ಚಿತ್ರಾಪುರ ಶ್ರೀಗಳ 13ನೇ ಚಾತುರ್ಮಾಸ್ಯ ವ್ರತ ಆರಂಭ

Upayuktha
0

ಉಡುಪಿ: ದ.ಕ‌ ಜಿಲ್ಲೆ ಸುರತ್ಕಲ್ ಸಮೀಪದ ಚಿತ್ರಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಜು.21ರಂದು ತಮ್ಮ 13ನೇ ಚಾತುರ್ಮಾಸ್ಯ ವ್ರತಸಂಕಲ್ಪಗೈದರು. ಶ್ರೀ ಮಠದಲ್ಲೇ ಶ್ರೀಗಳ ಚಾತುರ್ಮಾಸ್ಯ ವ್ರತ ನಡೆಯಲಿದೆ.


ವ್ರತ ಸಂಕಲ್ಪ ಸ್ವೀಕಾರಕ್ಕೂ ಮುನ್ನ ಶ್ರೀಗಳು ಉಡುಪಿ ಶ್ರೀ ಕೃಷ್ಣ, ಮುಖ್ಯಪ್ರಾಣರು, ಶ್ರೀ ಅನಂತೇಶ್ವರ ಶ್ರೀ ಚಂದ್ರಮೌಳೀಶ್ವರ ಶ್ರೀಮಧ್ವಾಚಾರ್ಯರ ಸನ್ನಿಧಾನಗಳ ದರ್ಶನ ಪಡೆದರು.


ಜಗದ್ಗುರು ಮಧ್ವಾಚಾರ್ಯರಿಂದ ಸ್ಥಾಪಿತವಾದ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿರುವ ಶ್ರೀ ಪೇಜಾವರ ಮಠದ ಯತಿ ಪರಂಪರೆಯಲ್ಲಿ ಬಂದ ಪ್ರಾತಃಸ್ಮರಣೀಯರಾದ ಶ್ರೀ ವಿಜಯಧ್ವಜ ತೀರ್ಥರಿಂದ 5 ಶತಮಾನಗಳ ಹಿಂದೆ ಸ್ಥಾಪಿತವಾದ ಶ್ರೀ ಸಂಸ್ಥಾನ ಚಿತ್ರಾಪುರ ಮಠದ 20ನೇ ಪೀಠಾಧಿಪತಿಗಳು ಶ್ರೀ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು.


ವೇದ ವೇದಾಂತಾದಿ ಶಾಸ್ತ್ರಗಳ ಅಧ್ಯಯನವನ್ನು ನಡೆಸಿರುವ ಶ್ರೀಗಳು ಶ್ರೀ ಮಠದ ಅಧೀನದಲ್ಲಿರುವ (ಶ್ರೀ ವಿಜಯಧ್ವಜ ತೀರ್ಥ ಗುರುಗಳಿಗೆ ಸ್ವಪ್ನಲಭ್ಯ) ಶ್ರೀ ಚಿತ್ರಾಪುರ ದುರ್ಗಾಪರಮೇಶ್ವರೀ ದೇವಳವನ್ನು ಭಕ್ತ ಜನರ ಸಹಯೋಗದೊಂದಿಗೆ ಇತ್ತೀಚೆಗಷ್ಟೆ ಕೋಟ್ಯಂತರ ರೂ ವೆಚ್ಚದಲ್ಲಿ ಸುಂದರವಾಗಿ ನವೀಕರಿಸಿ ಬಹಳ ವೈಭವದ ಬ್ರಹ್ಮಕಲಶೋತ್ಸವ ನೆರವೇರಿಸಿ ಶ್ರೀ ದೇವಿಗೆ ಅರ್ಪಿಸಿದ್ದಾರೆ.‌


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top