ಹಾಸನ: ಮನೆ ಮನೆ ಕವಿಗೋಷ್ಠಿ ಸರಣಿಯ 319ನೇ ಕಾರ್ಯಕ್ರಮ ಜುಲೈ 7ರಂದು ಭಾನುವಾರ ಸಂಜೆ 4:30ಕ್ಕೆ ಹೇಮಾವತಿ ನಗರದ ಸವಿತೃ ನಿವಾಸದಲ್ಲಿ ಏರ್ಪಡಿಸಲಾಗಿದೆ. ಜಯಶ್ರೀ ಹಾಗೂ ಎಚ್.ವಿ ಬಾಲಕೃಷ್ಣ ದಂಪತಿಗಳು ಈ ಕಾರ್ಯಕ್ರಮವನ್ನು ಪ್ರಾಯೋಜಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ದಯಾನಂದ ಎಸ್ ಅವರು 'ಕಾಣದ ದಾರಿ' ಪುಸ್ತಕದ ಕುರಿತು ಲೇಖಕಿ ಹೆಚ್.ಎಸ್. ಪ್ರತಿಮಾ ಅವರು ವಿಮರ್ಶೆ ಮಾಡಲಿದ್ದಾರೆ. ನಂತರ ಆಗಮಿತ ಕವಿಗಳಿಂದ ಕವಿಗೋಷ್ಠಿ ಇರುತ್ತದೆ. ಗಾಯಕ, ಗಾಯಕಿಯರು, ರಂಗಭೂಮಿ ಕಲಾವಿದರಿಗೆ ಭಾವಗೀತೆ, ಜನಪದ ಗೀತೆ ಹಾಡಲು ಅವಕಾಶವಿರುತ್ತದೆ ಎಂದು ಕಾರ್ಯಕ್ರಮದ ಸಂಚಾಲಕರಾದ ಗೊರೂರು ಅನಂತರಾಜು ಅವರು ತಿಳಿಸಿದ್ದಾರೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ 94494 62879-ಗೊರೂರು ಅನಂತರಾಜು, 9449311298 ಸಮುದ್ರವಳ್ಳಿ ವಾಸು ಅವರನ್ನು ಸಂಪರ್ಕಿಸಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ