಿ, ತರು ಎಂಬ ಮೂರು ವಿಭಾಗಗಳಲ್ಲಿ ನೃತ್ಯ ತಂಡಗಳು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿವೆ ಎಂದು ಭರತಾಂಜಲಿ ಸಂಸ್ಥೆಯ ನೃತ್ಯ ಗುರುಗಳಾದ ವಿದ್ವಾನ್‌ ಶ್ರೀಧರ ಹೊಳ್ಳ ಮತ್ತು ವಿದುಷಿ ಪ್ರತಿಮಾ ಶ್ರೀಧರ್ ಅವರು ತಿಳಿಸಿದ್ದಾರೆ.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top