ಖಾರ ಮಸಾಲೆ: ಮುಡ ಮುಡಕೆ ಆನಾ- ಸೈಟ್ ಲೇಕೆ ಜಾನಾ

Upayuktha
0

- ಶ್ರೀನಿವಾಸ ಜಾಲವಾದಿ, ಸುರಪುರ


'ನನಗ ಹಂಗ ನೋಡಿದ್ರ ಗೌರ್ಮೇಂಟ್ 68 ಕೋಟಿ ಕೊಡ್ಬೇಕು' ಗಾಳ್ಯಾ ಹೇಳಿದ.

'ಯಾಕ? ಯಾಕ ಕೊಡ್ಬೇಕು? ನೀ ಏನ್ ವಿಶ್ವಕಪ್ ಎತ್ತಿ ಹಿಡ್ದಿ ಏನು?' ಕುಂಬ್ಯಾ ಗುಮ್ಮಿದ.

'ಏ ನನ್ನ ಹೆಣ್ತಿ ಹೆಸರಲೇ ಇತ್ತಲಾ ಆ ಜಾಗಾ ತಗೊಂಡತಿ ಸರ್ಕಾರ, ಅದ್ಕs ಪರಿಹಾರ ಕೊಡ್ಬೇಕಲೇ' ಎಂದ ಸಿಟ್ಟಲೇ ಗಾಳ್ಯಾ.

'ಏ ಮತ್ತs ಉಳಿಕದವ್ರಿಗೆ ಒಂದು ನ್ಯಾಯ ನಿನಗೊಂದ ಬ್ಯಾರೇ ಏನು?' ಎಂದ ಕುಂಬ್ಯಾ

'ಏ ಮತ್ತ ನಾ ಮದ್ಲಿಂದನೂ ಬ್ಯಾರೇನೇ ಅದಿನಲಾ?' ಗಾಳ್ಯಾ ಹೇಳಿದ.

'ಮತ್ತ ಕುಮ್ಮಣ್ಣ ಹೇಳ್ದಾ, ಆ ಸುರೇಶ ಎಲ್ಲಾ ಡಾಕ್ಯೂಮೆಂಟ್ಸ್ ಫ್ಲೈಟ್ನಾಗ ಎತ್ಗೊಂಡು ಹೋಗ್ಯಾನಂತಲಾ ತಾಬಡ ತೋಬಡ್' ಎಂದ ಸ್ಟೀಲ್.


'ಏ ಇಲ್ಲೇಳು ಎಲ್ಲಾ ಆ ಬಂಡೆಂದೆ ಕೈವಾಡೈತೆ ಇದ್ರಾಗ' ಎಂದ ಉರಿದು ಹೋದ ಗಾಳ್ಯಾ.

'ಆದ್ರೂ ಹದನಾಲ್ಕ ಸೈಟಂದ್ರ ಭಾಳಾತು ತಗೋ' ಎಂದ ಸ್ಟೀಲ್.

'ಮುಡಿ ಕೊಟ್ಟೇನಿ ನಾನು ಅದನ್ನ ಪಡ್ಯಾಕ' ಎಂದ ಗಾಳ್ಯಾ.

'ಮತ್ತ ಮಗ್ಗಿಲಕಿನವ್ರಿಗೂ ಅಷ್ಟ ಕೊಡ್ಬೇಕಲಾ?' ಎಂದ ಕುಮ್ಯಾ.

'ನಾ ಸಮಾಜ ಸೇವಾ ಮಾಡಿನಿ,ನನ್ಗ ಅವ್ನಿಗಿ ಹೋಲಸ ಬ್ಯಾಡ್ರಿ' ಅಂದ ಗಾಳ್ಯಾ.

'ಗಾಂಧಿ ಸಮಾಜಸೇವಾ ಮಾಡಿ ಏನೂ ತಗೊಳಿಲ್ಲಲಾ ಮತ್ತs?' ಎಂದ ಸ್ಟೀಲ್.

'ಏ ಹೋಗಿ ಹೋಗಿ ನೀ ತೇನಿಮನಿ ಕಮಲಕ್ಕನ ಚಾಳಿ ಕಲ್ತಿದೇಲಾ?' ಎಂದ ಸಿಟ್ಟಲೇ ಗಾಳ್ಯಾ.

'ಅದ್ರಾಗ ನಂಗೊಂದೆರಡು ಕೊಡು ಅಂದ್ರs ನಿಂದೇ ಖರೇ ಮಾಡಸ್ತಿನಿ' ಅಂತ ನಕ್ಕ ಸ್ಟೀಲ್.

'ಏ ನಂಗೇ ಇನ್ನಾ ಕಡಿಮಿ ಬಿದ್ದಾವು,ಇವೊಬ್ಬ ಬಂದಾನ ಅದ್ರಾಗೇ ಮಾರಿ ತೂರಸ್ಲಕ' ಗಾಳ್ಯಾ ಠಳಾಯಿಸಿದ.

'ಹಂಗಾದ್ರs ಆ ಅತೃಪ್ತ ವಿಶ್ವಗ ಹೇಳ್ತಿನಿ ತಡಿ ಅಂವಾ ನಾತ ಹಬ್ಬಸ್ತಾನು' ಅಂತ ಸ್ಟೀಲ್ ಎದ್ದು ಹೊಂಟ ಗಾಳ್ಯಾನ್ನ ಗಬ್ಬೇಬ್ಬಿಸಲು.

'ಏ ನಿಂದರಲೇ ಕುರ್ಸಾಲ್ಯಾ' ಅಂತ ಗಾಳ್ಯಾ ಅವನ ಬೆನ್ನು ಹತ್ತಿದ.

'ಹಂ....ಹಂ... ಏನು ಹೇಳು ಜಲ್ದಿ, ಹಮ್ ಕೋ ಟೇಮ್ ನಹಿ ಹೈ' ಎಂದ ಗಾಳ್ಯಾ.

'ತುಮ್ಕೋ ಟೈಮ್ ನಹೀ ಹೈ ತೋ ಕ್ಯಾ ಹಂ ಕೋ ಥೋಡಾ ಟೈಂ ದೇನಾ ಪಡ್ತಾ ಹೈ' ಎಂದು ನಕ್ಕ ಬಾಶಾ

'ಏ ಎನ್ ಹಚ್ಚಿಯಲೇ ಯಪ್ಪಾ ಲಗೂನೇ ಹೇಳು' ಎಂದ ಗಾಳ್ಯಾ.


'ಏನಿಲ್ಲಾ ನಾ ಅಲ್ಲಲ್ಲ ನನ್ನ ಹೆಣ್ತಿ ಕಾಯ್ದೆಶೀರ 14 ಸೈಟ್ ಪಡ್ಕೊಂಡಾಳು, ಅದು ನಿನಗ ಸರಿ ಕಾಣದಿದ್ರs ನಾ ಸರ್ಕಾರಕ್ಕೆ ಹೊಳ್ಳಿ ಕೊಡ್ತಿನಿ' ಅಂತ ಗಾಳ್ಯಾ ಸಣ್ಣಗೆ ಪೀಠಿಕೆ ಹಾಕಿದ.

'ಅಲಲಾs..... ಇಂವಾ ಇನ್ನ ಹೊಡಿಲಾರ್ದೆ ಬಡಿಲಾರ್ದೆನೇ ದಾರಿಗೆ ಬಂದ್ನಲ್ಲಪಾ' ಎಂದ ಸ್ಟೀಲ್

'ಹಂ ಮತ್ತs ......, ಒಂದೊಂದೆ ಕುತಗಿಗಿ ಬಿಗ್ಯಾಕಂತಾವು ಮತ್ತs ಏನ್ ಮಾಡೇತಿ ಆಸಾಮಿ' ಅಂತ ನಕ್ಕಳು ರಾಣಿ

'ಏ ಹಂಗೇನಿಲ್ಲಾ ಹಂಗೇನಿಲ್ಲ ತಗಿ' ಎಂದು ತಲೆ ಜಾಡಿಸಿದ ಗಾಳ್ಯಾ

'ಆಯ್ತು ಮತ್ತs ಈ ಮುಡಮುಡ್ಕಿ ಆ ವಾಲ್ಮೀಕಿ ರಾಮಾಯಣ ಮತ್ತ ಟ್ಯೂರಿಸಂ........' ಅಂತ ನಕ್ಕಳು ರಾಶಿ

'ಸಾಕಾ ಇನ್ನಾ ಬೇಕಾ?' ಎಂದ ಸ್ಟೀಲ್

'ಏ ಆ ವಿಶ್ವಗ ಕೇಳಬೇಕು ಇನ್ನಾ ಹೊಸಾ ಹೊಸಾವು ಹಗರಣ ಹೊರಗೆ ತಗಿತಾನು' ಎಂದ ಬಾಶಾ


'ಏ ಅಂವಗ್ಯಾಕಲೇ ನಮ್ಮ ಟಾವೆಲ್ ಕಿಂಗ್ ಬಂಡೆಗ ಹೇಳಿದ್ರs ಸಾಕು ಎಲ್ಲಾ ಡಾಕ್ಯುಮೆಂಟ್ಸ್ ನೀ ಕುಂತಲ್ಲೇ ಕಳಸ್ತಾನು' ಅಂತ ಟಕಳು ಗುಮ್ಮಿದ

'ಅಂವಗ 'ಟಾವೆಲ್ ಕಿಂಗ್ 'ಅಂತ ಹೇಳಿ ಆ ಕುಮ್ಮಣ್ಣ ಮೊನ್ನೆ ತಾನೇ ಸನ್ಮಾನ ಮಾಡಿ ಬಿರುದು ಕೊಟ್ಟಾನ' ಅಂತ ವ್ಯಂಗವಾಗಿ ಹೇಳಿದಳು ರಾಣಿ

'ಅದ್ಕೆs ಈ ಟಾವೆಲ್ ಚನಪಟ್ಣದ ಗೊಂಬೆ ಖರೀದಿ ಮಾಡಿ ಅದ್ಕ ದಕ್ಷಿಣೆ ಕೊಟ್ಟು ಬೆಂದಕಾಳೂರಕ ಸೇರಿಸಬೇಕಂತ ಮಾಡೇತಿ' ಎಂದ ಕಾಳ್ಯಾ.

'ಈಗ ಇದ್ದದ್ದನ್ನ ಚಂದಂಗೆ ಇಡ್ಲಿಕ್ಕೆ ನೋಡಿಕೊಳ್ಳಿಕ್ಕೆ ಆಗೊಲ್ತು ಇನ್ನ ಅದ್ನನೊಂದು ತಂದು ಇದ್ರಾಗ ಸೇರಿಸಿ ಹಂಪ ಹರಿತಾರೇನು?' ಎಂದ ಸ್ಟೀಲ್.

'ಎಲ್ಲಾ ಗಬ್ಬೆಬ್ಬಿಸಿ ಜನರ ಬಾಳ ಹಾಳ ಮಾಡಿ ತಮ್ಮ ಖಜಾನೆ ತುಂಬ್ಸಿಕೊಂಡು ಮಜಾ ನೋಡವ್ರು ಇವರು' ಎಂದಳು ರಾಣಿ.

'ಮಜಾ ಅನ್ನೂನ ಮಜಾ ಟಾಕೀಜ್ ನೆಪ್ಪ ಆತು ನೋಡು' ಎಂದಳು ರಾಶಿ.


'ಯಾಕ? ಏನಾತು?' ಎಂದ ಕಾಳ್ಯಾ

'ಅದೇ ಚಂದದ ದನಿಯ ವಿನಯವಂತ ಅಪರ್ಣಾ ಮೊನ್ನೆ ತೀರಿಕೊಂಡಳಲಾ? ಎಂಥಾ ದುರಂತ' ಎಂದಳು ರಾಶಿ.

'ಕನ್ನಡದ ಕಂದ ಅಂದದ ಮಕರಂದ 'ಮಸಣದ ಹೂ' ಧರಿಸಿದಳಲಾ' ಎಂದಳು ರಾಣಿ.

'ಮೆಟ್ರೊದಾಗ ಇನ್ನಾ ಅಮರ ಐತಿ ಆಕಿ ದನಿ' ಎಂದಳು ರಾಶಿ.


'ಕನ್ನಡ ಎಷ್ಟು ಚಂದ ಐತಿ ಅನ್ನೊದನ್ನ ಅಪರ್ಣಾ ತೋರಿಸಿಕೊಟ್ಟಳು, ಆಕಿ ಕನ್ನಡಮ್ಮನ ವರಪುತ್ರಿ' ಎಂದಳು ರಾಣಿ.

'ಈ ಸೈಟ್ ರೊಕ್ಕಾ ಹೊಡೆವ್ರ ಮಧ್ಯೆ ಇಂತಹ ಹೂವುಗಳು ಮಾತ್ರ ಮನಕ್ಕೆ ಆನಂದ ಕೊಡ್ತಾವು ನೋಡು' ಎಂದ ಸ್ಟೀಲ್.

'ಸರಿ ನಡ್ರಿ ಆ ವಿಶ್ವನ ಕಡೆ ಹೋದ್ರs ಎಲ್ಲಾ ರೆಕಾರ್ಡ್ಸ್ ಸಿಗ್ತಾವು, ರೂಲಿಂಗ್ ಮತ್ತ ಅಪೋಜಿಶನ್ಸದ್ದು ತರೋಣ ಬರ್ರಿ' ಅಂತ ಸ್ಟೀಲ್ ಎಲ್ಲಾರನ್ನು ಕರಕೊಂಡು ಹೊಂಟ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top