ಮಂಗಳೂರು: ತಮಿಳುನಾಡು ರಾಜ್ಯ ಬಹುಜನ ಸಮಾಜ ಪಕ್ಷದ ಅಧ್ಯಕ್ಷರಾಗಿದ್ದ ಕೆ. ಆರ್ಮ್ ಸ್ಟ್ರಾಂಗ್ ರವರ ಹತ್ಯೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಎಸ್‌ಪಿ ಖಂಡಿಸಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಿದೆ.
ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ತಮಿಳುನಾಡು ಮುಖ್ಯಮಂತ್ರಿಯವರಿಗೆ ಮನವಿ ನೀಡಿರುವ ಜಿಲ್ಲಾ ಬಿ.ಎಸ್. ಪಿ. ಮುಖಂಡರು ಆರ್ಮ್ ಸ್ಟ್ರಾಂಗ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ನೀಡುವಂತೆ ಒತ್ತಾಯಿಸಿದ್ದಾರೆ. ಜುಲೈ 6ರಂದು ಚೆನ್ನೈಯಲ್ಲಿ ಆರ್ಮ್ ಸ್ಟ್ರಾಂಗ್ ಅವರ ಕೊಲೆ ಮಾಡಲಾಗಿತ್ತು.
ಇಂದು ಬಿ. ಎಸ್. ಪಿ. ದ. ಕ. ಜಿಲ್ಲಾ ಅಧ್ಯಕ್ಷ ರಾದ ಗೋಪಾಲ ಮುತ್ತೂರು, ಬಿಎಸ್ ಪಿ ಮುಖಂಡರಾದ ಕಾಂತಪ್ಪ ಅಲಂಗಾರ್, ದೇವಪ್ಪ ಬೋದ್, ಎಂ.ವಿ. ಪದ್ಮನಾಭ, ಲೋಕೇಶ್ ಮುತ್ತೂರು, ಪದ್ಮನಾಭ.ಕೆ ಹಾಗೂ ಕಿರಣ್ ಕುಮಾರ್ ಇವರುಗಳು ಪ್ರಭಾರ ಜಿಲ್ಲಾಧಿಕಾರಿ ಎಡಿಸಿ. ಸಂತೋಷ್ ಕುಮಾರ್ ರವರಲ್ಲಿ ಸಲ್ಲಿಸಿ ನೀಡಿ ಕೆ. ಆರ್ಮ್ ಸ್ಟ್ರಾಂಗ್ ರವರ ಹತ್ಯೆ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹ ಮಾಡಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ