ಬಾಗಲಕೋಟೆ: ಜಿಲ್ಲಾ 11ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೆನಪಿನ ಕಾಣಿಕೆ ಹಾಗೂ ಬ್ಯಾಗುಗಳ ಕೊಡುಗೆ ನೀಡಿದ್ದ ಜಿಲ್ಲೆಯ ಮತ್ತು ಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ಧಿ, ಸಹಕಾರಿ ಧುರೀಣ, ಮಾಜಿ ಸಚಿವ, ತಮ್ಮ ಹುಟ್ಟೂರಾದ ಬಾಡಗಂಡಿಗೆ ನೂತನ ಮೆಡಿಕಲ್ ಕಾಲೇಜು ತಂದ ರೂವಾರಿ ಎಸ್.ಆರ್.ಪಾಟೀಲ ಅವರನ್ನು ಬಾಗಲಕೋಟೆ ಜಿಲ್ಲಾ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬಾಗಲಕೋಟೆಯ ನವನಗರದಲ್ಲಿರುವ ಅವರ ನಿವಾಸಕ್ಕೆ ತೆರಳಿ ಮಂಗಳವಾರ (ಜು16) ಮಂಗಳವಾರದಂದು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಬಾಗಲಕೋಟೆ ತಾಲೂಕ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಬೀಳಗಿಯ ಸಾಹಿತಿ ಹಾಗೂ ಪತ್ರಕರ್ತ ಕಿರಣ್ ಬಾಳಗೋಳ, ಕ.ಸಾ.ಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಚಂದ್ರಶೇಖರ್ ಕಾಳನ್ನವರ, ಹಿರಿಯ ಸಾಹಿತಿ ಡಾ, ಪ್ರಕಾಶ್ ಖಾಡೆ, ತಾಲೂಕಾ ಮಹಿಳಾ ಪದಾಧಿಕಾರಿಗಳಾದ ಸುಶೀಲಾ ಅಣ್ಣಿಗೇರಿ, ಡಾ. ಮಹೇಶ್ವರಿ ಕೋಟಿ, ಹಿರಿಯರಾದ ಕೃಷ್ಣಾ ಯಡಹಳ್ಳಿ, ಸಿದ್ದಣ್ಣ ಮಳ್ಳಿಗೇರಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಸಿ.ಎನ್ ಬಾಳಕ್ಕನವರ, ಮಲ್ಲಿಕಾರ್ಜುನ ಇತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ