ಬಳ್ಳಾರಿ:ಬಳ್ಳಾರಿ ನಗರದ ರಾಯಲ್ ಸರ್ಕಲ್ ನಲ್ಲಿ ಬೆಳಗ್ಗೆ 11 ಗಂಟೆಗೆ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಅಲ್ಲಂಪ್ರಶಾಂತ್ ಅವರ ನೇತೃತ್ವದಲ್ಲಿ ಲೋಕಸಭೆಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ನಮ್ಮ ಕರ್ನಾಟಕ ರಾಜ್ಯಕ್ಕೆ ಯಾವುದೇ ತರದಲ್ಲಿ ಅನುದಾನ ನೀಡದೇ ಮಲತಾಯಿ ಧೋರಣೆ ತೋರಿಸಿದ್ದಾರೆ ಹಾಗೂ ಇಡಿ,ಸಿಬಿಐ ಮತ್ತು ಐಟಿ ಇಲಾಖೆಗಳನ್ನು ದುರುಪಯೋಗ ಪಡಿಸಿಕೊಂಡು ಇಂಡಿಯ ಒಕ್ಕೂಟದ ನಾಯಕರನ್ನು ಅರೆಸ್ಟ್ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಅಲ್ಲಂಪ್ರಶಾಂತ್ ಅವರು, ಡಿಸಿಸಿ ಕಾರ್ಯಧ್ಯಕ್ಷರು ಬೋಯಪಾಟಿ ವಿಷ್ಣುವರ್ಧನ್ ಅವರು, ರಾಜ್ಯ ಲಿಡಕರ್ ಅಧ್ಯಕ್ಷರು ಮುಂಡರಗಿ ನಾಗರಾಜ್ ಅವರು, ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರು ಮುಲ್ಲಂಗಿ ನಂದೀಶ್ ಅವರು, ಕೆಪಿಸಿಸಿ ವಕ್ತಾರರು ವೆಂಕಟೇಶ ಹೆಗಡೆ ಅವರು, ಜಿಲ್ಲಾ ಗ್ಯಾರೆಂಟಿ ಯೋಜನೆಯ ಅಧ್ಯಕ್ಷರಾದ ಚಿದಾನಂದಪ್ಪ ಯಾದವ್ ಅವರು,
ಹಿರಿಯ ನಾಯಕರು ಮಾನಯ್ಯ ಅವರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಮಂಜುಳ ಅವರು, ಓಬಿಸಿ ಸೆಲ್ ಅಧ್ಯಕ್ಷರಾದ ಸರಗು ನಾಗರಾಜ್ ಅವರು, ಮಾಜಿ ಮೇಯರ್ ರಾಜೇಶ್ವರಿ ಅವರು, ಮಾಜಿ ಉಪಮೇಯರ್ ಜಾನಕಮ್ಮ ಅವರು, ಬ್ಲಾಕ್ ಅಧ್ಯಕ್ಷರುಗಳಾದ ಅಭಿಲಾಶ್ ರವರು,
ಅಲ್ಲಾಭಕಾಶ್ ಅವರು, ಹಿರಿಯ ನಾಯಕರಾದ ಜಿ.ಜೆ. ರವಿಕುಮಾರ್ ಅವರು, ಮಹಾನಗರ ಪಾಲಿಕೆಯ ಸದಸ್ಯರಾದ ವಿಕ್ಕಿ ಅವರು, ಶಿವರಾಜ್, ರಾಜಶೇಖರ್ ಅವರು, ಗ್ಯಾರೆಂಟಿ ಯೋಜನೆಯ ಉಪಾಧ್ಯಕ್ಷರಾದ ಆಶಾಲತಾ ಅವರು, ಜಿಲ್ಲಾ ಸೋಷಿಯಲ್ ಮೀಡಿಯಾ ಅಧ್ಯಕ್ಷರಾದ ಅಫಾಕ್ ಅವರು, ವೀರಸೇನಾ ರೆಡ್ಡಿ ಅವರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ