ಜೂ.21: ಪ್ರಸಾದಿನೀ ಆಯುರ್ನಿಕೇತನದಲ್ಲಿ ಯೋಗ ಉತ್ಸವ

Upayuktha
0


ಪುತ್ತೂರು: ಜೂನ್ 21 ಶುಕ್ರವಾರದಂದು ಸಂಜೆ 6 ಗಂಟೆಗೆ ಯೋಗ ದಿನಾಚರಣೆಯ ಅಂಗವಾಗಿ ಪುತ್ತೂರಿನ ನರಿಮೊಗರಿನಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್ ನಲ್ಲಿ "ಯೋಗ ಉತ್ಸವ" ಕಾರ್ಯಕ್ರಮವಿದೆ. ಅಂತಾರಾಷ್ಟ್ರೀಯ ಯೋಗಪಟು ತೃಪ್ತಿ ಎನ್. ಇವರಿಂದ ಯೋಗಾಸನ ಪ್ರದರ್ಶನ ಪ್ರಾತ್ಯಕ್ಷಿಕೆ ನಡೆಯಲಿದೆ.


ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಆಯುರ್ವೇದ ತಜ್ಞ ವೈದ್ಯ ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರಿಂದ "ಮನಸ್ಸು ಮತ್ತು ಯೋಗ ಮಾರ್ಗ, ಲಾಭೋಪಾಯ" ಎಂಬ ವಿಷಯದ ಕುರಿತು ಸತ್ಸಂಗ ನಡೆಯಲಿದೆ. ಉದ್ಘಾಟನೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಾ ಬ್ಯಾಂಕ್ ನಿವೃತ್ತ ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ ರೋಟರಿಯನ್ ಎ. ಜಗಜೀವನ್ ದಾಸ್ ರೈ ಇವರು ವಹಿಸಿಕೊಳ್ಳಲಿದ್ದಾರೆ.


ಧನ್ವಂತರಿ ಸುಳಾದಿ, ಭಜನೆಯನ್ನು ಕು. ಸುಧೀಕ್ಷಾ ಹಾಗೂ ಕು. ಸುನಿಧಿ ನಡೆಸಿಕೊಡಲಿದ್ದಾರೆ ಎಂದು ಆಸ್ಪತ್ರೆಯ ವ್ಯವಸ್ಥಾಪನಾ ನಿರ್ದೇಶಕಿ ಡಾ. ಶ್ರುತಿ ಎಂ. ಎಸ್. ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9740545979 ದೂರವಾಣಿಗೆ ಕರೆ ಮಾಡಲು ಕೋರಿದ್ದಾರೆ.



Post a Comment

0 Comments
Post a Comment (0)
To Top