ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯವು ಪಾಂಡೇಶ್ವರದ ನ್ಯೂ ಕ್ಯಾಂಪಸ್‌ನಲ್ಲಿ ಜೂನ್ 21, 2024 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಯೋಜಿಸಿತ್ತು.
ಖ್ಯಾತ ಯೋಗ ಗುರು, ಕದ್ರಿ ಪ್ರಕೃತಿ ಯೋಗ ಕುಟೀರದ ಸಂಸ್ಥಾಪಕರು ಮತ್ತು ನಿರ್ದೇಶಕರಾದ ಶ್ರೀರಾಧಾ ಕೃಷ್ಣ ಗುರೂಜಿಗಳ ನೇತೃತ್ವದಲ್ಲಿ ಪ್ರಶಾಂತ ಯೋಗಾಭ್ಯಾಸದೊಂದಿಗೆ ಅಧಿವೇಶನ ಆರಂಭವಾಯಿತು. ಭಾರತ್ ಕನ್‌ಸ್ಟ್ರಕ್ಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮುಸ್ತಫಾ ಅವರು ಯೋಗದ ಪ್ರಯೋಜನಗಳ ಕುರಿತು ಒಳನೋಟಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.
ಶ್ರೀನಿವಾಸ ವಿಶ್ವವಿದ್ಯಾಲಯದ ಅಭಿವೃದ್ಧಿ ರಿಜಿಸ್ಟ್ರಾರ್ ಡಾ. ಅಜಯ್ ಕುಮಾರ್ ಸ್ವಾಗತಿಸಿ, ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುವಲ್ಲಿ ಯೋಗದ ಮಹತ್ವವನ್ನು ಒತ್ತಿ ಹೇಳಿದರು.
ಡಾ. ಸೋನಿಯಾ ನೊರೊನ್ಹಾ, ಡೀನ್ ಇನ್ಸ್ಟಿಟ್ಯೂಟ್ ಆಫ್ ಪೋರ್ಟ್ ಶಿಪ್ಪಿಂಗ್ & ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್‌ನ , ಡಾ.ವೆಂಕಟೇಶ್ ಅಮೀನ್, ಡೀನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಕಾಮರ್ಸ್ ಮತ್ತು ಡಾ. ಸುಬ್ರಹ್ಮಣ್ಯ ಭಟ್, ಡೀನ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಮತ್ತು ಇನ್ಫರ್ಮೇಷನ್ ಸೈನ್ಸ್, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಉತ್ಸಾಹಿ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಡಾ.ಎಸ್.ರಾಜಶೇಖರ್, ಡೀನ್ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ವಂದಿಸಿದರು. ಡಾ. ಪ್ರೇಮ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


