|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಡುಪಿ ಪರ್ಯಾಯ ಪುತ್ತಿಗೆ ಶ್ರೀಗಳಿಂದ ಪ್ರೊ. ಸಾಲಿಗ್ರಾಮ ಶ್ರೀನಿವಾಸ ಅಡಿಗರಿಗೆ ಸಿದ್ಧಾಂತ ಸಾಮ್ರಾಟ್ ಬಿರುದು ಪ್ರದಾನ

ಉಡುಪಿ ಪರ್ಯಾಯ ಪುತ್ತಿಗೆ ಶ್ರೀಗಳಿಂದ ಪ್ರೊ. ಸಾಲಿಗ್ರಾಮ ಶ್ರೀನಿವಾಸ ಅಡಿಗರಿಗೆ ಸಿದ್ಧಾಂತ ಸಾಮ್ರಾಟ್ ಬಿರುದು ಪ್ರದಾನಉಡುಪಿ: ವಿದ್ಯೆಯ ಮುಖ್ಯಕ್ಷೇತ್ರವಾದ ಉಡುಪಿಯಲ್ಲಿ ವಿದ್ವಾಂಸರ ನಾಡಿನಲ್ಲಿ ಮಾಗಿದ ವಿದ್ವಾಂಸರು ಹೇಗಿರುತ್ತಾರೆ ಎಂಬುದಕ್ಕೆ ಬೈಲೂರು ಪದ್ಮನಾಭ ತಂತ್ರಿಗಳು ಉದಾಹರಣೆಯಾಗಿದ್ದಾರೆ. ಬೈಲೂರು ಪದ್ಮನಾಭತಂತ್ರಿಗಳ ಪ್ರತಿರೂಪದಂತಿರುವ ಸಾಲಿಗ್ರಾಮ ಶ್ರೀನಿವಾಸ ಅಡಿಗರಿಗೆ ನೀಡಿರುವುದು ಅತ್ಯಂತ ಯೋಗ್ಯವಾಗಿದೆ. ಜನರಿಗೆ ಧರ್ಮ ಪ್ರಜ್ಞೆ ಜಾಗೃತವಾಗಿರಲು ಜ್ಯೋತಿಷ್ಯ ಶಾಸ್ತ್ರವೂ ಕಾರಣವಾಗಿದೆ. ಜ್ಯೋತಿಷ್ಯ ಶಾಸ್ತ್ರ ಗಣಿತವನ್ನು ಆಶ್ರಯಿಸಿದೆ. ಇಂತಹಾ ಕಠಿಣ ಗಣಿತವನ್ನು ಬಲ್ಲ ಅಪರೂಪದ ವಿದ್ವಾಂಸರು ಅಡಿಗರು ಆಗಿದ್ದಾರೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದರು ಅಭಿಪ್ರಾಯಪಟ್ಟರು.


ಅವರು ಕೀರ್ತಿಶೇಷ ಬೈಲೂರು ಅನಂತಪದ್ಮನಾಭತಂತ್ರಿಗಳ ಜನ್ಮಶತಮಾನೋತ್ಸವದ ಸಂಸ್ಮರಣೆಯಲ್ಲಿ ಪ್ರೊ. ಸಾಲಿಗ್ರಮ ಶ್ರೀನಿವಾಸ ಅಡಿಗರಿಗೆ ಕೊಡಮಾಡಿದ ಸಿದ್ಧಾಂತ ಸಾಮ್ರಾಟ್ ಎಂಬ ಬಿರುದನ್ನು ಮತ್ತು ಪ್ರಶಸ್ತಿಯನ್ನು ಮತ್ತು ಐವತ್ತು ಸಹಸ್ರ ರೂಪಾಯಿಗಳನ್ನು ನೀಡಿ ಆಶಿರ್ವದಿಸಿದರು.   

ಇದೇ ಸಂದರ್ಭದಲ್ಲಿ ಪರ್ಯಾಯ ಮಠದ ವತಿಯಿಂದಲೂ ಇಪ್ಪತ್ತೈದು ಸಹಸ್ರ ರೂಪಾಯಿಗಳನ್ನು ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪರ್ಯಾಯ ಮಠದ ಕಿರಿಯ ಶ್ರೀಪಾದರಾದ ಶ್ರೀಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಉಪಸ್ಥಿತರಿದ್ದರು.


ಅಭಿನಂದನ ಭಾಷಣಗೈದ ವಿದ್ವಾನ್ ಗೋಪಾಲಕೃಷ್ಣ ಜೋಯೀಸರು, ಜ್ಯೋತಿಷ್ಯದ ಗಣಿತ ಸ್ಕಂದದಲ್ಲಿ ಭಾರತದಲ್ಲೇ ಅತ್ಯಂತ ಅಪರೂಪದ ವಿದ್ವಾಂಸರು ಸಾಲಿಗ್ರಾಮ ಶ್ರೀನಿವಾಸ ಅಡಿಗರು. ಕಬ್ಬಿಣದ ಕಡಲೆಯಂತಹ ವಿಷಯಗಳನ್ನು ಅತ್ಯಂತ ಸರಳವಾಗಿ ವಿದ್ಯಾರ್ಥಿಗಳಿ ಬೋಧಿಸುವ ನಿಗರ್ವಿ ಸರಳ ವಿದ್ವಾಂಸರಗಿದ್ದಾರೆ. ಉಡುಪಿಯ ಸಂಸ್ಕೃತ ಕಾಲೇಜನ್ನು ಜ್ಯೋತಿಷ್ಯ ಕ್ಕೆ ಪ್ರಸಿದ್ಧವಾಗುವಂತೆ ಮಾಡಿದವರು. ಕೇವಲ ಪಂಡಿತನಲ್ಲದೇ ಬಹುಮುಖಪ್ರತಿಭಾಶಲಿಗಳಾಗಿದ್ದಾರೆ. ಹಿಂದೀ ಭಾಷೆಯ ಪಾಟವ ನಾಟಕ ಕಲೆಯೂ ಇವರಲ್ಲಿ ಮೇಳೈಸಿದೆ.


ನಿವೃತ್ತ ಜೀವನದಲ್ಲೂ ಜ್ಯೋತಿಷ ವಿಶ್ವಕೋಶಕ್ಕೆ ಸಮರ್ಥ ಮಾರ್ಗದರ್ಶನ ನೀಡಿದ್ದಾರೆ. ಇಷ್ಟಾಗಿಯೂ ಅತ್ಯಂತ ವಿನೀತ ವ್ಯಕ್ತಿತ್ವ ವ್ಯಕ್ತಿತ್ವ ಇವರದು. 

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಎಸ್. ಎಮ್. ಎಸ್. ಪಿ ಸಭಾದ ಕಾರ್ಯದರ್ಶಿಗಳಾದ ವಿದ್ವಾನ್ ಗೋಪಾಲಕೃಷ್ಣ ಜೋಯಿಸರು, ಕೋಶಾಧಿಕಾರಿಗಳಾದ ಚಂದ್ರಶೇಖರ ಆಚಾರ್ಯರು, ಪ್ರಸಿದ್ಧ ಜ್ಯೋತಿಷಿಗಳಾದ ವಿ।ವಿದ್ವಾನ್ ಮುರಳೀಧರ ತಂತ್ರಿ, ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ರಾವ್ ಮತ್ತು ಅತುಲ್ ಕುಡ್ವ ಉಪಸ್ಥಿತರಿದ್ದರು.


ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳಾದ ಗಜಾನನ ಭಟ್ಟ, ಆದಿತ್ಯ ಎ.ಎಸ್. ಮತ್ತು ವಿನಯ ಹೆಗಡೆ ವೇದಘೋಷಗೈದರು. ಪ್ರಾಂಶುಪಾಲರು ಶ್ರೀಗಳವರನ್ನು ಮತ್ತು ಅತಿಥಿಗಳನ್ನು ಸ್ವಾಗತಿಸಿದರು.ಡಾ. ರಾಧಾಕೃಷ್ಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post