ತಿರುವನಂತಪುರದಲ್ಲಿ 2 ದಿನಗಳ ಮುಜಂಟಿ ಜೇನುಕೃಷಿಕರ ರಾಷ್ಟ್ರೀಯ ಸಮಾವೇಶ

Upayuktha
0

ಮಂಗಳೂರು: ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಜೂ.18-19ರಂದು ಎರಡು ದಿನಗಳ "ಮುಜಂಟಿ ಜೇನುಕೃಷಿಕರ ರಾಷ್ಟ್ರೀಯ ಸಮಾವೇಶ -2024"  ತಿರುವನಂತಪುರಂ (YMCA) ಹಾಲ್ ನಲ್ಲಿ ಜರುಗಿತು. ಈ ಎರಡು ದಿನಗಳ ಕಾರ್ಯಕ್ರಮವನ್ನು(FIA) ಸ್ಥಳೀಯ ಜೇನುಕೃಷಿಕರ ಒಕ್ಕೂಟ ಆಯೋಜಿಸಿತ್ತು. ಈ ಬೃಹತ್ ಸಮಾವೇಶದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ, ಪುಣೆ, ಮುಂಬೈ, ಒರಿಸ್ಸಾ, ಮೇಘಾಲಯ, ನಾಗಲ್ಯಾಂಡ್ ಹೀಗೆ ವಿವಿಧ ರಾಜ್ಯಗಳಿಂದ ಹಲವಾರು ಸ್ವಿಂಗ್‌ಲೆಸ್‌ ಬೀ ವಿಜ್ಞಾನಿಗಳು ಹಾಗೂ ಮುಜಂಟಿ ಜೇನುಕೃಷಿಕರು ಭಾಗವಹಿಸಿದ್ದರು.


ಮೊದಲ ದಿನ ಸೈಂಟಿಸ್ಟ್ ಗಳವರಿಂದ ಮುಜಂಟಿ ಜೇನುನೊಣಗಳ ಶರೀರ ರಚನೆ ಹಾಗೂ ಈ ಕಿರು ಜೇನುನೊಣಗಳು ವಿವಿಧ ಬೆಳೆಗಳಲ್ಲಿ ನಡೆಸುವ ಪರಾಗಸ್ಪರ್ಶದ ಕುರಿತು ಮಾಹಿತಿಯನ್ನು ನೀಡಿದರು. ನಂತರ ವಿವಿದ ರಾಜ್ಯಗಳಿಂದ ಆಗಮಿಸಿದ ರೈತರು ತಮ್ಮತಮ್ಮ ಅನುಭವಗಳನ್ನು ಹಂಚಿಕೊಂಡರು. ಎರಡನೇ ದಿವಸ ವಿಜ್ಞಾನಿಗಳು ಹಾಗೂ ರೈತರಿಂದ ಮುಜಂಟಿ ಜೇನುಕೃಷಿಯ ಬಗ್ಗೆ ಸಂವಾದ-ಸಮಾಲೋಚನೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಭಾಗಹಿಸಿದ ವಿಜ್ಞಾನಿ ಹಾಗೂ ರೈತರಿಗೆ ಉತ್ತಮ ಗುಣಮಟ್ಟದ ಆಹಾರ ಹಾಗೂ ವಸತಿ ಸೌಕರ್ಯವನ್ನು ಏರ್ಪಡಿಸಿದ್ದರು.


ಕೇರಳದ FIA ಜೇನು ಕೃಷಿಕರ ಒಕ್ಕೂಟದ ಅಧ್ಯಕ್ಷ ಡಾ ಸ್ಟೀಫೆನ್, ಡಾ ಟಿಪಿ ರಾಜೇಂದ್ರನ್, ಬೆಂಗಳೂರು ಜಿಕೆವಿಕೆಯ ಡಾ ಶಶಿಧರ್ ವಿರಕ್ತಮಠ, ಡಾ ಕೆ ಟಿ ವಿಜಯಕುಮಾರ್ ಹೀಗೆ ಹಲವಾರು ಪ್ರಮುಖರು ಭಾಗವಹಿದ್ದರು.


- ರಾಮಚಂದ್ರ ಪುದ್ಯೋಡು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top