ಉಡುಪಿ: ರಾಮ ಮೋಹನ ಕೊಡಂಚ ಅವರಿಂದ ಸಪ್ತೋತ್ಸವ ಸೇವೆ

Upayuktha
0

ಉಡುಪಿ: ಪರಮಪೂಜ್ಯ ಪರ್ಯಾಯ ಪೂಜಾ ದೀಕ್ಷಿತರಾದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶ್ರೀಕೃಷ್ಣ ಭಕ್ತಿ ಪ್ರಚಾರಕ್ಕಾಗಿ ವಿಶ್ವಾದ್ಯಂತ ನಿರ್ಮಿಸಿದ ಶ್ರೀಕೃಷ್ಣ ಮಂದಿರಗಳ ಪೈಕಿ 2000 ನೆಯ ಇಸವಿಯಲ್ಲಿ ಸ್ಥಾಪಿಸಿದ ಮೊದಲ ಕೃಷ್ಣ ಮಂದಿರದ ಮೊದಲ ಅರ್ಚಕರಾಗಿ ನೇಮಕಗೊಂಡಿದ್ದ ಶ್ರೀ ರಾಮ ಮೋಹನ ಕೊಡಂಚರವರು ಪೂಜ್ಯ ಗುರುಗಳ ಈ ಚತುರ್ಥ ಪರ್ಯಾಯ ಕಾಲದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣರಿಗೆ ಸಪ್ತೋತ್ಸವ ಸೇವೆಯನ್ನು ಸಲ್ಲಿಸಿದರು.


ಜೊತೆಗೆ ಭಾಗವತ ಸಪ್ತಾಹವನ್ನು ವಿದ್ವಾನ್ ವಿಜಯಸಿಂಹಾಚಾರ್ಯ ತೋಟಂತಿಲ್ಲಾಯರವರಿಂದ ಏಳು ದಿನಗಳ ಕಾಲ ನಡೆಸಲಾಯಿತು.



ಈ ಸಂದರ್ಭದಲ್ಲಿ ಋಕ್ ಸಂಹಿತಾ ಯಾಗವನ್ನು ವಿದ್ವಾನ್ ಕಿದಿಯೂರು ರಾಮದಾಸ್ ಭಟ್ ಅವರು ನಡೆಸಿಕೊಟ್ಟರು. ಈ ಎಲ್ಲ ಕಾರ್ಯಕ್ರಮಗಳ ಸಮಾಪನೆ ಶ್ರೀಕೃಷ್ಣನಿಗೆ ಚೂರ್ಣೋತ್ಸವ ಸೇವೆಯೊಂದಿಗೆ ಸಂಪನ್ನಗೊಂಡಿತು.


ವೈಶಿಷ್ಟ್ಯ ಪೂರ್ಣವಾಗಿ ನಡೆದ ಈ ಸರಣಿ ಕಾರ್ಯಕ್ರಮಗಳ ಸೇವಾ ಕರ್ತೃಗಳಾದ ಶ್ರೀ ರಾಮ್ ಮೋಹನ್ ಕೊಡಂಚ ದಂಪತಿಗಳನ್ನು ಪೂಜ್ಯ ಪರ್ಯಾಯ ಶ್ರೀಪಾದರು ಶ್ರೀಕೃಷ್ಣಗೀತಾ ನುಗ್ರಹ ಪ್ರಶಸ್ತಿ ನೀಡಿ ಅನುಗ್ರಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top