ಮಾದಕ ವಸ್ತುಗಳು ಮಕ್ಕಳನ್ನು ಬಲಿಪಡೆಯುತ್ತಿವೆ: ಡೆಪ್ಯೂಟಿ ಎಕ್ಸೈಸ್ ಕಮಿಷನರ್ ಜಯರಾಜ್

Upayuktha
0

ಕಾಸರಗೋಡು: ಜಗತ್ತು ಇಂದು ಅತ್ಯಂತ ಭಯಪಡಬೇಕಾಗಿರುವುದು ಮಾದಕ ವಸ್ತುಗಳಿಗೆ. ಮಾದಕ ವಸ್ತುಗಳು ಯುವ ಜನತೆಯನ್ನು ಬಲಿ ಪಡೆಯುತ್ತವೆ ಎಂದು ಕಾಸರಗೋಡು ಎಕ್ಸೈಸ್ ಡೆಪ್ಯುಟಿ ಕಮಿಷನರ್ ಜಯರಾಜ್ ಹೇಳಿದರು.


ಅವರು ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತರಗತಿ ನಡೆಸಿಕೊಟ್ಟರು. ಶಾಲೆಯ ಎನ್ಎಸ್ಎಸ್ ಹಾಗೂ ಎನ್‌ಸಿಸಿ ಘಟಕದ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಕಾರ್ಯಕ್ರಮವನ್ನು ಶಾಲಾ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಉದ್ಘಾಟಿಸಿದರು. ವೇದಿಕೆಯಲ್ಲಿ ಹಿರಿಯ ಆಧ್ಯಾಪಿಕೆ ರಮಣಿ ಎಂ. ಎಸ್ ಉಪಸ್ಥಿತರಿದ್ದರು. ಅಧ್ಯಾಪಕ ರಾಜೇಶ್ ಸಿ. ಎಚ್. ಸ್ವಾಗತಿಸಿ ಎನ್ ಎಸ್ ಎಸ್ ಯೋಜನಾಧಿಕಾರಿ ವಾಣಿ ಕೆ. ವಂದಿಸಿದರು.ಎನ್‌ಎಸ್‌ಎಸ್ ಪಿಎಸಿ ಸದಸ್ಯರಾದ ಸಂದೀಪ್ ಕುಮಾರ್ ಎನ್. ವಿ. ನಿರೂಪಿಸಿದರು.


ಎನ್‌ಸಿಸಿ ಯೋಜನಾಧಿಕಾರಿ ಈಶ್ವರ್ ನಾಯಕ್, ಎಕ್ಸೈಸ್ ಆಫೀಸರ್ ಪ್ರಶಾಂತ್ ಶಾಲಾ ಅಧ್ಯಾಪಕರಾದ ಸುರೇಶ್, ವಾಣಿ ಶ್ರೀ, ಕೃಷ್ಣ ಕುಮಾರಿ, ಗೋವಿಂದನ್ ನಂಬೂದಿರಿ, ಬಾಲಕೃಷ್ಣನ್, ಮಹೇಶ್ ವೈ, ಶ್ರೀರಾಜ್, ಅಪ್ಪುಕುಟ್ಟನ್, ಸುಶ್ಮಿತಾ ಶೆಟ್ಟಿ, ಸುಮಲತಾ, ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top