ಡಾ| ಶ್ಯಾಮ ಪ್ರಸಾದ್ ಮುಖರ್ಜಿ ಪುಣ್ಯ ಸ್ಮರಣೆಯ ಅಂಗವಾಗಿ ರಕ್ತದಾನ ಶಿಬಿರ

Upayuktha
0


ಮಂಗಳೂರು: ಡಾ| ಶ್ಯಾಮ ಪ್ರಸಾದ್ ಮುಖರ್ಜಿಯ ಪುಣ್ಯ ಸ್ಮರಣೆಯ ಅಂಗವಾಗಿ ರಕ್ತದಾನ ಶಿಬಿರ  ಜೂನ್ 30ರಂದು ಬೆಳಿಗ್ಗೆ 9.30ಕ್ಕೆ ಬಿಜೆಪಿ ಮಂಗಳೂರು ದಕ್ಷಿಣ ಮಂಡಳ ಇದರ ಅಲ್ಪ ಸಂಖ್ಯಾತ ಮೊರ್ಚಾದ ವತಿಯಿಂದ ಹಾಗು ಕೆಎಂಸಿ ಆಸ್ಪತ್ರೆ ಅತ್ತಾವರ ಇದರ ಸಹಕಾರದೊಂದಿಗೆ ನೆರವೇರಿತು. 30 ಜನರು ರಕ್ತದಾನ ಮಾಡಿದರು. ರಕ್ತದಾನ ಶಿಬಿರವು ಸಂತ ಜೋಸೆಫ್ ಸೆಮಿನರಿ ಇದರ ಆವರಣದಲ್ಲಿರುವ ಸಿ ಎಮ್ ಹಾಲ್‌ನಲ್ಲಿ  ನಡೆಯಿತು.  


ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷರಾದ ರಮೇಶ ಕಂಡೆಟ್ಟು, ಜಿಲ್ಲಾ ಉಪಾಧ್ಯಕ್ಷರಾದ ರಾಕೇಶ್ ರೈ, ಮಂಡಲದ ಪ್ರಧಾನ ಕಾರ‍್ಯದರ್ಶಿಗಳಾದ ಮಲ್ಲೇಶ್ ಕುಮಾರ್, ರಮೇಶ್ ಹೆಗ್ಡೆ, ಮಹಾಶಕ್ತಿ ಕೇಂದ್ರದ  ಅಧ್ಯಕ್ಷರಾದ ಪ್ರವೀಣ್ ನಿಡ್ಡೆಲ್, ಫಳ್ನೀರ್ ವಾರ್ಡ್ ಪ್ರಮುಖ, ರಾಜ್ಯ ಅಲ್ಪ ಸಂಖ್ಯಾ ಮೋರ್ಚಾದ ಪ್ರಧಾನ ಕಾರ‍್ಯದರ್ಶಿಯಾದ ಜೆಸಲ್ ಡಿಸೋಜಾ, ಗಣೇಶ್ ಎಮ್. ಬಿ, ಅತಿಥಿಗಳಾಗಿದ್ದು ಶಾಸಕರಾದ ಡಿ ವೇದವ್ಯಾಸ್ ಕಾಮತ್, ಕೆಎಂಸಿ ಆಸ್ಪತ್ರೆ ವೈದ್ಯರಾದ ಡಾ| ಊರ್ವಶಿ ಗುನೆವಾಲ್, ಸಂತ ಜೋಸೆಫ್ ಸೆಮಿನರಿ ಜೆಪ್ಪು ಇದರ ರೆಕ್ಟರ್ ವಂದನೀಯ ರೋನಾಲ್ಡ್ ಸೆರಾವೊ ವೇದಿಕೆಯಲ್ಲಿ  ಉಪಸ್ಥಿತರಿದ್ದರು ಹಾಗು ಅಲ್ಪ ಸಂಖ್ಯಾತ ಮೊರ್ಚಾದ ಮಂಗಳೂರು ದಕ್ಷಿಣ ಮಂಡಳದ  ಪ್ರಧಾನ ಕರ‍್ಯದರ್ಶಿ ಉದಯ್ ಡಿಸೋಜಾ, ಅಧ್ಯಕ್ಷರಾದ ದೀಪಕ್ ಡಿಸೋಜಾ ಅತ್ತಾವರ ಉಪಸ್ಥಿತರಿದ್ದರು. 


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಆರಂಭಿಸಲಾಯಿತು, ಡಾ| ಶ್ಯಾಮ್ ಪ್ರಸಾದ್  ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. ಅಲ್ಪ ಸಂಖ್ಯಾತ ಮೊರ್ಚಾದ ಪ್ರಧಾನ ಕಾರ್ಯದರ್ಶಿಯಾದ ಉದಯ ಕುಮಾರ್ ಸ್ವಾಗತಿಸಿದರು. ಅಲ್ಪಸಂಖ್ಯಾತ ಮೊರ್ಚಾದ ಅಧ್ಯಕ್ಷರಾದ ದೀಪಕ್ ಡಿಸೋಜಾ ಅತ್ತಾವರ ಪ್ರಾಸ್ತಾವಿಕ ಭಾಷಣಗೈದರು. ಶಾಸಕರು ಮಾತನಾಡಿ ಕಾರ್ಯಕ್ರಮಕ್ಕಾಗಿ  ಅಭಿನಂದನೆ ಸಲ್ಲಿಸಿದರು. ಸೆಮಿನರಿ ರೆಕ್ಟರ್, ಡಾ| ಶ್ಯಾಮ್ ಪ್ರಸಾದ್  ಮುಖರ್ಜಿ ಆದರ್ಶದಡಿ ಈ ಕಾರ್ಯಕ್ರಮವನ್ನು ನಡೆಸಿಕೊಂಡದಕ್ಕೆ ಮೆಚ್ಚುಗೆ ಸಲ್ಲಿಸಿದರು.


ಡಾ| ಊರ್ವಶಿ ರಕ್ತದಾನ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕೆ.ಎಂ.ಸಿ ವತಿಯಿಂದ ಅಲ್ಪಸಂಖ್ಯಾ ಮೋರ್ಚಾವನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಖಜಾಂಚಿ ಸುಪ್ರಿಯಾ ಕ್ರಿಸ್ತಬೆಲ್ ಧನ್ಯವಾದಾರ್ಪಣೆಗೈದರು. ಟೀನಾ ಪಿರೇರಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಉಪಾಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ವೇದಿಕೆಯಲ್ಲಿದ್ದ ಅತಿಥಿಗಳಿಗೆ ಪದಾಧಿಕಾರಿಗಳಾದ ಶಕೀರ್ ಕಣ್ಣೂರು, ಅಬ್ದುಲ್ ರಶೀದ್ ಬೆೆಳಾರ್, ಟೀನಾ ಪಿರೇರಾ, ನೆಲ್ಸನ್ ಕ್ಯಾಸ್ಟಲಿನೊ, ಉದಯ್ ಡಿಸೋಜಾ, ಸುಪ್ರಿಯಾ ಕ್ರಿಸ್ತಬೆಲ್, ಮತ್ತು ಸುಶೀಲ್ ಪಾಲಣ್ಣ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top