ಕಲ್ಬುರ್ಗಿ ವಿಮಾನ ನಿಲ್ದಾಣಕ್ಕೆ ಫ್ಲೈ ಬಸ್ ಆರಂಭ ಅಗತ್ಯ: ಡಾ.ಪೆರ್ಲ

Upayuktha
0


ಕಲ್ಬುರ್ಗಿ:
ನಗರದ ವಿಮಾನ ನಿಲ್ದಾಣಕ್ಕೆ ಕೆಕೆಆರ್‌ಟಿಸಿ ಸಿಟಿ ಬಸ್ ಸೇವೆ ಪ್ರಾರಂಭಿಸಿರುವುದು ಸಂತಸದ ಸಂಗತಿಯಾಗಿದ್ದು ಇದರೊಂದಿಗೆ ವಿಮಾನ ನಿಲ್ದಾಣಕ್ಕೆ ಅಕ್ಕಪಕ್ಕದ ಜಿಲ್ಲೆಗಳಿಂದ ಫ್ಲೈ ಬಸ್ ಆರಂಭವು ಕೂಡ ಅತ್ಯಗತ್ಯ ಎಂದು ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷ ಡಾ. ಸದಾನಂದ ಪೆರ್ಲ ಒತ್ತಾಯಿಸಿದ್ದಾರೆ.


ಕಲ್ಬುರ್ಗಿ ನಗರದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ಸಂಚರಿಸಲು ಕೆಕೆಆರ್‌ಟಿಸಿ ಜುಲೈ 25 ರಿಂದ ಕೇಂದ್ರ ಬಸ್ ನಿಲ್ದಾಣದಿಂದ ಸಿಟಿ ಬಸ್ ಸರ್ವಿಸ್ ಪ್ರಾರಂಭಿಸಿದೆ ವಿಮಾನ ನಿಲ್ದಾಣದಿಂದ ಪ್ರಾರಂಭಿಸಿದರೆ, ಉತ್ತಮವಾಗಿದ್ದು ಹಾಗೂ ಪಕ್ಕದ ಜಿಲ್ಲೆಗಳಾದ ಯಾದಗಿರಿ, ಬೀದರ್ ರಾಯಚೂರು ವಿಜಯಪುರ ಮತ್ತು ಸೊಲ್ಲಾಪುರ ಮುಂತಾದೆಡೆಗಳಿಂದ ವಿಮಾನ ಆಗಮನದ ಮತ್ತು ನಿರ್ಗಮನದ ವೇಳೆ ಅನುಗುಣವಾಗಿ ಫ್ಲೈ ಬಸ್ ಪ್ರಾರಂಭ ಮಾಡಿದರೆ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. 


ಈಗಾಗಲೇ ಕಲಬುರ್ಗಿಯಿಂದ ಎಲ್ಲ ವಿಮಾನಗಳು ಪ್ರತಿದಿನ ಶೇಕಡ 80ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹೊಂದಿ ಸಂಚರಿಸುತ್ತಿವೆ. ದೇವನಹಳ್ಳಿ ವಿಮಾನ ನಿಲ್ದಾಣಗಳಿಗೆ ಮಂಗಳೂರು ಮೈಸೂರು ಮುಂತಾದೆಡೆಗಳಿಂದ ಫ್ಲೈ ಬಸ್ ಸೇವೆ ಇದ್ದು ಹಾಗೆಯೇ ಕಲಬುರ್ಗಿಯ ವಿಮಾನ ನಿಲ್ದಾಣಕ್ಕೂ ಪಕ್ಕದ ಜಿಲ್ಲೆಗಳಿಂದ ಅಂತಹ ವ್ಯವಸ್ಥೆ ಕಲ್ಪಿಸಬೇಕು ಎಂದು ಡಾ. ಪೆರ್ಲ ಒತ್ತಾಯಿಸಿದ್ದಾರೆ. 


ಪ್ರಸ್ತುತ ಬೆಂಗಳೂರು ಮತ್ತು ಕಲ್ಬುರ್ಗಿ ನಡುವೆ ದಿನ ನಿತ್ಯ ಬೆಳಗ್ಗಿನ ವೇಳೆ ಮತ್ತು ಸೋಮವಾರ, ಮಂಗಳವಾರ ಗುರುವಾರದಂದು ಸಾಯಂಕಾಲ ವಿಮಾನ ಸೇವೆ ಚಾಲ್ತಿಯಲ್ಲಿದ್ದು ಫ್ಲೈ ಬಸ್ ಮತ್ತು ಸಿಟಿ ಬಸ್ ಆರಂಭ ಮಾಡಿದರೆ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. 


ಪ್ರತಿನಿತ್ಯ ಬೆಳಿಗ್ಗೆ 8:40ಕ್ಕೆ ಬೆಂಗಳೂರಿನಿಂದ ಕಲಬುರ್ಗಿಗೆ ವಿಮಾನ ಆಗಮಿಸುತ್ತಿದೆ ಹಾಗೂ ಸೋಮವಾರ ಮಂಗಳವಾರ ಮತ್ತು ಗುರುವಾರ ಸಾಯಂಕಾಲ 7.30 ಕ್ಕೆ ಬೆಂಗಳೂರಿನಿಂದ  ವಿಮಾನಗಳು ಆಗಮಿಸುತ್ತಿವೆ ಎಂದು ವಿಮಾನ ನಿಲ್ದಾಣದ ನಿರ್ದೇಶಕರಾದ ಮಹೇಶ್ ಚಿಲ್ಕಾ ಅವರು ತಿಳಿಸಿದ್ದಾರೆ. ಈ ವೇಳೆಗೆ ಈಗ ಕೇಂದ್ರ ಬಸ್ ನಿಲ್ದಾಣದಿಂದ ವಿಮಾನ ನಿಲ್ದಾಣದವರೆಗೆ ಸಿಟಿ ಬಸ್ ಸಂಚಾರ ಪ್ರಾರಂಭಿಸಲಾಗಿದ್ದು ಆರಂಭಕ್ಕೂ ಸಂಬಂಧ ಪಟ್ಟವರ ಜೊತೆ ಚರ್ಚಿಸುವುದಾಗಿ ಚಿಲ್ಕ ಅವರ ಜೊತೆ ಚರ್ಚಿಸಿದ ವೇಳೆ ಮಾಹಿತಿ ನೀಡಿದರು. ನೂತನ ಸಿಟಿ ಬಸ್ ಆರಂಭಿಸಿದ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಎನ್ ರಾಚಪ್ಪ ಹಾಗು  ಕೆಕೆ ಆರ್ ಟಿ ಸಿ ಜಿಲ್ಲಾ ನಿಯಂತ್ರಣ ಅಧಿಕಾರಿಗಳಾದ ನಾರಾಯಣ ಕುರುಬರ್ ಅವರಿಗೆ ಡಾ. ಪೆರ್ಲ ಅಭಿನಂದನೆ ಸಲ್ಲಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Advt Slider:
To Top