ಕದ್ರಿ: ಶ್ರೀ ಲಲಿತೆ ತಂಡದ "ಶನಿ ಮಹಾತ್ಮೆ" ನಾಟಕ ಮುಹೂರ್ತ

Upayuktha
0

ಮಂಗಳೂರು: "ರಂಗ ಸವ್ಯಸಾಚಿ ಕಿಶೋರ್ ಡಿ ಶೆಟ್ಟಿ ನೇತೃತ್ವದ ಶ್ರೀ ಲಲಿತೆ ಕಲಾವಿದರು (ರಿ) ತಂಡದ ಮೂಲಕ ಪ್ರದರ್ಶನ ಕಾಣಲಿರುವ "ಶನಿ ಮಹಾತ್ಮೆ" ತುಳು ಪೌರಾಣಿಕ ನಾಟಕವು ತುಳು ರಂಗ ಭೂಮಿಯಲ್ಲಿ ಸಂಚಲನ ಉಂಟು ಮಾಡಲಿದೆ" ಎಂದು ಕದಿರೆಯ ಕಲಾವಿದರು ಸಂಸ್ಥೆಯ ಅಧ್ಯಕ್ಷ ಗೋಕುಲ್ ಕದ್ರಿ ಶುಭ ಹಾರೈಸಿದರು.


ಕದ್ರಿಯಲ್ಲಿ ಇಂದು (ಜು.6) ಜರಗಿದ ಕದ್ರಿ ನವನೀತ ಶೆಟ್ಟಿ ವಿರಚಿತ ನೂತನ ಕಲಾಕೃತಿ "ಶನಿ ಮಹಾತ್ಮೆ" ನಾಟಕದ ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ತುಳು ಪೌರಾಣಿಕ, ಚಾರಿತ್ರಿಕ ನಾಟಕ ಪ್ರದರ್ಶನಗಳಿಗೆ ನೂತನ ವೇದಿಕೆ ಹಾಗೂ ಪ್ರೇಕ್ಷಕರನ್ನು ಸೃಷ್ಟಿಸಿದ ನಿಜ ಅರ್ಥದ ಕಲಾಪೋಷಕ ಕಿಶೋರ್ ಶೆಟ್ಟಿ" ಎಂದರು.


ಕದ್ರಿ ದೇವಸ್ಥಾನದ ಅರ್ಚಕ ಕೃಷ್ಣ ಅಡಿಗ ಅವರು ಕದ್ರಿಯ ಸಾಮೂಹಿಕ ಶನೀಶ್ವರ ಪೂಜಾ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಮಾಡಿ" ಶನಿ ದೇವರು ಬೇರೆ ಬೇರೆ ಯುಗಗಳಲ್ಲಿ ತೋರಿದ ಮಹಿಮೆಗಳನ್ನು ನಾಟಕ ರೂಪದಲ್ಲಿ ಶನಿ ದೇವರ ಭಕ್ತರಿಗೆ ಪ್ರಸ್ತುತ ಪಡಿಸುವುದು ಪುಣ್ಯ ಕಾರ್ಯ. ನಾಲ್ಕು ದಶಕ ಗಳಿಂದ "ಶನೀಶ್ವರ ಮಹಾತ್ಮೆ" ಯಕ್ಷಗಾನದಲ್ಲಿ ಅರ್ಥಧಾರಿಯಾಗಿ, ವೇಷಧಾರಿ ಪಡೆದ ಅನುಭವದ ಹಿನ್ನಲೆ ಯಲ್ಲಿ ಕದ್ರಿ ನವನೀತ ಶೆಟ್ಟಿ ಅವರು ರಚಿಸಿದ ಈ ನಾಟಕವು ಶನಿ ದೇವರ ಪೂರ್ಣ ಆಶೀರ್ವಾದ ಇದೆ" ಎಂದು ಶುಭ ಹಾರೈಸಿದರು.


ಕಟೀಲ್ದಪ್ಪೆ ಉಳ್ಳಾಲ್ದಿ, ಗರುಡ ಪಂಚಮಿ, ಬೀರೆ ದೇವು ಪೂಂಜೆ, ಕಾರ್ನಿಕದ ಶಿವ ಮಂತ್ರ, ತಿರುಪತಿ ತಿಮ್ಮಪ್ಪೆ, ಮಣ್ಣ್ ದ ಮಗಳ್ ಅಬ್ಬಕ್ಕ ಮೊದಲಾದ 17 ತುಳು, ಕನ್ನಡ ನಾಟಕಗಳ ಸಾವಿರಾರು ಪ್ರದರ್ಶನ ಗಳನ್ನು ದೇಶ ವಿದೇಶ ಗಳಲ್ಲಿ ನೀಡಿದ ಶ್ರೀ ಲಲಿತೆ ತಂಡದ ಪ್ರಬುದ್ಧ ಕಲಾವಿದರು ಹೊಸ ರಂಗ ವಿನ್ಯಾಸ ದೊಂದಿಗೆ "ಶನಿ ಮಹಾತ್ಮೆ" ನಾಟಕವನ್ನು ಆಗಸ್ಟ್ ತಿಂಗಳಲ್ಲಿ ಪ್ರದರ್ಶಿಸಲಿದ್ದಾರೆ.


ಕಿಶೋರ್ ಡಿ ಶೆಟ್ಟಿ, ಜೀವನ್ ಉಳ್ಳಾಲ್, ಪ್ರದೀಪ್ ಆಳ್ವ ಕದ್ರಿ, ಮೋಹನ್ ಕೊಪ್ಪಳ, ತಾರಾನಾಥ್ ಉರ್ವಾ, ಮಂಜು ಕಾರ್ಕಳ, ಯಾದವ ಮಣ್ಣಗುಡ್ಡೆ, ದಿನೇಶ್ ಕುಂಪಲ, ಹರೀಶ್ ಪಣಂಬೂರು, ನವೀನ್ ಶೆಟ್ಟಿ ಅoಬ್ಲಮೊಗರು, ಅಶ್ವಿನಿ, ಸ್ನೇಹ ಕುಂದರ್, ರಾಮಾಚಾರಿ ಮೊದಲಾದ ಕಲಾವಿದರು ಅಭಿನಯಿಸಲಿದ್ದಾರೆ.


"ಜೀವನ್ ಉಳ್ಳಾಲ್ ನಾಟಕ ನಿರ್ದೇಶನ, ಮೋಹನ್ ಕೊಪ್ಪಳ ಕದ್ರಿ ಸಮಗ್ರ ನಿರ್ವಹಣೆಯಲ್ಲಿ ಹೊಸ ರಂಗ ಪರಿಕರ, ವೇಷ ಭೂಷಣ ಗಳೊಂದಿಗೆ "ಶನಿ ಮಹಾತ್ಮೆ" ನಾಟಕವು ಅಭೂತ ಪೂರ್ವ ಯಶಸ್ಸು ಕಾಣಲಿ" ಎಂದು ಹಿರಿಯ ಕಲಾವಿದೆ ಸರೋಜಿನಿ ಶೆಟ್ಟಿ ಶುಭ ಹಾರೈಕೆ ಮಾಡಿದರು.


ಪ್ರದೀಪ್ ಆಳ್ವ ಕದ್ರಿ ನಿರೂಪಣೆ ಮಾಡಿದರು. ಶ್ರೀಮತಿ ಅಶ್ವಿನಿ ಧನ್ಯವಾದ ಸಮರ್ಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top