ಬೆಂಗಳೂರು ಮುಳಿಯದಲ್ಲಿ ಮುಳಿಯ ಪಾಕೋತ್ಸವ

Upayuktha
0


 

ಬೆಂಗಳೂರು: ಮುಳಿಯ ಜ್ಯುವೆಲ್ಸ್ ಹಾಗೂ ಸಂಧ್ಯಾ ಜಯರಾಮ್ ಸಹಯೋಗದಲ್ಲಿ ಡಿಕೆನ್ಸನ್ ರಸ್ತೆಯಲ್ಲಿನ ಮಣಿಪಾಲ್ ಸೆಂಟರ್ ಆವರಣದಲ್ಲಿ ಮುಳಿಯ ಪಾಕೋತ್ಸವ ಭಾನುವಾರ ನಡೆಯಿತು.


ಕಾರ್ಯಕ್ರಮವನ್ನು ವಿಜಯಲಕ್ಷ್ಮೀ ಎಂ.  ಉದ್ಘಾಟಿಸಿದರು.  ಅಧ್ಯಕ್ಷತೆಯನ್ನು ಮುಳಿಯ ಜ್ಯುವೆಲ್ಸ್ ಸಿ.ಎಂ.ಡಿ. ಕೇಶವ ಪ್ರಸಾದ್ ಮುಳಿಯ ವಹಿಸಿದ್ದರು. ಖ್ಯಾತ ಹಿನ್ನಲೆ ಗಾಯಕಿ ಶ್ವೇತ ಪ್ರಭು ಉಪಸ್ಥಿತರಿದ್ದರು.


ಪಾಕೋತ್ಸವದಲ್ಲಿ ಶ್ರೀಮಾನ್- ಶ್ರೀಮತಿ ವಿಭಾಗದಲ್ಲಿ ಪುಷ್ಪಲತಾ- ಕೃಷ್ಣಾನಂದ ಪ್ರಥಮ, ಸವಿತಾ- ಸುರೇಶ್ ದ್ವಿತೀಯ, ಲಾವಣ್ಯ - ನವೀನ್ ತೃತೀಯ ಸ್ಥಾನ ಪಡೆದರು. ಬಂಧು-ಮಿತ್ರರು ವಿಭಾಗದಲ್ಲಿ ದಿವ್ಯಾ- ಹರ್ಷಿಕಾ ಪ್ರಥಮ, ಹೇಮಾವತಿ- ಜ್ಞಾನೇಶ್ವರಿ- ಮೈತ್ರಿ ಭಟ್ ದ್ವಿತೀಯ, ಮಹಾಲಕ್ಷ್ಮೀ ತೃತೀಯ ಸ್ಥಾನ ಪಡೆದರು. ಲಕ್ಕಿ ಡ್ರಾದಲ್ಲಿ ಕೃತಿಕಾ ಅಕ್ಷಯ್ ಜೋಶಿ ಪ್ರಥಮ, ಸರೋಜಾ ದ್ವಿತೀಯ ಸ್ಥಾನ ಗಳಿಸಿದರು.


ಪಾಕಶಾಲಾ ನಿರ್ದೇಶಕಿ ವಿನೋದ ವಿ.ಅಡಿಗ ಮಾತನಾಡಿ, ಚಿನ್ನ ಮತ್ತು ಅನವು ಮಹಿಳೆಯರಿಗೆ ತುಂಬಾ ಹತ್ತಿರವಾಗಿದೆ. ಆದರೆ ಇಂದು ಬೆಂಕಿ ಉಪ ಯೋಗಿಸದೇ ನಡೆದ ಸ್ಪರ್ಧೆಯೂ ತುಂಬಾ ಕುತೂಹಲವಾಗಿದ್ದು, ಹಸಿ ತರಕಾರಿ, ಹಣ್ಣು ಗಳಿಂದ ತಯಾರಿಸಿದ ಆಹಾರವು ಆರೋಗ್ಯಕ್ಕೆ ತುಂಬಾ ಮುಖ್ಯ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.


ಸಂಧ್ಯಾ ಜಯರಾಮ್, ಮುಳಿಯ ಜ್ಯುವೆಲ್‌ನ ವೇಣು ಶರ್ಮಾ, ಸುಬ್ರಹ್ಮಣ್ಯ ಭಟ್, ಖಾಸಗಿ ಸುದ್ದಿವಾಹಿನಿ ನಿರೂಪಕಿ ನಮಿತಾ ಜೈನ್ ಮತ್ತಿತರರು ಇದ್ದರು.


Post a Comment

0 Comments
Post a Comment (0)
To Top