ಬಹುಮುಖ ಪ್ರತಿಭೆಯ ಪುಟಾಣಿ ಶ್ರೀಮಾನ್ಯಾ ಭಟ್ ಕಡಂದಲೆಗೆ ಸನ್ಮಾನ

Upayuktha
0


ಪುತ್ತೂರು: ಬಹುಮುಖ ಬಾಲಪ್ರತಿಭೆ ಶ್ರೀಮಾನ್ಯಾ ಭಟ್ ಕಡಂದಲೆ ಇವಳನ್ನು ಭಾನುವಾರ (ಜು.7) ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು (ರಿ) ಮತ್ತು ರಕ್ತಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಹಾಗೂ ಶ್ರೀಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ ಪುತ್ತೂರು ವತಿಯಿಂದ ಸನ್ಮಾನಿಸಲಾಯಿತು.


ಈಕೆ ದಿ।ಕೆ.ಜಿ. ನಾರಾಯಣ ಭಟ್ ಕಡಂದಲೆ ಮತ್ತು ರಾಧಾಭಟ್ ಹಾಗೂ ಕಟೀಲು ಅನಂತ ಪದ್ಮನಾಭ ಆಸ್ರಣ್ಣ ದಂಪತಿಗಳ ಮೊಮ್ಮಗಳಾಗಿದ್ದು ಕಡಂದಲೆ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀ ವಿದ್ಯಾಭಟ್ ದಂಪತಿಗಳ ಸುಪುತ್ರಿ.


ಕಟೀಲು ದುರ್ಗಾಪರಮೇಶ್ವರಿ ಆಂಗ್ಲ ಮಾದ್ಯಮ ಶಾಲೆಯ ಯು.ಕೆ.ಜಿ ತರಗತಿಯ ವಿದ್ಯಾರ್ಥಿನಿಯಾಗಿದ್ದು ಸಂಗೀತ, ನೃತ್ಯ, ಭರತನಾಟ್ಯ, ಸಿನಿಮಾ ಹಾಡು, ಭಗವದ್ಗೀತೆ, ವಿಷ್ಣು ಸಹಸ್ರನಾಮ, ದೇವರ ಮಂತ್ರ, ಕ್ರೀಡೆಗಳಲ್ಲಿ ಪರಿಣಿತಳಾಗಿದ್ದಾಳೆ. ಹಲವು ವೇದಿಕೆಗಳನ್ನು ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಈ ಪುಟಾಣಿಯನ್ನು ಕಡಂದಲೆಯಲ್ಲಿರುವ  ಅವರ ಮನೆಯಲ್ಲಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ರಕ್ತಸಂಜೀವಿನಿ ಬ್ಲಡ್ ಗ್ರೂಪ್ ನ ರಕ್ತದಾನಿ ಸಮಾಜಸೇವಕ ನವೀನ್ ಸಿಟಿಗುಡ್ಡೆ, ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷ ರಾಜೀವ ಗೌಡ, ರಕ್ತ ಸಂಜೀವಿನಿ ಸದಸ್ಯ ಮನೋಹರ, ಕಲಾವಿದ ಕೃಷ್ಣಪ್ಪ ಹಾಗೂ ಶ್ರೀಮಾನ್ಯಾ ಭಟ್ ಕಡಂದಲೆಯವರ ಮನೆಯವರು ಉಪಸ್ಥಿತರಿದ್ದರು. ಸರಕಾರಿ ಪ್ರೌಢಶಾಲೆ ಕಬಕದ ಸಾಹಿತಿ, ಶಿಕ್ಷಕಿ ಶಾಂತಾ ಪುತ್ತೂರು ಮುಖ್ಯ ಅತಿಥಿಗಳಾಗಿದ್ದರು. ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷ ರಾಜೀವ ಗೌಡ ಅಭಿನಂದನಾ ಪತ್ರ ವಾಚಿಸಿದರು. ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ಕಡಂದಲೆ ಸುಬ್ರಹ್ಮಣ್ಯ ಭಟ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top