ಬೆಳ್ತಂಗಡಿ: ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಗ್ರಾಮಲೋಕ

Upayuktha
0


ಬೆಳ್ತಂಗಡಿ: ಸಾಹಿತ್ಯ ಅಕಾಡೆಮಿ, ಹೊಸದೆಹಲಿ ಮತ್ತು ಮಂಗ್ಳುರ್ಚಿ ಮೊತಿಯಾಂ ಸಾಂಸ್ಕೃತಿಕ ಸಂಘಟನೆಯ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ಪ್ರಧಾನ ರಸ್ತೆಯ ಲೋಬೊ ಮೋಟಾರ್ಸ್ ಆವರಣದಲ್ಲಿ ಗ್ರಾಮಲೋಕ ಕಾರ್ಯಕ್ರಮ ಜೂನ್ 30ರಂದು ಭಾನುವಾರ ಸಂಜೆ 4.30 ಕ್ಕೆ ನಡೆಯಿತು. 


ಬೆಳ್ತಂಗಡಿ ಧರ್ಮಕ್ಷೇತ್ರದ ಪ್ರಧಾನ ಧರ್ಮಗುರು ಫಾ| ವಾಲ್ಟರ್ ಡಿಮೆಲ್ಲೊ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಸಂದೇಶದಲ್ಲಿ ಫಾ| ಡಿ’ಮೆಲ್ಲೊ "ಕೊಂಕಣಿ ಭಾಷೆ ವೈವಿಧ್ಯತೆಗಳಿಂದ ಕೂಡಿದ ಎಲ್ಲರನ್ನೂ ಒಳಗೊಳ್ಳುವ ಪ್ರೀತಿಯ ಭಾಷೆ. ವೈಶಿಷ್ಠ್ಯಪೂರ್ಣ ಜಾನಪದ ಮತ್ತು ಗುಣಮಟ್ಟದ ಸಾಹಿತ್ಯ ಪರಂಪರೆ ಕೊಂಕಣಿಗೆ ಭಾಷೆಗೆ ಬಳುವಳಿಯಾಗಿ ಲಭಿಸಿದೆ. ಕೊಂಕಣಿ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದರ ಜತೆಗೆ, ಕೊಂಕಣಿ ಭಾಷೆಯಲ್ಲಿ ಪರಕೀಯ ಶಬ್ದಗಳ ನುಸುಳುವಿಕೆಯನ್ನು ತಡೆದು ವಿಶಿಷ್ಠತೆಯನ್ನು ಕಾಪಾಡುವ ಜವಾಬ್ದಾರಿಯೂ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಹಿರಿಯ ಕೊಂಕಣಿ ಸಾಹಿತಿಗಳು, ಕಲಾವಿದರಿಂದ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು" ಎಂದು ಕರೆಕೊಟ್ಟರು. 


ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ವಿಭಾಗ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಮತ್ತು ಅತಿಥಿಗಳನ್ನು ಪರಿಚಯಿಸಿ ಸ್ವಾಗತ ಕೋರಿದರು. 


ಕೇಂದ್ರ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಲಹಾ ಸಮಿತಿ ಸದಸ್ಯ ಎಚ್. ಎಂ. ಪೆರ್ನಾಲ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಲೋಕ ಕಾರ್ಯಕ್ರಮದಲ್ಲಿ ಸ್ಥಳೀಯ ಕವಿಗಳಾದ ರೋಬರ್ಟ್ ಡಿ ಸೊಜಾ ಮಡಂತ್ಯಾರ್, ಫ್ಲಾವಿಯಾ ಅಲ್ಬುಕೆರ್ಕ್, ಪುತ್ತೂರ್, ತೆಲ್ಮಾ ಮಾಡ್ತಾ, ಮಡಂತ್ಯಾರ್ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಗುರುವಾಯನಕೆರೆಯ ಶ್ರೀಮತಿ ವಿದ್ಯಾ ನಾಯಕ್ ಕೊಂಕಣಿ ಶಿಶುಗೀತೆಗಳನ್ನು ಪ್ರಸ್ತುತಪಡಿಸಿ, ಶಿಶುಗೀತೆಗಳ ಹಿನ್ನೆಲೆ, ಔಚಿತ್ಯ ಮತ್ತು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿಸ್ತಾರ ಮಾಹಿತಿ ನೀಡಿದರು.


ಶ್ರೀಮತಿ ಅಪೊಲಿನ್ ಡಿ ಸೊಜಾ ಮತ್ತು ತಂಡದವರು ಕೊಂಕಣಿ ಜೋಗುಳ ಹಾಡುಗಳನ್ನು ಸುಶ್ಯಾವ್ಯವಾಗಿ ಹಾಡಿ ಮಾಹಿತಿ ನೀಡಿದರು. ರೊನಾಲ್ಡ್ ಲೋಬೊ, ರೊನಾಲ್ದ್ ಡಿ ಸೊಜಾ ಮತ್ತು ಆರ್ವಿನ್ ಡಿ ಸೊಜಾ ಕೊಂಕಣಿ ಹಾಡುಗಳನ್ನು ಹಾಡುವುದರ ಮೂಲಕ ರಂಜಿಸಿದರು.   


ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಸಮಿತಿಯ ಸದಸ್ಯ ಸ್ಟ್ಯಾನಿ ಬೇಳ ಕಾರ್ಯಕ್ರಮ ನಿರೂಪಿಸಿದರು. ಮಂಗ್ಳುರ್ಚಿ ಮೊತಿಯಾಂ ಸಂಘಟನೆಯ ವತಿಯಿಂದ ಅಲ್ಪೋನ್ಸ್ ಮೆಂಡೋನ್ಸಾ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top