ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ವಿಶೇಷ ಕೌಶಲ್ಯ ತರಬೇತಿ ಕಾರ್ಯಾಗಾರ ನಡೆಯಿತು.
ರಾ.ಸೇ.ಯೋಜನೆಯ ಹಿರಿಯ ಸ್ವಯಂ ಸೇವಕರಾದ ಸಾಯಿ ಕಿರಣ್ , ಭರತ್.ಕೆ .ರಾವ್ ಹಾಗೂ ಭರತ್ ಕುಲಾಲ್ ಅವರು ವಿವಿಧ ಚಟುವಟಿಕೆ ಆಧಾರಿತ ವಿಶೇಷ ಕೌಶಲ್ಯ ತರಬೇತಿ " ಐಸ್ ಬ್ರೇಕಿಂಗ್ ಸೆಷನ್ " ಕಾರ್ಯಾಗಾರ ನಡೆಸಿದರು. ಮಾನವ ಸಂಪನ್ಮೂಲ ಬಳಕೆ ಹಾಗೂ ಕೌಶಲ್ಯ ಆಧಾರಿತ ಚಟುವಟಿಕೆಗಳನ್ನು ಈ ಸಂದರ್ಭದಲ್ಲಿ ನಡೆಸಿದರು.
ರಾ. ಸೇ. ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಉಪಸ್ಥಿತರಿದ್ದರು. ಹಿರಿಯ ಸ್ವಯಂ ಸೇವಕರಾದ ಸುದರ್ಶನ್ ನಾಯಕ್ , ಸಮರ್ಥ ಪಾಟೀಲ್ ಹಾಗೂ ಸಿದ್ದಾಂತ ಜೈನ್ ಸಂಪನ್ಮೂಲ ಗೌರವಿಸಿದರು.
ಸೌಜನ್ಯ ಸ್ವಾಗತಿಸಿ , ಶ್ರೇಯಾ ವಂದಿಸಿದರು. ಹರ್ಷಿತಾ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ