ಮಂಗಳೂರು: ಮಂಜೇಶ್ವರದ ಸ್ನೇಹಾಲಯವು ಇಂದು (ಜು.29) ಭಾವನಾತ್ಮಕ ಪುನರ್ಮಿಲನ ವೊಂದಕ್ಕೆ ಸಾಕ್ಷಿಯಾಯಿತು. ಆರು ವರ್ಷದ ಹಿಂದೆ ಕಾಣೆಯಾಗಿದ್ದ ಮಂಟು ಸಿಂಗ್ ಪುನಃ ಕುಟುಂಬಸ್ಥರ ಮಡಿಲು ಸೇರಿದ ಘಟನೆ ಸ್ನೇಹಾಲಯದಲ್ಲಿ ನಡೆಯಿತು.
ನಾಲ್ಕು ವರ್ಷದ ಹಿಂದೆ (26.10.2020) ಫರಂಗಿಪೇಟೆ ಬಳಿಯ ಬಸ್ಸು ನಿಲ್ದಾಣದಲ್ಲಿ ತುಂಬಾ ದಿನಗಳಿಂದ ಮಲಗಿದ್ದ ಆತನನ್ನು, ಸ್ಥಳೀಯ ರಿಕ್ಷಾ ಚಾಲಕರು ನೀಡಿದ ಮಾಹಿತಿಯ ಮೇರೆಗೆ ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾರಾವರು ರಕ್ಷಿಸಿ ಸ್ನೇಹಾಲಯಕ್ಕೆ ದಾಖಲಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಆತ ಸ್ನೇಹಾಲಯದಲ್ಲಿ ಎಲ್ಲರ ಪ್ರೀತಿಪಾತ್ರನಾಗಿದ್ದ,
ಆತ ಕಿವುಡ ಮತ್ತು ಮೂಕನಾಗಿದ್ದ ಕಾರಣ ಆತನ ಹೆಸರು ಮತ್ತು ವಿಳಾಸವನ್ನು ಪತ್ತೆ ಹಚ್ಚವುದು ಸ್ನೇಹಾಲಯ ತಂಡಕ್ಕೆ ಒಂದು ದೊಡ್ಡ ಸವಾಲಾಗಿತ್ತು. ಸ್ನೇಹಾಲಯದಲ್ಲಿ ಆತನಿಗೆ ರಮೇಶ್ ಎಂಬ ಹೆಸರನ್ನು ಇಡಲಾಯಿತು, ಸಂಕೇತ ಭಾಷಾ ವ್ಯಾಖ್ಯಾನಕಾರರನ್ನು ತಂದು ವಿಳಾಸ ಪತ್ತೆಹಚ್ಚುವ ಪ್ರಯತ್ನ ಮಾಡಲಾಗಿತ್ತು ಆದರೂ ಯಾವುದೇ ಫಲ ಸಿಗಲಿಲ್ಲ.
ಇನ್ನೊಂದೆಡೆ ಆತನ ಕುಟುಂಬದವರು ಆತನನ್ನು ಹುಡುಕಾಡಿ ಬೇಸತ್ತು ಆತ ಮೃತಪಟ್ಟಿರಬಹುದೆಂದು ಊಹಿಸಿದ್ದರು. ಸ್ನೇಹಾಲಯ ಮತ್ತು ಮಂಗಳೂರಿನ ಆಧಾರ್ ಸೇವಾ ಕೇಂದ್ರದ ಜಂಟಿ ಸಹಯೋಗದಲ್ಲಿ ಸ್ನೇಹಾಲಯದ ನಿವಾಸಿಗಳಿಗೆ ಆಧಾರ್ ಶಿಬಿರವನ್ನು ಏರ್ಪಡಿಸಲಾಗಿತ್ತು, ಮತ್ತು ಇದರ ಫಲವಾಗಿ ಸುಮಾರು 36 ನಿವಾಸಿಗಳ ವಿಳಾಸವನ್ನು ಪತ್ತೆಹಚ್ಚಲು ಸಾಧ್ಯವಾಯಿತು.
ಅಧಾರ್ ಕಾರ್ಡಿನಲ್ಲಿ ಇದ್ದ ರಮೇಶನ ವಿಳಾಸ ಸಿಕ್ಕಿದ ತಕ್ಷಣ ಸ್ನೇಹಾಲಯದ ಸಮಾಜ ಕಾರ್ಯ ವಿಭಾಗದ ಸಿಬ್ಬಂದಿಗಳು ಆತನ ಗ್ರಾಮದ ಮುಖ್ಯಸ್ಥರನ್ನು ಸಂಪರ್ಕಿಸಿತು, ಸರಪಂಚ್ ಆತನ ಸಂಬಂಧಿಕನಾದ ಕಾರಣ ತಕ್ಷಣ ವೀಡಿಯೂ ಕಾಲ್ ಮಾಡಿ ಆತನ ಗುರುತನ್ನು ದೃಢಪಡಿಸಿದನು ಮಾತ್ತು ಅದಷ್ಟು ಬೇಗ ಸ್ನೇಹಾಲಯಕ್ಕೆ ಬರುವ ಭರವಸೆಯನ್ನು ಕೊಟ್ಟರು.
ದಿನಾಂಕ 29.7.2024 ಆತನ ಸೋದರ ಸಂಬಂಧಿಗಳಾದ ಮನೀಶ್ ಕುಮಾರ್ ಸಿಂಗ್ ಮತ್ತು ಪಂಕಜ್ ಸಿಂಗ್ ದೂರದ ಬಿಹಾರದಿಂದ ಮಂಜೇಶ್ವರದ ಸ್ನೇಹಾಲಯಕ್ಕೆ ಆಗಮಿಸಿದರು. ಸಹೋದರ ಜೋಸೆಫ್ ಕ್ರಾಸ್ತಾ ಮತ್ತು ಸ್ನೇಹಾಲಯ ಸಿಬ್ಬಂದಿಗಳ ಸಮ್ಮುಖದಲ್ಲಿ ಪುನರ್ಮಿಲನ ಕಾರ್ಯ ನಡೆಯಿತು.
ಆತನ ಕುಟುಂಬದವರ ಪ್ರಕಾರ ಆತನ ನಿಜ ಹೆಸರು ಮಂಟು ಸಿಂಗ್, ಆತ ಕಳೆದ 6 ವರ್ಷಗಳಿಂದ ನಾಪತ್ತೆಯಾಗಿದ್ದ, ತನ್ನ ಊರಾದ ಬಿಹಾರದ ಸಿಮಾರಿಯಾದಲ್ಲಿ ಕೃಷಿ ಮಾಡಿ ಮತ್ತು ಜೆ.ಸಿ.ಬಿ ಚಾಲಕ ನಾಗಿ ಕೆಲಸ ಮಾಡುತ್ತಿದ್ದ ಆತ ಗಾಂಜಾ ಸೇವನೆಯ ಪರಿಣಾಮವಾಗಿ ಮಾನಸಿಕ ಅಸ್ವಸ್ಥತೆಗೆ ತುತ್ತಾಗುತ್ತಾನೆ. ಹೀಗೆ ಒಂದು ದಿನ ಹೇಳದೆ ಮನೆಯಿಂದ ನಾಪತ್ತೆಯಾಗುತ್ತಾನೆ.
ಈ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಸಂಸ್ಥೆಗೆ ಕುಟುಂಬಿಕರು ತುಂಬು ಹೃದಯ ಕೃತಜ್ಞತೆಗಳನ್ನು ಸಲ್ಲಿಸಿದರು. ಅಂತೆಯೆ ಮುಂಬರವ ದಿನಗಳಲ್ಲಿ ಆತನ ಆರೈಕೆ ಮತ್ತು ಚಿಕಿತ್ಸೆಯನ್ನು ಸರಿಯಾಗಿ ಮಾಡುವ ಭರವಸೆಯನ್ನು ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ