ವಿಶ್ವ ಜನಸಂಖ್ಯಾ ದಿನದ ಕಾರ್ಯಕ್ರಮದಲ್ಲಿ FPAI ಬಳ್ಳಾರಿಯ ಅಧ್ಯಕ್ಷ ಟಿ.ಜಿ.ವಿಠ್ಠಲ್
ಬಳ್ಳಾರಿ: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ, ಬಳ್ಳಾರಿ ಶಾಖೆ ಹಾಗೂ ಶ್ರೀಮತಿ ರಾಜರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳು, ಸಂಜಯ ಗಾಂಧಿ ಪಾಲಿಟೆಕ್ನಿಕ್ ಕಾಲೇಜು ಬಳ್ಳಾರಿ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಇವರ ಸಂಯುಕ್ತಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಜನಸಂಖ್ಯಾ ದಿನದ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟಕರು ಹಾಗೂ ಮುಖ್ಯ ಅತಿಥಿಗಳಾದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಬಳ್ಳಾರಿ ಶಾಖೆಯ ಅಧ್ಯಕ್ಷರಾದ ಶ್ರೀ ಯುತ ಟಿ.ಜಿ.ವಿಠ್ಠಲ್ ರವರು "ಜನಸಂಖ್ಯೆಯ ಬಗ್ಗೆ ಚಿಂತೆ ಮಾಡಬೇಕಾ? ಇಲ್ಲಾ ಚಿಂತನೆ ಮಾಡಬೇಕಾ?" ಎಂದು ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡುತ್ತಾ ಮಾತನಾಡಿದರು. "ಜನಸಂಖ್ಯೆಯ ಬಗ್ಗೆ ಬಹಳ ಹಿಂದೆಯೇ ಚಿಂತನೆ ನಡೆಸಿ ಭಾರತದಾದ್ಯಂತ ಜನಸಂಖ್ಯೆಯ ನಿಯಂತ್ರಣಕ್ಕಾಗಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಕಾರ್ಯನಿರ್ವಹಿಸುತ್ತಿದೆ. ಜನಸಂಖ್ಯೆಯ ಹೆಚ್ಚಳದಿಂದ ನಗರೀಕರಣ ಹೆಚ್ಚಾಗಿದೆ. ಬೆಂಗಳೂರು ಈ ಹಿಂದೆ ಇದ್ದ ಹಾಗೆ ಈಗ ಇಲ್ಲ, ಹಾಗೆಯೇ ಬಳ್ಳಾರಿ ಸಹ ಈ ಹಿಂದೆ ಇದ್ದ ಹಾಗೆ ಈಗ ಇಲ್ಲ, ಗಾತ್ರದಲ್ಲಿ ಬೆಳೆಯುತ್ತಿದೆ. ಜನಸಂಖ್ಯೆಯು ಪರಿಸರದ ಮೇಲೆಯೂ ಪರಿಣಾಮ ಬೀರುತ್ತಿದೆ. ಹಾಗೆಯೇ ಭಾರತದಲ್ಲಿ 77% ನಷ್ಟು ಜನರಿಗೆ ಪೌಷ್ಟಿಕ ಆಹಾರವೇ ಸಿಗುತ್ತಿಲ್ಲ ಎಂದು ಅಂದಾಜು ಮಾಡಲಾಗಿದೆ. ಇವೆಲ್ಲಕ್ಕೂ ಮಿತಿಮೀರಿದ ಜನಸಂಖ್ಯೆಯೂ ಒಂದು ಕಾರಣವಾಗಿದೆ" ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ನ M & E ಆಫೀಸರ್ ಆದಂತಹ ಶ್ರೀಮತಿ ಸುಜಾತರವರು ಮಾತನಾಡಿ "ನಮ್ಮ ದೇಶದಲ್ಲಿ ಅತ್ಯಂತ ಬೇಗ ಮದುವೆ ಮಾಡುವುದರಿಂದ ಗರ್ಭಕಂಠದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ" ಎಂದು ಹೇಳುತ್ತಾ ಗರ್ಭಕಂಠದ ಕ್ಯಾನ್ಸರ್ ಹಾಗೂ ಅದರ ಲಸಿಕೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವಂತೆ ಮಾತನಾಡಿದರು.
ವಿಶ್ವ ಜನಸಂಖ್ಯಾ ದಿನಕ್ಕೆ ಸಂಬಂಧಿಸಿದಂತೆ ಸಂಜಯ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ ವಿದ್ಯಾರ್ಥಿನಿಯರಾದ ಕಾಂಚನ ಪ್ರಥಮ, ಸಂಜನಾ ದ್ವಿತೀಯ ಹಾಗೂ ಗೋದಾವರಿ ತೃತೀಯ ಬಹುಮಾನವನ್ನು ಪಡೆದರು. ಹಾಗೂ ಇಂಗ್ಲಿಷ್ ನಲ್ಲಿ ಭಾಷಣ ಮಾಡಿದ ವಿದ್ಯಾರ್ಥಿನಿಯರಾದ ಹಸೀನಾ ಪ್ರಥಮ, ಶಕೀರಾ ದ್ವಿತೀಯ ಹಾಗೂ ಅಮೃತವರ್ಷಿಣಿ ತೃತೀಯ ಬಹುಮಾನವನ್ನು ಪಡೆದರು. ವಿಜೇತರನ್ನು FPAI ಬಳ್ಳಾರಿ ಶಾಖೆಯ ಪ್ರೋಗ್ರಾಮ್ ಆಫೀಸರ್ ಆದಂತಹ ಬಸವರಾಜ್ ರವರು ಘೋಷಿಸಿ, ವೇಧಿಕೆಯ ಮೇಲಿರುವ ಗಣ್ಯರಿಂದ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷಿಯ ನುಡಿಗಳನ್ನಾಡಿದ ಸಂಜಯ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಗೌರಿಶಂಕರ್ ಹಿರೇಮಠ್ ರವರು ಜನಸಂಖ್ಯಾ ಸ್ಪೋಟದಿಂದ ಉಂಟಾಗುವ ನಿರುದ್ಯೋಗ ಸಮಸ್ಯೆಯ ಬಗ್ಗೆ ಮಾತನಾಡುತ್ತಾ "ವಿದ್ಯಾರ್ಥಿಗಳು ಈಗಿನಿಂದಲೇ ತಮಗೆ ಎಷ್ಟು ಸಂಬಳ ಬೇಕೆಂದು ನಿರ್ಧಾರ ಮಾಡಿ ಬಿಟ್ಟಿರುತ್ತಾರೆ. ಅದು ಅವರ ತಪ್ಪು ಕಲ್ಪನೆ, ಮೊದಲು ಚಿಕ್ಕ ಕೆಲಸಕ್ಕೆ ಯಾವ ರೀತಿಯ ಸಂಬಳವಿದೆ ಎಂದು ನೋಡದೆ ಇದ್ದ ಕೆಲಸವನ್ನೇ ಶ್ರದ್ದೆ ವಹಿಸಿ "ಕಾಯಕವೇ ಕೈಲಾಸ" ಎಂದು ಮಾಡುತ್ತಾ ಹೋದರೆ ಅನುಭವ ಮತ್ತು ಸಂಬಳವೂ ಹಿಂಬಾಲಿಸಿ ಬರುತ್ತದೆ" ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಕಾರ್ಯಕ್ರಮದ ಆಯೋಜನೆಗೆ ಸಕಲ ಸಿದ್ಧತೆಗಳನ್ನು ಮಾಡಿಸಿಕೊಟ್ಟಂತಹ ಮೆಕಾನಿಕಲ್ ವಿಭಾಗದ ಬೋಧಕರು ಹಾಗೂ ಸಂಜಯಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಮುಖ್ಯಸ್ಥರಾದ ಶ್ರೀ ಬಸವರಾಜ್ ರವರಿಗೆ FPAI ಸಂಸ್ಥೆಯು ತುಂಬುಹೃದಯದ ಧನ್ಯವಾದಗಳನ್ನು ತಿಳಿಸಿತು.
ಕಾರ್ಯಕ್ರಮದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ನ ಸಿಬ್ಬಂದಿ ವರ್ಗ, ಸಂಜಯ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ಬೋಧಕ ವರ್ಗ ಹಾಗೂ 300 ಕ್ಕೂ ಹೆಚ್ಚಿನ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಗೋದಾವರಿ ಮತ್ತು ತಂಡದವರು ಪ್ರಾರ್ಥಿಸಿ, ಹಸೀನಾ ನಿರೂಪಿಸಿ, ರಕ್ಷಿತ್ ಸ್ವಾಗತಿಸಿ, ನದಾ ಆಲಂ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ