ಶ್ರೀವ್ಯಾಸರಾಜರ ಕೊಡುಗೆ ಅಗಾಧ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರು

Upayuktha
0


ಉಡುಪಿ: ಮಹಾಮಹಿಮರಾದ ಶ್ರೀವ್ಯಾಸರಾಜರು ವೇದಾಂತ ಪ್ರಪಂಚಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿದ್ದಾರೆ. ಅವರು ರಚಿಸಿದ ನ್ಯಾಯಾಮೃತ-ಚಂದ್ರಿಕಾ-ತರ್ಕತಾಂಡವ ಗ್ರಂಥಗಳು ನರಸಿಂಹ ದೇವರ ಮೂರು ಕಣ್ಣಿನಂತೆ ಕಂಗೊಳಿಸುತ್ತಿವೆ. ಸಂಸ್ಕೃತ -ಕನ್ನಡ ವಾಙ್ಮಯ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದ ಕೀರ್ತಿ ಶ್ರೀವ್ಯಾಸರಾಜರಿಗೆ ಸಲ್ಲುತ್ತದೆ. ಇಂತಹ ಯತಿವರೇಣ್ಯರ ಗ್ರಂಥಗಳನ್ನು ಅಧ್ಯಯನ ಮಾಡುವುದು ಸುಕೃತದ ಫಲವಾಗಿದೆ ಎಂದು ಪರ್ಯಾಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದರು ತಿಳಿಸಿದರು.


ಉಡುಪಿಯಲ್ಲಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಬೆಂಗಳೂರಿನ ಪ್ರಸಿದ್ಧ ವಿದ್ವಾಂಸರಾದ ಡಾ. ಎನ್. ವೆಂಕಟೇಶಾಚಾರ್ಯರು ನಡೆಸಿದ ನ್ಯಾಯಾಮೃತ ಗ್ರಂಥದ ಪಾಠದ ಮಂಗಳೋತ್ಸವದಲ್ಲಿ ಅನುಗ್ರಹ ಸಂದೇಶವನ್ನು ನೀಡಿ ತಮ್ಮ ಪ್ರಿಯ ಶಿಷ್ಯರಾದ ಡಾ. ವೆಂಕಟೇಶಾಚಾರ್ಯರ ಸಾಧನೆಯನ್ನು ಪ್ರಶಂಸಿಸಿ ಶ್ರೀಕೃಷ್ಣಾನುಗ್ರಹದೊಂದಿಗೆ ಸನ್ಮಾನಿಸಿದರು.


ಈ ಸಂದರ್ಭದಲ್ಲಿ ಪಾಠ ಕೇಳಿದ ಶಿಷ್ಯರು ಸುವರ್ಣದ ಶ್ರೀಕೃಷ್ಣ ಪ್ರತಿಮೆಯನ್ನು ಡಾ. ವೆಂಕಟೇಶಾ ಚಾರ್ಯರಿಗೆ ಪೂಜ್ಯ ಶ್ರೀಪಾದರ ಮೂಲಕ ನೀಡಿ ಸತ್ಕರಿಸಿದರು.


ಈ ಮಂಗಳ ಕಾರ್ಯಕ್ರಮದಲ್ಲಿ ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾದ ವಿದ್ವಾನ್ ಸತ್ಯನಾರಾಯಣ ಆಚಾರ್ಯರು, ಡಾ.ಬಿ. ಗೋಪಾಲಾಚಾರ್ಯರು, ಮುಂತಾದ ವಿದ್ವಾಂಸರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Advt Slider:
To Top