ಹೊಂದಾಣಿಕೆಯ ಬದುಕು ಮಹಾತ್ಮನನ್ನಾಗಿಸುತ್ತದೆ: ಶಿವಕುಮಾರ ಶ್ರೀ

Upayuktha
0

ವೆಂಕಯ್ಯ ಕೂಸಯ್ಯ ಗುತ್ತೇದಾರ್ ಪುಣ್ಯ ಸ್ಮರಣೆ ಆಶೀರ್ವಚನ



ಸ್ಟೇಷನ್ ಗಾಣಗಾಪುರ: ಮನುಷ್ಯ ಹೊಂದಾಣಿಕೆಯ ಬದುಕನ್ನು ಮಾಡಿದರೆ ಬದುಕಿನಲ್ಲಿ ಸಾರ್ಥಕ ಮನುಷ್ಯನಾಗಿ ಮಹಾತ್ಮನ ಸ್ಥಾನಕ್ಕೆ ಏರಲು ಸಾಧ್ಯ ಎಂಬುದಕ್ಕೆ ವೆಂಕಯ್ಯ ಕೂಸಯ್ಯ ಗುತ್ತೇದಾರರ ಜೀವನವೇ ಸಾಕ್ಷಿ ಎಂದು ಬೀದರ ಚಿದಂಬರ ಆಶ್ರಮದ ಶ್ರೀ ಡಾ. ಶಿವಕುಮಾರ ಸ್ವಾಮಿಗಳು ಹೇಳಿದರು.


ಅಫಜಲ್ಪುರ ತಾಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ಜೂನ್ 22 ರಂದು ಶನಿವಾರ ನಡೆದ ವೆಂಕಯ್ಯ ಕೂಸಯ್ಯ ಗುತ್ತೇದಾರ್ ಅವರ 27ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ದುಃಖಗಳಿಗೆ ಎದೆಗುಂದದೆ ಸಹನಶೀಲತೆಯನ್ನು ಮೈಗೂಡಿಸಿಕೊಂಡು ಬಾಳಿದಾಗ ವಿಶೇಷ ಸಾಮರ್ಥ್ಯವನ್ನು ಹೊಂದಿ ಜೀವನದಲ್ಲಿ ಯಶಸ್ಸು ಗಳಿಸಿ ಮಹಾತ್ಮನ ಸ್ನಾನಕ್ಕೆ ಇರಲು ಸಾಧ್ಯವಾಗುತ್ತದೆ ವೆಂಕಯ್ಯ ಗುತ್ತೇದಾರ್ ಎಲ್ಲರ ಜೊತೆ ಹೊಂದಾಣಿಕೆಯ ಬದುಕನ್ನು ಮಾಡಿದವರು ಇತರರ ಜೊತೆ ಹೊಂದಾಣಿಕೆ ಮಾಡಿ ಬದುಕನ್ನು ಸಾರ್ಥಕತೆ ಮಾಡಿಕೊಂಡವರು ಅದಕ್ಕಾಗಿ 27 ವರ್ಷಗಳು ಕಳೆದರೂ ಆ ಮಹಾತ್ಮನನ್ನು ಜನ ಸ್ಮರಿಸುತ್ತಾರೆ. ವ್ಯಕ್ತಿ ಒಬ್ಬ ನಂಬರ್ ವನ್ ಆಗುವುದು ಸುಲಭ ಆದರೆ ನಂಬರ್ ಒನ್ ಆಗಿ ಕೊನೆಯವರೆಗೆ ಬಾಳುವುದು ಕಷ್ಟಕರ ದೇವರು ಕಷ್ಟಗಳನ್ನು ಕಲಿಸಲು ನೀರಿನಲ್ಲಿ ಮುಳುಗಿಸುತ್ತಾನೆ ಹೊರತು ಸಾಯಿಸಲು ಅಲ್ಲ. ಮನುಷ್ಯನ ಆಂತರಿಕ ಗುಣಗಳಿಂದ ಕೆಡುವುದು ಮತ್ತು ಯಶಸ್ಸು ಗಳಿಸುವುದು ಹೊರತು ಬೇರೆ ಯಾವುದರಿಂದಲೂ ಅಲ್ಲ. ಅಂತಹ ವಿಶೇಷ ವ್ಯಕ್ತಿತ್ವದೊಂದಿಗೆ ಜೀವನ ಮಾಡಿದ ಮಹಾತ್ಮನ ಈ ಪುಣ್ಯಾರಾಧನೆಯು ಪ್ರತಿಯೊಬ್ಬನಿಗೆ ಪಾಠವಾಗಬೇಕಾಕಾಗಿದೆ. ಮನಸ್ಸು, ವಿಚಾರ, ಕೆಲಸ ಒಳ್ಳೆಯದಾಗಿದ್ದರೆ ಕಲ್ಯಾಣದ ಜೊತೆಗೆ ಕೀರ್ತಿಯು ಬರುತ್ತದೆ. ಅದು ವೆಂಕಯ್ಯ ಗುತ್ತೇದಾರರ ಬದುಕಿನಿಂದ ನಮಗೆ ಕಲಿಯಲು ಸಾಧ್ಯ ಎಂದು ಶಿವಕುಮಾರ ಶ್ರೀಗಳು ಹೇಳಿದರು.



ಕಾರ್ಯಕ್ರಮದಲ್ಲಿ ಶ್ರೀಶೈಲ ಸುಲಫಲ ಮಠದ ಡಾ.ಕ್ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಚಿನಮಗೇರಿ ಮಹಾಂತೇಶ್ವರ ಮಠದ ವೀರ ಮಹಾಂತ ಶಿವಾಚಾರ್ಯರು, ಬಡದಾಳ ತೇರಿನ ಮಠದ ಶ್ರೀ ಚನ್ನಮಲ್ಲೇಶ್ವರ ಶಿವಾಚಾರ್ಯರು, ಅಫ್ಜಲ್ ಪುರ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು, ಹಿಂಚಗೇರಿ ಮಠದ ಶ್ರೀ ಶಂಭುಲಿಂಗ ಶಿವಯೋಗಿ ಶಿವಾಚಾರ್ಯರು, ಚೌದಾಪುರಿ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯರು ಆಶೀರ್ವಚನವಿತ್ತರು. ನಿತಿನ್ ವಿ ಗುತ್ತೇದಾರ ಪೂಜ್ಯರನ್ನು ಶಾಲು ಹಾರದೊಂದಿಗೆ ಸ್ವಾಗತಿಸಿ ಗೌರವಿಸಿದರು.


ಕಾರ್ಯಕ್ರಮದಲ್ಲಿ ಶಿವಶಂಕರ್ ಬಿರಾದಾರ್, ಬಾಬುರಾವ್ ಕೋಬಾಳ್, ಬಸಯ್ಯ ಗುತ್ತೇದಾರ್, ಶ್ರೀಶೈಲ ಗುತ್ತೇದಾರ್, ಪರಮೇಶ್ವರ್ ಕಲಶೆಟ್ಟಿ, ಶಿವಶರಣಪ್ಪ ಬಡದಾಳ ತಂಡದಿಂದ ಸಂಗೀತ ಕಾರ್ಯಕ್ರಮವು ನೆರವೇರಿತು.ಪುಣ್ಯ ಸ್ಮರಣೆ ಅಂಗವಾಗಿ ಜೂನ್ 20ರಂದು ಶುಕ್ರವಾರ ಇಡೀ ರಾತ್ರಿ ವಿವಿಧ ಭಜನಾ ಮಂಡಳಿ ಮತ್ತು ಜಾನಪದ ತಂಡಗಳಿಂದ ಭಜನಾ ಕಾರ್ಯಕ್ರಮ ನೆರವೇರಿತು.


ಉಚಿತ  ಆರೋಗ್ಯ ಶಿಬಿರ- ರಕ್ತದಾನ:

ಡಾ. ಅಜಯ್ ಗುತ್ತೇದಾರ್ ನೇತೃತ್ವದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ರಕ್ತ ಪರೀಕ್ಷೆ ಮತ್ತು ಕಣ್ಣಿನ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಕನ್ನಡಕ ವಿತರಣ ಕಾರ್ಯಕ್ರಮವು ನಡೆಯಿತು. ನೂರು ಜನರು ರಕ್ತ ತಪಾಸಣೆ ಹಾಗೂ ರಕ್ತದೊತ್ತಡ ಮಧುಮೇಹ ಪರೀಕ್ಷೆ ಮಾಡಿಸಿದರು ಈ ಸಂದರ್ಭದಲ್ಲಿ ಜಿಮ್ಸ್ ಆಸ್ಪತ್ರೆ ಸಹಭಾಗಿತ್ವದಿಂದ 15 ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು.


ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಮಾಲಿಕಯ್ಯ ವಿ ಗುತ್ತೇದಾರ್, ಮಾಜಿ ಶಾಸಕರಾದ ಸುಭಾಷ್ ಆರ್ ಗುತ್ತೇದಾರ್, ಚಂದ್ರಕಾಂತ್ ಗುತ್ತೇದಾರ್ ಸತೀಶ್ ವಿ ಗುತ್ತೇದಾರ್, ಸಂತೋಷ್ ಗುತ್ತೇದಾರ್ ಅರವಿಂದ ಗುತ್ತೇದಾರ್, ಮಹಾದೇವ ಗುತ್ತೇದಾರ್, ಅಶೋಕ್ ಗುತ್ತೇದಾರ್ ಬಡದಾಳ, ಅಕ್ಷಯ್ ಗುತ್ತೇದಾರ್, ಅಮೋಘ ಗುತ್ತೇದಾರ್, ರಿತೇಶ್ ಗುತ್ತೇದಾರ್ ಕುಪೇಂದ್ರ ಗುತ್ತೇದಾರ್ ಆಳಂದ, ಅಣ್ಣಾರಾವ್ ಪಾಟೀಲ್, ಅಣ್ಣರಾವ್ ಅಜಗೊಂಡ ಬಸವಣ್ಣಪ್ಪ ಅಂಕಲಗಿ, ದೀಪಕ್ ಭಟ್, ಅರುಣ್ ಭಟ್, ಪ್ರಕಾಶ್ ಕಟ್ಟಿಮನಿ ಬಿಜಾಪುರ ಮತ್ತಿತರರು ಉಪಸ್ಥಿತರಿದ್ದರು. ಸಂಗಮನಾಥ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top