ಸರ್ವಸ್ಪರ್ಶಿ ಬಜೆಟ್, ಕಾರ್ಯಗತ ಹೇಗೆ ಕಾದು ನೋಡಬೇಕು

Upayuktha
0


ಕೇಂದ್ರೀಯ ಬಜೆಟ್ ಎಲ್ಲಾ ರಂಗಗಳಿಗೂ ಸ್ಪರ್ಶಿಸಿದೆ. ಆದರೆ ಬಹುದೊಡ್ಡ ಕೊರತೆ ಅಂದರೆ, ದೇಶದ ಮೂಲ ಆರ್ಥಿಕ ಬೆನ್ನೆಲುಬು ಅನ್ನಿಸಿಕೊಂಡ ಕೃಷಿಯ ಬಗ್ಗೆ ಹೆಚ್ಚು ಒತ್ತು ಕೊಡದೇ ಇರುವುದು ಎದ್ದು ಕಾಣುತ್ತದೆ. ಬಜೆಟ್‌ನ ಯಶಸ್ವು ನಿಂತಿರುವುದು ಅದನ್ನು ಕಾರ್ಯಗತ ಮಾಡುವುದರ ಮೇಲೆ ಅನ್ನುವುದು ಅಷ್ಟೇ ಸತ್ಯ. ಹಿಂದೆ ಸ್ಮಾರ್ಟ್‌ ಸಿಟಿ ಪ್ಲ್ಯಾನ್ ಬಂತು ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಅನ್ನುವುದು ಇಂದಿಗೂ ನಮ್ಮನ್ನು ಕಾಡುತ್ತಿರುವ ಮೊದಲ ಪ್ರಶ್ನೆ.


ಈ ಬಜೆಟ್‌ನಲ್ಲಿ ಸಮಿಶ್ರ ಸರಕಾರದ ಛಾಯೆ ಎದ್ದು ಕಾಣುವಂತಿದೆ. ನಮ್ಮಲ್ಲಿ 28 ರಾಜ್ಯಗಳಿವೆ 8 ಕೇಂದ್ರಾಡಳಿತ ಪ್ರದೇಶಗಳು ಇವೆ. ಆದರೆ ಬಜೆಟ್ ಉದ್ದಕ್ಕೂ ಧ್ವನಿಸಿದ ಮಾತು ಬಿಹಾರ ಮತ್ತು ಆಂಧ್ರಪ್ರದೇಶ ಇವುಗಳಿಗೆ ಈ ಬಜೆಟ್ ಹೆಚ್ಚಿನ ಅನುದಾನ ನೀಡಿದೆ. ತೆರಿಗೆ ಸರಳೀಕೃತ ಗೊಳಿಸಿರುವುದು ಉತ್ತಮ ನಿಣ೯ಯ. ಉದ್ಯೋಗ ಸೃಷ್ಟಿ ಮಾಡಲು ಅನುಕೂಲಕರ ಬಜೆಟ್ ಎಂದು ವ್ಯಾಖ್ಯಾನಿಸಲಾಗಿದೆ. ಈ ಬಾರಿಯಾದರೂ ಕನಸು ನನಸಾಗಬಹುದಾ ಕಾದು ನೇೂಡಬೇಕು. ಒಂದಂತೂ ಸತ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಉತ್ತಮ ಹೊಂದಾಣಿಕೆ ಸೃಷ್ಟಿಯಾದಾಗ ಮಾತ್ರ ಈ ಬಜೆಟ್‌ನ ಪ್ರತಿಫಲ ಜನರಿಗೆ ಸಮಪ೯ಕವಾಗಿ ತಲುಪಲು ಸಾಧ್ಯ.


- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

ನಿವೃತ್ತ ರಾಜ್ಯ ಶಾಸ್ತ್ರ ಮುಖ್ಯಸ್ಥರು

ಎಂಜಿಎಂ.ಕಾಲೇಜು ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Advt Slider:
To Top