ಮಂಗಳೂರು: ಹೊಸ ರೀತಿಯ ಯೋಚನೆಗಳನ್ನು ಮನೋರಂಜನೆಯ ಹೂರಣದಲ್ಲಿ ಜನರ ಮುಂದೆ ಇಡುವ ಇಂತಹ ಪ್ರಯತ್ನಗಳಿಗೆ ಕೈ ಜೋಡಿಸಲು ತುಂಬಾ ಖುಷಿ ಎನಿಸುತ್ತದೆ ಎಂದು ಖ್ಯಾತ ಮಲಯಾಳಂ ನಿರ್ದೇಶಕ, ನಟ, ಸಾಹಿತಿ, ರಾಜ್ಯ ಪ್ರಶಸ್ತಿ ವಿಜೇತ ತಾರೆ ಜೆಯೋ ಬೇಬಿ ಹೇಳಿದರು.
ಇದು ಎಂಥಾ ಲೋಕವಯ್ಯಾ ಸಿನೆಮಾ ನಮ್ಮ ನಿಮ್ಮ ನಡುವಿನ ಸಾಮಾನ್ಯ ವ್ಯಕ್ತಿಗಳ ಬದುಕಿನ ಒಳತಿರುಳನ್ನು ಅಚ್ಚುಕಟ್ಟಾಗಿ ತೆರೆದಿಡುವಲ್ಲಿ ಯಶಸ್ವಿಯಾಗಿದೆ. ಮಲಯಾಳಂ ಭಾಷಿಗನಾಗಿ ಈ ಸಿನೆಮಾ ಹೃದಯಸ್ಪರ್ಶಿಯಾದ ಕಾರಣ ಇದರೊಂದಿಗೆ ಕೈಜೋಡಿಸಿದೆ ಎಂದು ಅವರು ತಿಳಿಸಿದರು.
"ಇದು ಎಂಥಾ ಲೋಕವಯ್ಯಾ" ಸಿನಿಮಾದ ಟ್ರೈಲರ್ ಬಿಡುಗಡೆಯು ಶನಿವಾರ (ಜು.20) ಬೆಂಗಳೂರಿನ ಎಸ್ ಆರ್ ವಿ ಥೀಯೇಟರ್ ನಲ್ಲಿ ನಡೆಯಿತು.
ಕಡ್ಲೆಕಾಯಿ ಫಿಲಂಸ್ ಬ್ಯಾನರ್ ನಲ್ಲಿ ಮಲಯಾಳಂ ಖ್ಯಾತ ನಿರ್ದೇಶಕ, ಬರಹಗಾರ, ನಟ ಜೆಯೊ ಬೇಬಿ ಅರ್ಪಿಸಿ (ಕಾದಲ್, ದಿ ಗ್ರೇಟ್ ಇಂಡಿಯನ್ ಕಿಚನ್ ಸಿನಿಮಾ ನಿರ್ದೇಶಕರು) ಈ ಸಿನೆಮಾವನ್ನು ಬೆಳ್ಳಿತೆರೆಗೆ ಅರ್ಪಿಸುತ್ತಿದ್ದಾರೆ.
ಖ್ಯಾತ ಉದ್ಯಮಿ ಮಂಗಲ್ಪಾಡಿ ನರೇಶ್ ಶೆಣೈ ಅವರ ನಿರ್ಮಾಣದಲ್ಲಿ ಸಿತೇಶ್ ಸಿ ಗೋವಿಂದ್ ಅವರ ನಿರ್ದೇಶನದಲ್ಲಿ ಮೈಮ್ ರಾಮದಾಸ್, ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮಿನಾಡ್, ಗೋಪಿನಾಥ್ ಭಟ್, ಶಶಿರಾಜ್ ಕಾವೂರ್, ಅನುರಾಜ್, ಮೈತ್ರಿ, ಸುಕನ್ಯಾ, ಮಂಗೇಶ್ ಭಟ್ ವಿಟ್ಲ, ವಿಶ್ವನಾಥ್ ಅಸೈಗೋಳಿ ನಟಿಸಿರುವ ಈ ಚಿತ್ರ ನವಿರಾದ ಹಾಸ್ಯದೊಂದಿಗೆ ಸಮ್ಮಿಳಿತವಾಗಿದೆ. ಈ ಸಿನೆಮಾದಲ್ಲಿ ಒಂದು ಪ್ರಾಣಿ ನಮಗರಿಯದಂತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದೆ.
ಸಿನಿಮಾದ ಟ್ರೈಲರನ್ನು ಜೆಯೊ ಬೇಬಿ ಅವರು ಬಿಡುಗಡೆ ಮಾಡಿದರು. ಈ ಸಂದರ್ಭ ಸದಾಶಿವ ಶೆಣೈ (ಮಾಜಿ ಮಾಧ್ಯಮ ಅಕಾಡೆಮಿ ಚೇರ್ ಮ್ಯಾನ್ ), ಸಿತೇಶ್ ಸಿ ಗೋವಿಂದ್, ಸಹ ನಿರ್ಮಾಪಕರಾದ ಸಿದ್ದಾರ್ಥ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರನೀತ ಅವರು ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ