ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಿರುವುದನ್ನು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್‌ಎಸ್‌ಇ) ಎಂಡಿ ಹಾಗೂ ಸಿಇಓ ಆಶೀಶ್‌ಕುಮಾರ್ ಚೌಹಾಣ್ ಸ್ವಾಗತಿಸಿದ್ದಾರೆ.
ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರಿ ವಲಯದ ಜತೆಗೆ ಖಾಸಗಿ ರಂಗ ಕೂಡಾ ಪಾಲ್ಗೊಳ್ಳುವಂತೆ ಮಾಡುವ ಮೂಲಕ ದೇಶ ನಂಬರ್ ವನ್ ಸ್ಟಾರ್ಟ್ಅಪ್ ದೇಶವಾಗಿ ಮತ್ತು ಉದ್ಯಮಿಗಳ ದೇಶವಾಗಿ ಹೊರಹೊಮ್ಮಲು ಅನುಕೂಲವಾಗುವಂತೆ ಆ್ಯಂಜೆಲ್ ತೆರಿಗೆ ಪರಿಹಾರವನ್ನು ಘೋಷಿಸುವ ಜತೆಗೆ ಮುದ್ರಾ ಸಾಲ ಯೋಜನೆಯ ಮಿತಿಯನ್ನು10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಿರುವುದು ಶ್ಲಾಘನೀಯ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ದೇಶದ ಶ್ರಮಶಕ್ತಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಕೂಡಾ ಗಮನ ಹರಿಸಿದ್ದು, ಇದು ಭಾರತಕ್ಕೆ ಜನಸಂಖ್ಯೆಯ ಲಾಭದ ಪ್ರಯೋಜನ ಪಡೆಯಲು ನೆರವಾಗಲಿದೆ. ಕೌಶಲ ಅಭಿವೃದ್ಧಿ ಉದ್ಯೋಗ ಸೃಷ್ಟಿಯ ಭಾಗವಾಗಿದ್ದು, ಮೂಲಸೌಕರ್ಯಕ್ಕೆ ಒತ್ತು ನೀಡುವ ಜತೆಗೆ ವಿತ್ತೀಯ ಕೊರತೆಯನ್ನು ಹಾಲಿ ಇರುವ ಶೇಕಡ 5.1 ರಿಂದ 4.9 ಕ್ಕೆ ಇಳಿಸಲು ಮುಂದಾಗಿದ್ದಾರೆ. ಪ್ರತ್ಯೇಕ ಮತ್ತು ಪರೋಕ್ಷ ತೆರಿಗೆಯ ಸಂರಚನೆಯಲ್ಲಿ ಹೆಚ್ಚಿನ ಬದಲಾವಣೆ ಮಾಡದೇ ಈ ಎಲ್ಲ ಅಂಶಗಳನ್ನು ಸಾಧಿಸಲಾಗಿದೆ. ಇದು ಧೀರ್ಘಾವಧಿಯಲ್ಲಿ ಭಾರತದ ಕ್ರೆಡಿಟ್ ರೇಟಿಂಗ್ ಸುಧಾರಣೆಗೆ ಕಾರಣವಾಗಲಿದ್ದು2025-26ನೇ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಶೇಕಡ 4.5ಕ್ಕೆ ಇಳಿಸಲು ಸಾಧ್ಯವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ