ಕೆನರಾ ಕಾಲೇಜಿನಲ್ಲಿ ಮಂಗಳೂರು ವಿ.ವಿ ಪರೀಕ್ಷೆ ಉತ್ತರ ಪತ್ರಿಕೆ ಮೌಲ್ಯಮಾಪನ ಶುಭಾರಂಭ

Upayuktha
0

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಪದವಿ ಪರೀಕ್ಷೆಗಳು ಮುಗಿದ ಬೆನ್ನಲ್ಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಕೆನರಾ ಕಾಲೇಜಿನಲ್ಲಿ ಆರಂಭಗೊಳ್ಳುತ್ತಿರುವ ಸಂದರ್ಭದಲ್ಲಿ ಮಂಗಳೂರು ವಿ.ವಿ ಉಪಕುಲಪತಿ ಡಾ ಪಿ.ಎಲ್ ಧರ್ಮ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಮಂಗಳೂರು ವಿ.ವಿಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಅವರಿಗೆ ಆಂಗ್ಲ ಭಾಷೆ ಶಿಕ್ಷಕರೇ ಆದರ್ಶಪ್ರಾಯರು.  ಭಾಷೆಯಲ್ಲಿ ಇನ್ನಷ್ಟು ಆಸಕ್ತಿ ಮೂಡುವಂತೆ ಕಲಿಕಾ ಪ್ರಕ್ರಿಯೆ ಇರಬೇಕು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ತೊಂದರೆಯಾಗದಂತೆ ಬಹಳ ಜಾಗರೂಕತೆಯಿಂದ ಮೌಲ್ಯಮಾಪನ ಕಾರ್ಯ ನಡೆಯಬೇಕು ಎಂದರು.


ಮಂಗಳೂರು ವಿ.ವಿ ರಿಜಿಸ್ಟ್ರಾರ್ ಡಾ.ದೇವೇಂದ್ರಪ್ಪ ಮಾತನಾಡಿ, ಪ್ರಸ್ತುತ ವರ್ಷ ಮೌಲ್ಯಮಾಪನ ಕಾರ್ಯದಲ್ಲಿ ತಾಂತ್ರಿಕವಾಗಿ ಸ್ವಲ್ಪ ಬದಲಾವಣೆ ಇದ್ದು ಅದರಲ್ಲಿ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಮತ್ತು ಸರಿಯಾಗಿ ಪಾಲಿಸಬೇಕು. ವಿಶ್ವವಿದ್ಯಾನಿಲಯದಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಬೇಕು ಎಂದು ನುಡಿದರು.


ಕಾಲೇಜು ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ.ಅಧ್ಯಕ್ಷತೆ ವಹಿಸಿದ್ದರು. ಆಂಗ್ಲ ಭಾಷಾ ಸಂಘದ ಅಧ್ಯಕ್ಷ  ವಿಕ್ಟರ್ ವಾಜ್ ಸ್ವಾಗತಿಸಿದರು. ಸಂಯೋಜಕಿ ಡಾ.ಕಲ್ಪನಾ ಪ್ರಭು ಜೆ, ಆಂಗ್ಲ ಭಾಷಾ ಬಿಒಇ ಅಧ್ಯಕ್ಷೆ ಪ್ರೊ. ಪದ್ಮಜಾ ಉಪಸ್ಥಿತರಿದ್ದರು. ಪ್ರೊ.ಸೋಜನ್ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top