ಪುತ್ತೂರು: ಪ್ರಸಾದಿನೀ ಆಯುರ್ನಿಕೇತನದಲ್ಲಿ 'ಯೋಗ ಉತ್ಸವ'

Upayuktha
0



ಪುತ್ತೂರು: ಜೂನ್ 21 ಶುಕ್ರವಾರದಂದು ಯೋಗ ದಿನಾಚರಣೆಯ ಅಂಗವಾಗಿ ಪುತ್ತೂರಿನ ನರಿಮೊಗರಿನಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್‌ನಲ್ಲಿ "ಯೋಗ ಉತ್ಸವ" ಕಾರ್ಯಕ್ರಮ ನಡೆಯಿತು. ಅಂತಾರಾಷ್ಟ್ರೀಯ ಯೋಗಪಟು ಕು. ತೃಪ್ತಿ ಎನ್. ಇವರಿಂದ ಯೋಗಾಸನ ಪ್ರದರ್ಶನ ಪ್ರಾತ್ಯಕ್ಷಿಕೆ ನಡೆಯಿತು.


ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಖ್ಯಾತ ಆಯುರ್ವೇದ ತಜ್ಞ ವೈದ್ಯ, ಆಯುರ್ವೇದ ವಾಚಸ್ಪತಿ ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರಿಂದ "ಮನಸ್ಸು ಮತ್ತು ಯೋಗ ಮಾರ್ಗ, ಲಾಭೋಪಾಯ" ಎಂಬ ವಿಷಯದ ಕುರಿತು ಸತ್ಸಂಗ ಪ್ರವಚನ ನಡೆಯಿತು. ಅವರು ಯೋಗದ ಆಧ್ಯಾತ್ಮಿಕ ಆಯಾಮವನ್ನು ತಿಳಿಸುತ್ತಾ "ಯೋಗವೆಂದರೆ ಕೇವಲ ಆಸನಗಳಲ್ಲ. ಅಹಿಂಸೆ, ಪರಮಾತ್ಮನಲ್ಲಿ ಶರಣಾಗತಿಗಳೂ ಸೇರಿವೆ. ಯೋಗ ಮತ್ತು ಆಯುರ್ವೇದ ವಿಚಾರದ ಯಾವತ್ತೂ ಸೇವೆಗಳಿಗೆ ನಮ್ಮ ಆಸ್ಪತ್ರೆ ಬದ್ಧವಾಗಿದೆ. ವಿದೇಶದಿಂದ ಕೂಡಾ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವುದಕ್ಕೆ, ಇಲ್ಲಿನ ಗುಣಮಟ್ಟದ ಆಯುರ್ವೇದ ಚಿಕಿತ್ಸೆ ಹಾಗೂ ಗುಣ ಹೊಂದಿದ ರೋಗಿಗಳ ಮನದುಂಬಿದ ಹರಸುವಿಕೆಯೇ ಕಾರಣ" ಎಂದರು.


ಉದ್ಘಾಟನೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಾ ಬ್ಯಾಂಕ್ ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹಾಗೂ ರೋಟರಿಯನ್ ಎ. ಜಗಜೀವನ್ ದಾಸ್ ರೈ ಇವರು ವಹಿಸಿಕೊಂಡರು. ಅವರು ಮಾತನಾಡುತ್ತಾ "ಡಾ. ಬಂಗಾರಡ್ಕ ಅವರ ಪರಿಣಾಮಕಾರಿ ಅರೋಗ್ಯ ಲೇಖನಗಳು ಸಮಾಜದಲ್ಲಿ ಪರಿವರ್ತನೆ ತರುತ್ತಿವೆ. ಯೋಗ ಆರೋಗ್ಯಕ್ಕೆ ಎಷ್ಟು ಸಹಕಾರಿಯೆಂದರೆ ನನ್ನ ಬಿ.ಪಿ. ಯೋಗ ಮಾಡಿದ ಮೇಲೆ ನಿಯಂತ್ರಣಕ್ಕೆ ಬಂತು" ಎಂದರು.


ಧನ್ವಂತರಿ ಸುಳಾದಿ, ಭಜನೆಯನ್ನು ಕು. ಸುಧೀಕ್ಷಾ ಹಾಗೂ ಕು. ಸುನಿಧಿ, ಕಾಂಚನಮಾಲಾ ಸಿಂಧೂರ ಮನೆ, ಗೀತಾ ಸದಾಶಿವ ಭಟ್ ನವಚೇತನ ನಡೆಸಿಕೊಟ್ಟರು. ದೇವಕಿ ಭಟ್, ಭಾರತಿ ಭಜನೆಯಲ್ಲಿ ಸಹಕರಿಸಿದರು. ಆಸ್ಪತ್ರೆಯ ವ್ಯವಸ್ಥಾಪನಾ ನಿರ್ದೇಶಕಿ ಡಾ. ಶ್ರುತಿ ಎಂ. ಎಸ್. ಕಾರ್ಯಕ್ರಮ ನಿರ್ವಹಿಸಿದರು. ಆಸ್ಪತ್ರೆಯ ಆಡಳಿತ ಸಮಿತಿ ಸದಸ್ಯ ಎಂ. ಸುಬ್ರಮಣ್ಯ ಭಟ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಧನಂಜಯ ಭಟ್ ಧನ್ಯವಾದಗೈದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ಉಡುಪಿ ಮಿಲಾಗ್ರಿಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಹರಿಣಾಕ್ಷಿ ಕೇವಳ, ನಿವೃತ್ತ ಪ್ರಾಧಾಪಕರಾದ ರಾಜಾರಾಮ ನೆಲ್ಲಿತ್ತಾಯ, ಸದಾಶಿವ ಭಟ್ ನವಚೇತನ, ಯೋಗ ಶಿಕ್ಷಕ ನವೀನ್ ಕೆಯ್ಯೂರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top