ಬಳ್ಳಾರಿ: ಆಂಧ್ರಪ್ರದೇಶದಿಂದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿ 2.65 ಲಕ್ಷ ರೂ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಸಿರುಗುಪ್ಪ- ಪಟ್ಟಣದ ಆದೋನಿ ರಸ್ತೆಯಲಿರುವ ಎ.ಆರ್.ಎಸ್ ಫಾರ್ಮ್ ಹತ್ತಿರ ಆದೋನಿ ಕಡೆಯಿಂದ ಎರಡು ದ್ವಿಚಕ್ರ ವಾಹನಗಳಲ್ಲಿ ಗಾಂಜಾ ಇರಿಸಿಕೊಂಡು ಬಳ್ಳಾರಿಯ ಶರ್ಮಾಸ್ ವಲಿ, ಶೈಲೇಂದ್ರ, ಶೇಖ್ ಹಬೀದ್, ಬಲರಾಮ, ಕಾರ್ತಿಕ್ ಎಂಬುವವರು ಬರುತ್ತಿದ್ದರು. ಸಿರುಗುಪ್ಪ ಪೊಲೀಸ್ ಠಾಣೆಯ ಸಿಬ್ಬಂದಿ ತಮಗೆ ದೊರೆತ ಖಚಿತ ಮಾಹಿತಿಯಿಂದ ಇವರನ್ನು ತಡೆದು ಪರಿಶೀಲನೆ ಮಾಡಿ, ಗಾಂಜಾ ಜಫ್ತು ಮಾಡಿ ಐವರನ್ನು ಬಂಧಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ