ರಾಜ್ಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ರಕ್ಷಾ ಜಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Upayuktha
0


ಪುತ್ತೂರು: ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಜರುಗಿದ  ರಾಜ್ಯ ಮಟ್ಟದ  ಜೂನಿಯರ್ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ +87  ವಿಭಾಗದಲ್ಲಿ ಭಾಗವಹಿಸಿದ ಪುತ್ತೂರಿನ ವಿವೇಕಾನಂದ ಕಾಲೇಜಿನ  ವಿದ್ಯಾರ್ಥಿನಿ ರಕ್ಷಾ.ಜಿ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ ಗೆ ಆಯ್ಕೆ ಆಗಿದ್ದಾರೆ. 


ಇವರು ಜೂನ್ ತಿಂಗಳ 18 ರಿಂದ 21 ರ ವರೆಗೆ ಮಧ್ಯಪ್ರದೇಶ ದ ಇಂಧೊರ್ ನಲ್ಲಿ ನಡೆಯಲಿರುವ 'ಅಸ್ಮಿತಾ ಖೇಲೊ ಇಂಡಿಯಾ' ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ  ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ  ರವಿಶಂಕರ್ ಹಾಗೂ ಯತೀಶ್ ಇವರ ಮಾರ್ಗದರ್ಶನದಲ್ಲಿ ಡಾ. ಜ್ಯೋತಿ ತರಬೇತಿ ನೀಡಿರುತ್ತಾರೆ. 


ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕ ವೃಂದ ಹಾಗೂ ಅಧ್ಯಾಪಕೇತರ ವೃಂದದವರು ಶುಭಹಾರೈಸಿದ್ದಾರೆ.  ಇವರು ಬಂಟ್ವಾಳದ ಬರಿಮಾರಿನ ಡೀಕಯ್ಯ ಪೂಜಾರಿ ಹಾಗೂ ಎಸ್ ಲಲಿತಾ ಇವರ ಪುತ್ರಿ. ಪ್ರಸ್ತುತ ವಿವೇಕಾನಂದ ಪದವಿ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top