ಕುಂಬಳೆ ಉಪಜಿಲ್ಲಾ ಮಟ್ಟದ ವಾಚನಾ ಮಾಸಾಚರಣೆ

Upayuktha
0


ಬದಿಯಡ್ಕ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕುಂಬಳೆ ಉಪ ಜಿಲ್ಲಾ ಘಟಕ ವತಿಯಿಂದ ವಾಚನ ಮಾಸಾಚರಣೆ ಕಾರ್ಯಕ್ರಮ ಸರಕಾರಿ ಪ್ರೌಢ ಶಾಲೆ ಪೆರಡಾಲದಲ್ಲಿ ನಡೆಯಿತು. ಶಾಲಾ ಮಟ್ಟದಲ್ಲಿ ಸ್ಪರ್ಧೆಗಳನ್ನು ನಡೆಸಲಾಗಿದ್ದು, ವಿಜೇತರಾದ ಎಲ್‌ಪಿ., ಯುಪಿ, ಹೈಸ್ಕೂಲ್ ವಿಭಾಗದ ಮಕ್ಕಳಿಗೆ ಉಪ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ನಡೆಸಲಾಯಿತು.


ಬಳಿಕ ನಡೆದ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲರಾದ ಡಾ.ಬೇ.ಸಿ. ಗೋಪಾಲಕೃಷ್ಣ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕರ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ಶ್ರೀಕುಮಾರ್ ಪಂಜಿತ್ತಡ್ಕ ವಹಿಸಿದ್ದರು.


ಮುಖ್ಯ ಅತಿಥಿಯಾಗಿ ಸಂಘಟನೆಯ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬೇಳ, ಕೋಶಾಧಿಕಾರಿ ಶರತ್ ಕುಮಾರ್ ಉಪಸ್ಥಿತರಿದ್ದರು. ಕವಿತಾ ಹಾಗೂ ಶಶಿಧರ ಕುದಿಂಗಿಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿತು. ಕುಂಬಳೆ ಘಟಕದ ಕಾರ್ಯದರ್ಶಿ ನವಪ್ರಸಾದ್ ಸ್ವಾಗತಿಸಿದರು. ಸದಸ್ಯರಾದ ಹರಿಣಾಕ್ಷಿ ವಂದಿಸಿದರು.


ಸ್ಪರ್ಧೆಗಳ ಫಲಿತಾಂಶ:


ಎಲ್ ಪಿ ವಿಭಾಗ ಓದಿನ ಸ್ಪರ್ಧೆ

  • ಪ್ರಥಮ: ಧೃತಿ ಯು ರೈ, ಜಿ ವಿ ಎಚ್ ಎಸ್ ದೇಲಂಪಾಡಿ
  • ದ್ವಿತೀಯ: ಕೆ ಶ್ರೀವಿದ್ಯಾ, ವಿ ಎ ಎಲ್ ಪಿ ಎಸ್ ನಲ್ಕ 
  • ತೃತೀಯ: ಹಿಬಾ ಮರಿಯಂ ಎಮ್, ಜಿ ಎಚ್ ಎಸ್ ಎಸ್ ಆದೂರು


ಯು.ಪಿ ವಿಭಾಗ ಕಥಾಸ್ವಾದನಾ ಟಿಪ್ಪಣಿ

  • ಪ್ರಥಮ: ಪ್ರಣತಿ ಯನ್, ಎಂ ಎಸ್ ಸಿ ಎಚ್ ಎಸ್ ಎಸ್ ನೀರ್ಚಾಲು
  • ದ್ವಿತೀಯ: ದ್ಯುತಿ ಎ ಯು ಪಿ ಎಸ್ ಮುಳ್ಳೇರಿಯಾ
  • ತೃತೀಯ: ಶ್ರೇಯ ಬಿ, ಜಿ ವಿ ಎಚ್ ಎಸ್ ಎಸ್ ಕಾರಡ್ಕ


ಪ್ರೌಢಶಾಲಾ ವಿಭಾಗ ಕವಿತಾಸ್ವಾದನಾ ಟಿಪ್ಪಣಿ

  • ಪ್ರಥಮ: ಗ್ರೀಷ್ಮ ಬಿ, ಎಸ್ ಎಸ್ ಎಚ್ ಎಸ್ ಎಸ್ ಕಾಟುಕುಕ್ಕೆ
  • ದ್ವಿತೀಯ: ರಕ್ಷಾ, ಜಿ ಎಚ್ ಎಸ್ ಸೂರಂಬೈಲು
  • ತೃತೀಯ: ವೀಕ್ಷಿತ ಪವಾರ್, ಜಿ ವಿ ಎಚ್ ಎಸ್ ಎಸ್ ಕಾರಡ್ಕ

Post a Comment

0 Comments
Post a Comment (0)
To Top