ಕಲ್ಬುರ್ಗಿ: ರಂಗಮಾಧ್ಯಮ ಸಂಸ್ಥೆಯವರು ಸುವರ್ಣ ಮಹೋತ್ಸವದ ಅಂಗವಾಗಿ ಕೊಡಮಾಡುವ ರಂಗ ಸುವರ್ಣ ಪ್ರಶಸ್ತಿಗೆ ಭಾಜನರಾದ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅವರನ್ನು ಕಲ್ಬುರ್ಗಿಯ ಸಿರಿಗನ್ನಡ ವೇದಿಕೆ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಲ್ಬುರ್ಗಿಯಲ್ಲಿ ಜುಲೈ 21ರಂದು ನಡೆದ ಸರಳ ಸಮಾರಂಭದಲ್ಲಿ ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷರು ಹಾಗೂ ಸಾಹಿತಿಗಳಾದಡಾ. ಗವಿಸಿದ್ದಪ್ಪ ಪಾಟೀಲ್ ಅವರು ಸನ್ಮಾನಿಸಿ ಮಾತನಾಡುತ್ತ ಡಾ. ಸದಾನಂದ ಪೆರ್ಲ ಅವರು ಆಕಾಶವಾಣಿ ಮತ್ತು ದೂರದರ್ಶನ ಮಾಧ್ಯಮಗಳ ಮೂಲಕ ಸಂಸ್ಕೃತಿಕ ಜಗತ್ತನ್ನು ಬೆಳೆಸಲು ಅನುಪಮ ಕೊಡುಗೆ ನೀಡಿದ್ದಾರೆ ಮಾತ್ರವಲ್ಲದೆ ಡಾ.ಚೆನ್ನಣ್ಣ ವಾಲಿಕಾರ್ ಅವರ ಕಾದಂಬರಿ ಆಧಾರಿತ "ಬೆಳ್ಯ'', ಸಂಧ್ಯಾ ಹೊನಗುಂಟಿಕರ್ ರವರ"ಖರೇವೆಂದ್ರ ತಪ್ಪು", ಡಾ. ವಿಕ್ರಂ ವಿಸಾಜಿಯವರ "ರಸಗಂಗಾಧರ" ಮುಂತಾದ ನಾಟಕಗಳನ್ನು ಬಾನುಲಿಗೆ ಅಳವಡಿಸಿ ರಾಜ್ಯವ್ಯಾಪಿ ಬಿತ್ತರಿಸಿದ್ದರು. ಜೊತೆಗೆ ಮಾಧ್ಯಮ ರಂಗದಲ್ಲಿ ಸಾಂಸ್ಕೃತಿಕವಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇವರನ್ನು ಕಲಬುರ್ಗಿಯ ಖ್ಯಾತ ರಂಗಮಾಧ್ಯಮ ಸಂಸ್ಥೆಯು "ರಂಗ ಸುವರ್ಣ" ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸುವುದು ಶ್ಲಾಘನೀಯ ಕೆಲಸ ಎಂದರು.
ಈ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆ ಪ್ರಧಾನ ಕಾರ್ಯದರ್ಶಿ.ಡಾ.ಸಿದ್ಧಪ್ಪ ಹೊಸಮನಿ, ಉಪನ್ಯಾಸಕರಾದ ಡಾ.ರಾಜಕುಮಾರ ಮಾಳಗೆ, ಶರಣಯ್ಯ ಗುತ್ತೇದಾರ್, ಅಶೋಕ್ ಸಂಕಲಾಪುರ್, ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ರವಿ ಬೆಹರೆ ಹಾಗೂ ಸಂತೋಷ್ ಚೌಧರಿ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ