ಮಂಗಳೂರು: ಕಲಾಶಾಲೆ ಅರ್ಪಿಸುವ 83 ನೇ ಸ್ವರ ಲಯ ಸಾಧನಾ ಮಾಸಿಕ ಕಾರ್ಯಕ್ರಮವು ನಾಳೆ (ಜುಲೈ 28- ಭಾನುವಾರ) ಯೆಯ್ಯಾಡಿಯ ಶ್ರೀ ಶಂಕರ ಭವನ ಹೊಟೇಲ್‌ನಲ್ಲಿ ಅಪರಾಹ್ನ 3 ರಿಂದ 6 ರವರೆಗೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪಾಲ್ಗೊಳ್ಳಲಿದ್ದಾರೆ. ಸಂಗೀತ ಕಲಿಯುವ ಮಕ್ಕಳೊಂದಿಗೆ ಅವರು ಸಂವಾದಾತ್ಮ ನಡೆಸಲಿದ್ದಾರೆ ಎಂದು ಕಲಾಶಾಲೆಯ ಮುಖ್ಯಸ್ಥರು ಹಾಗೂ ವಯೊಲಿನ್ ವಿದ್ವಾನ್ ವಿಶ್ವಾಸ್ ಕೃಷ್ಣ ಅವರು ತಿಳಿಸಿದ್ದಾರೆ.
ಕಳೆದ 82 ತಿಂಗಳುಗಳಿಂದ, ಕಲಾಶಾಲೆಯು ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಶಿಬಿರಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳಿಗೆ ಉನ್ನತ ದರ್ಜೆಯ ಅಂತರರಾಷ್ಟ್ರೀಯ ಸಂಗೀತಗಾರರಿಂದ ಕಲಿಯಲು ವೇದಿಕೆಯನ್ನು ಒದಗಿಸುತ್ತಿದೆ. ಸಮುದಾಯದಲ್ಲಿ ಸಂಗೀತ ಪ್ರತಿಭೆಗಳನ್ನು ಬೆಳೆಸುವ ಬದ್ಧತೆಯಿಂದ ಈ ಶಿಬಿರಗಳನ್ನು ಉಚಿತವಾಗಿ ನಡೆಸಲಾಗುತ್ತಿದೆ. ಈ ಸರಣಿ ಕಾರ್ಯಕ್ರಮ ಗಳಿಂದ ಇಲ್ಲಿನ ಹಲವಾರು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ