ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿಯಲ್ಲಿ, ರಾಗ ಧನ ಸಂಸ್ಥೆ (ರಿ) ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗ ಹಾಗೂ ಬೆಂಗಳೂರಿನ ಸಹಬಾಳ್ವೆ ಟ್ರಸ್ಟ್ ಸಹ ಪ್ರಾಯೋಜಕತ್ವದೊಂದಿಗೆ 'ರಾಗರತ್ನ ಮಾಲಿಕೆ-25' ಜೂ.2ರಂದು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.
ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಅನುಗ್ರಹ ಮಂತ್ರಾಕ್ಷತೆ ನೀಡಿದರು.
ರಾಗ ಧನ ಸಂಸ್ಥೆಯ ಕಾರ್ಯದರ್ಶಿ ವಿ| ಉಮಾಶಂಕರಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಣವಶ್ರೀ ಯಶಸ್ವಿ ಸುಬ್ಬರಾವ್ ಮತ್ತು ಅವರ ಶಿಷ್ಯ ಚಿರಂಜೀವಿ ಮೋಕ್ಷಿತ್ ಎಸ್. ಬೆಂಗಳೂರು ಇವರ ದ್ವಂದ್ವ ವಯೊಲಿನ್ ವಾದನ ಕಛೇರಿ ನಡೆಯಿತು. ಮೃದಂಗದಲ್ಲಿ ಡಾ| ಅಕ್ಷಯ ನಾರಾಯಣ ಕಾಂಚನ, ಘಟಂನಲ್ಲಿ ಎಸ್. ಮಂಜುನಾಥ್ ಮೈಸೂರು ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ