ಉಡುಪಿ: ಸಮಾಜದಲ್ಲಿ ಅತ್ಯಂತ ಗೌರವದಿಂದ ನಾವೆಲ್ಲರೂ ನೋಡುವ ವ್ಯಕ್ತಿಗಳೆಂದರೆ ವೈದ್ಯರು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಜುಲೈ 6ರಂದು ಪುರಭವನದಲ್ಲಿ ಉಡುಪಿ ಜಿಲ್ಲಾ ವೈದ್ಯಕೀಯ ಪ್ರತಿನಿಧಿಗಳ ಸಂಘ (ಕೆ.ಎಸ್.ಎಂ, ಎಸ್.ಆರ್.ಎ) ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ವತಿಯಿಂದ ನಡೆದ 22 ನೇ ವಷ೯ದ ವೈದ್ಯರ ದಿನಾಚರಣೆ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವೈದ್ಯರನ್ನು ನಾವು ದೇವರ ಸಮಾನರಂತೆ ಕಾಣುತ್ತೇವೆ ಆದರೆ ಇತ್ತೀಚೆಗೆ ನ ದಿನಗಳಲ್ಲಿ ವೈದ್ಯರುಗಳ ಮೇಲೆ ನಡೆಯುತ್ತಿರುವ ಹಲ್ಲೆ ದೌರ್ಜನ್ಯಗಳು ಖಂಡನೀಯ ಎಂದರು.
ಮುಖ್ಯ ಅತಿಥಿಯಾಗಿ ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ. ರಾಜಲಕ್ಮೀ ಮಾತನಾಡಿ, ವೈದ್ಯರು ತಮ್ಮ ಕುಟುಂಬಕ್ಕೆ ಸರಿಯಾದ ಸಮಯ ನೀಡದಿದ್ದರೂ ರೋಗಿಗಳನ್ನು ತನ್ನ ಕುಟುಂಬವೆಂದು ತಿಳಿದು ಉತ್ತಮ ಸೇವೆ ಸಲ್ಲಿಸುತ್ತಾರೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ನಾಯಕ್, ಸಮಾಜದಲ್ಲಿ ವೈದ್ಯರು ನಮಗೆಲ್ಲ ದೇವರ ಸಮಾನ ಹೀಗಾಗಿ ವೈದ್ಯರು ನಮ್ಮ ಜೀವನದ ಅವಿಭಾಜ್ಯ ಅಂಗ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಅಧ್ಯಕ್ಷ ಸುಂದರ್ ಪೂಜಾರಿ ಮೂಡುಕುಕ್ಕುಡೆ ವಹಿಸಿದ್ದರು. ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಸತೀಶ ಹೆಗ್ಡೆ, ಜಯಂಟ್ಸ್ ಯೂನಿಟ್ ಡೈರೆಕ್ಟರ್ ವಿವೇಕಾನಂದ ಕಾಮತ್ ಮುಂತಾದವರಿದ್ದರು.
ಈ ಸಂದರ್ಭದಲ್ಲಿ ಸಮಾಜದಲ್ಲಿ ಸಾಧನೆ ಮಾಡಿದ ಹಿರಿಯ ವೈದ್ಯರುಗಳಾದ ಡಾ. ನವೀನ್ ಸಾಲಿನ್ಸ್' ಕೆಎಂಸಿ ಮಣಿಪಾಲ ಡಾ. ಛಾಯಾಲತಾ, ಡಾ.ಎಂ ಎನ್ ಅಡಿಗ, ಡಾ. ನಾಗಭೂಷಣ್ ಉಡುಪ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ವೈದ್ಯ ಡಾ. ಎಂ. ರಾಜಾರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಯಂಟ್ಸ್ ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು ಪ್ರಸ್ತಾವನೆಗೈದರು.
ಶ್ರೀಕಾಂತ ಪೂಜಾರಿ, ರಾಘವೇಂದ್ರ ಪ್ರಭು, ಕರ್ವಾಲು, ಸುಬ್ರಮಣ್ಯ ಆಚಾರ್ಯ ಪರಿಚಯಿಸಿದರು. ಮಿಲ್ಟನ್ ಒಲಿವೇರಾ ವರದಿ ವಾಚಿಸಿದರು.
ರಾಘವೇಂದ್ರ ಶೆಟ್ಟಿ ನಿರೂಪಿಸಿದರು. ವೈದ್ಯಕೀಯ ಪ್ರತಿನಿಧಿ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ್ ವಂದಿಸಿದರು. ಡೊನಾಲ್ಡ್ ರವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.