ಹಾಸನ: ಶಿಕ್ಷಣ ಸೇವೆಯೇ ತನ್ನ ಪೂಜೆ ಎಂದು ಶಿಕ್ಷಣ ಕ್ಷೇತ್ರದಲ್ಲಿ ಅವಿರತವಾಗಿ ಶ್ರಮಿಸಿತ್ತಿರುವ ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ ಹಾಸನ ಇಲ್ಲಿ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜೆ.ಬಿ.ತಮ್ಮಣ್ಣಗೌಡರನ್ನು ಸನ್ಮಾನಿಸಲಾಯಿತು.
ನಗರದ ಹೋಟೆಲ್ ಆರ್ಯ ಮ್ಯಾನ್ಷನ್ ನಲ್ಲಿ ಏರ್ಪಡಿಸಲಾಗಿದ್ದ ರೋಟರಿ ಸಂಸ್ಥೆ ಹಾಸನ ಜೋನ್ 9 "ಬಿ" ಯ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸೇವೆ ಮಾಡಿದ್ದು ಇತ್ತೀಚೆಗೆ ಜಿಲ್ಲಾಡಳಿತವತಿಯಿಂದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಣಾಧಿಕಾರಿ ಜೆ.ಬಿ.ತಮ್ಮಣ್ಣಗೌಡ ರವರನ್ನು ರೋಟರಿ ಸಂಸ್ಥೆಯು ಅಭಿನಂದಿಸಿ ಸನ್ಮಾನಿಸಿತು.
ಈ ಸಂದರ್ಭದಲ್ಲಿ ಮೈಸೂರು ವಿಭಾಗದ ರೋಟರಿ ಪಿಡಿಜಿ ಶ್ರೀ ಕೇಶವ, ಹಾಸನ ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷರಾದ ಗಿರೀಶ್ ಕುಮಾರ್, ಲೋಕೇಶ್, ಖಜಾಂಚಿ ನಿರ್ಮಲ್ ಕುಮಾರ್, ನೂತನ ಅಧ್ಯಕ್ಷ ಶ್ರೀನಾಥ್, ಕಾರ್ಯದರ್ಶಿ ಅಮೃತ್, ವಕೇಶನಲ್ ಸರ್ವಿಸ್ ನಿರ್ದೇಶಕ ಜಯಪ್ರಸಾದ್ ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







