ಜು.20: ಗಿರಿನಗರ ಶಾರದಾಂಬ ದೇಗುಲ ಆವರಣದಲ್ಲಿ ಗುರುಪೂರ್ಣಿಮೆ- ಗುರುವಂದನೆ

Upayuktha
0


ಬೆಂಗಳೂರು: ಗುರುಪೂರ್ಣಿಮೆ ಪ್ರಯುಕ್ತ ಗುರುವಂದನೆ ಹಾಗೂ 'ಸದಾಶಿವ ಬ್ರಹ್ಮೇಂದ್ರರು' ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮ ಜುಲೈ 20ರಂದು ಶನಿವಾರ ಗಿರಿನಗರದ ಶಾರದಾಂಬಾ ದೇಗುಲದ ಆವರಣದ ಶಂಕರಕೃಪ ಸಭಾಂಗಣದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಡೆಯಲಿದೆ.


ಮುಖ್ಯ ಅತಿಥಿಗಳಾಗಿ ಬೆಂಗಳೂರು- ಜಿಗಣಿಯಲ್ಲಿರುವ ಎಸ್‌.ವಿ ಯೋಗ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಂ.ಕೆ ಶ್ರೀಧರ್ ಅವರು ಭಾಗವಹಿಸಲಿದ್ದಾರೆ.


ಆಕಾಶವಾಣಿ ಮತ್ತು ದೂರದರ್ಶನ ದಕ್ಷಿಣ ವಲಯದ ಸಹಾಯಕ ನಿರ್ದೇಶಕರಾದ (ಕಾರ್ಯಕ್ರಮ) ಡಾ. ಎನ್‌. ರಘು ಅವರು ಗ್ರಂಥದ ಲೋಕಾರ್ಪಣೆ ಮಾಡಲಿದ್ದಾರೆ.


ಬಳಿಕ ವಿದುಷಿ ಸುಜಯ ಭುಜಗಶಯನ ಅವರಿಂದ ಸದಾಶಿವ ಬ್ರಹ್ಮೇಂದ್ರರ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top