ಪದ್ಮನಾಭ ಪಕ್ಷಿಕೆರೆ ಅವರಿಗೆ ಕಲ್ಯಾಣ ಗುರುದೇವ ಪ್ರಶಸ್ತಿ

Upayuktha
0


ಮಂಗಳೂರು: ಖ್ಯಾತ ಹವ್ಯಾಸಿ ಯಕ್ಷಗಾನ ಮದ್ದಳೆಗಾರ ಪಕ್ಷಿಕೆರೆ ಪದ್ಮನಾಭ ಶೆಟ್ಟಿಗಾರ್ ಅವರಿಗೆ ಮುಂಬೈ ಕಲ್ಯಾಣದ ಶಾರದಾ ಭಾಸ್ಕರ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ "ಗುರುದೇವ ಕಲಾ ಪ್ರಶಸ್ತಿ" ನೀಡಿ ಗೌರವಿಸಲಾಯಿತು.


ಮಹಾರಾಷ್ಟ್ರ ಕಲ್ಯಾಣನ ಹೋಟೆಲ್ ಗುರುದೇವ್ ಗ್ರ್ಯಾಂಡ್ ನ ಸಭಾಂಗಣದಲ್ಲಿ ಗುರುದೇವ್ ಹೋಟೆಲ್ ಸಮೂಹ ಸಂಸ್ಥೆಗಳ ಸ್ಥಾಪಕ ಎಕ್ಕಾರು ನಡ್ಯೋಡಿಗುತ್ತು ಭಾಸ್ಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ  ಸನ್ಮಾನ ಕಾರ್ಯಕ್ರಮ ನಡೆಯಿತು. ಭೀವಂಡಿ -ಬದ್ಲಾಪುರ ಬಂಟ್ಸ್ ಕಾರ್ಯಧ್ಯಕ್ಷ ಶುಭೋದ್ ಭಂಡಾರಿ, ಶ್ರೀಕಾಂತ್ ಶೆಟ್ಟಿ ನಡ್ಯೋಡಿ ಗುತ್ತು, ಸಂಘಟಕ ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು, ಪ್ರಸನ್ನ ಶೆಟ್ಟಿ ಅತ್ತೂರು ಗುತ್ತು , ಹೇಮಂತ್ ಶೆಟ್ಟಿ ಉಪಸ್ಥಿತರಿದ್ದರು.


ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನದ ಚೆಂಡೆ ಮದ್ದಳೆ ವಾದಕರಾಗಿ ಆಟ ಕೂಟಗಳಲ್ಲಿ ಭಾಗವಹಿಸಿ, ನೂರಾರು ಪೂಜಾ ಸಹಿತ ಶನೀಶ್ವರ ಪೂಜಾ ಸಹಿತ ತಾಳಮದ್ದಳೆಗಳನ್ನು ತುಳುನಾಡು, ಮುಂಬೈ, ದುಬೈ, ಅಬುದಾಬಿ, ಮಸ್ಕತ್ ಗಳಲ್ಲಿ ಸಂಘಟಿಸಿರುವ, ಪಕ್ಷಿಕೆರೆ ಶನೀಶ್ವರ ಭಕ್ತ ವೃoದದ ಪ್ರಧಾನ ಸಂಚಾಲಕ ಪದ್ಮನಾಭ ಶೆಟ್ಟಿಗಾರರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು.


ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ಸದಾಶಿವ ಆಳ್ವ ತಲಪಾಡಿ ವಂದಿಸಿದರು.


ಮುಂಬೈ ಯಕ್ಷಯಾನ ದ ಪಕ್ಷಿಕೆರೆ ತಂಡದವರಿಂದ ಹರೀಶ್ ಶೆಟ್ಟಿ ಸೂಡ ವಿರಚಿತ "ತುಳುನಾಡ ಬಲೀoದ್ರ" ತಾಳಮದ್ದಳೆ ಜರಗಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top