ಪುತ್ತೂರು: ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಅರಿವನ್ನು ಮೂಡಿಸಬೇಕಾದದ್ದು ಶಿಕ್ಷಣ ಸಂಸ್ಥೆಗಳ ಹೊಣೆಗಾರಿಕೆ. ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಇಲ್ಲಿ 2024 - 25 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆಯು ಚುನಾವಣಾ ಪ್ರಕ್ರಿಯೆಯಂತೆ ನಡೆದು ಅಧ್ಯಕ್ಷರು ,ಕಾರ್ಯದರ್ಶಿ ,ಅನ್ಯಾನ್ಯ ಖಾತೆಗಳಿಗೆ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು.
ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪವನ್ ಭಾರದ್ವಾಜ್, ಉಪಾಧ್ಯಕ್ಷರಾಗಿ ವರ್ಷಿಣಿ ಆಳ್ವ, ಕಾರ್ಯದರ್ಶಿಯಾಗಿ ಸಂಜಯ್ ಎನ್, ಜೊತೆ ಕಾರ್ಯದರ್ಶಿಯಾಗಿ ವಿಕಾಸ್ ಬಿ, ಸಾಂಸ್ಕೃತಿಕ ಮಂತ್ರಿಯಾಗಿ ಅದಿತಿ ನಾಯಕ್ ಹಾಗೂ ಉಪಮಂತ್ರಿಯಾಗಿ ಕೃಷ್ಣ ಎಸ್ ನಟ್ಟೋಜ, ಆರೋಗ್ಯ ಹಾಗೂ ಸ್ವಚ್ಛತಾ ಮಂತ್ರಿಯಾಗಿ ವೈಷ್ಣವಿ ಆಳ್ವ ಹಾಗೂ ಉಪಮಂತ್ರಿಯಾಗಿ ಅಂಶಕ ಬಿ ಜಿ, ಶಿಸ್ತು ಮಂತ್ರಿಯಾಗಿ ಶುಭನ್ ಶೆಣೈ ಹಾಗೂ ಉಪಮಂತ್ರಿಯಾಗಿ ಅದ್ವಿತ್ ಎಚ್ ರೈ, ಶಿಕ್ಷಣ ಮಂತ್ರಿಯಾಗಿ ಪೂರ್ವಿ ಕೆ ಎಮ್ ಮತ್ತು ಉಪಮಂತ್ರಿಯಾಗಿ ಶ್ರೀಲಕ್ಷ್ಮೀ , ಕ್ರೀಡಾ ಮಂತ್ರಿಯಾಗಿ ಶ್ರೀಶ ಮತ್ತು ಉಪಮಂತ್ರಿಯಾಗಿ ವಿಶ್ರುತ್ ರೈ ಆಯ್ಕೆಯಾಗಿರುತ್ತಾರೆ.
ಚುನಾವಣಾಧಿಕಾರಿಗಳಾಗಿ ಉಪ ಪ್ರಾಂಶುಪಾಲೆ ಶೈನಿ ಕೆ. ಜೆ. ಹಾಗೂ ಗಣಕ ವಿಜ್ಞಾನ ಉಪನ್ಯಾಸಕ ಪ್ರದೀಪ್ ಕೆ ವೈ ಇವರು ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯರ ಮಾರ್ಗದರ್ಶನದಂತೆ ಉಪನ್ಯಾಸಕ ಉಪನ್ಯಾಸಕೇತರ ವೃಂದದ ಸಹಕಾರದಿಂದ ಚುನಾವಣೆ ನಡೆಸಿದರು. ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಸುಬ್ರಮಣ್ಯ ನಟ್ಟೋಜರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ