ಉಡುಪಿ: ಎಲ್ಲೆಡೆ ಸಂಸ್ಕೃತದ ಗ್ರಂಥಗಳು ಇತರ ಭಾಷೆಗಳಿಗೆ ಅನುವಾದಗೊಳ್ಳುತ್ತಿದ್ದರೆ, ಇಲ್ಲಿ ಕನ್ನಡದಿಂಧ ಸಂಸ್ಕೃತಕ್ಕೆ ಅನುವಾದಗೊಳ್ಳುತ್ತಿರುವುದು ಹರ್ಷವನ್ನು ಹೊಸ ಭರವಸೆಯನ್ನೂ ಮೂಡಿಸುತ್ತಿದೆ. ಈ ಗ್ರಂಥವು ಭಾರತದೆಲ್ಲೆಡೆ ಪ್ರಸಿದ್ದಿಯನ್ನು ಪಡೆಯಲಿ. ಉಡುಪಿಯ ಸಂಸ್ಕೃತ ಕಾಲೇಜಿನ ಅನೇಕ ಸಾಧನೆಗಳಲ್ಲಿ ಇದೂ ಒಂದಾಗಿ ಸೇರುತ್ತಿರುವುದು ಸಂತಸ ತಂದಿದೆ. ಈ ಸತ್ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಶ್ರೀಕೃಷ್ಣಮಧ್ವರ ಅನುಗ್ರಹವಿರಲಿ ಎಂದು ಪರ್ಯಾಯ ಮಠಾಧೀಶರಾದ ಶ್ರೀಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶಿರ್ವದಿಸಿದರು.
ಅವರು ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕ ಸಂಸ್ಕೃತ ಸಂಶೋಧನ ಕೇಂದ್ರದಿಂದ ಪ್ರಕಶಿತವಾದ ಜ್ಯೋತಿಷಸೋಪಾನಮ್ ಎಂಬ ಸಂಸ್ಕೃತ ಆವೃತ್ತಿಯ ಲೋಕಾರ್ಪಣೆಗೊಳಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಪರ್ಯಾಯ ಮಠದ ಕಿರಿಯ ಶ್ರೀಪಾದರಾದ ಶ್ರೀಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಉಪಸ್ಥಿತರಿದ್ದರು.
ಪ್ರೊ. ಶಿವಪ್ರಸಾದ ತಂತ್ರಿ ಅವರು ಪುಸ್ತಕದ ಪರಿಚಯವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಗ್ರಂಥ ಬಿಡುಗಡೆಗೆ ಧನ ಸಹಾಯ ಮಾಡಿದ ಪ್ರಸಿದ್ಧ ಉದ್ಯಮಿ ಅತುಲ್ ಕುಡ್ವ ಇವರು ಸಾಂದರ್ಭಿಕ ಮಾತನ್ನು ಆಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಎಸ್.ಎಂ.ಎಸ್.ಪಿ. ಸಭೆಯ ಕಾರ್ಯದರ್ಶಿ ವಿದ್ವಾನ್ ಗೋಪಾಲಕೃಷ್ಣ ಜೋಯಿಸರು, ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯರು, ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ಆಚಾರ್ಯರು, ಖ್ಯಾತ ಜ್ಯೋತಿಷಿ ವಿದ್ವಾನ್ ಮುರಳೀಧರ ತಂತ್ರಿ ಮತ್ತು ಉದ್ಯಮಿ ಅತುಲ್ ಕುಡ್ವ ಉಪಸ್ಥಿತರಿದ್ದರು.
ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳಾದ ಗಜಾನನ ಭಟ್ಟ, ಆದಿತ್ಯ ಎ.ಎಸ್. ಮತ್ತು ವಿನಯ ಹೆಗಡೆ ವೇದಘೋಷಗೈದರು. ಪ್ರಾಂಶುಪಾಲರು ಶ್ರೀಗಳವರನ್ನು ಮತ್ತು ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ಅಧ್ಯಾಪಕ ವಿದ್ವಾನ್ ಶ್ರೀನಿವಾಸ ತಂತ್ರಿ ಧನ್ಯವಾದ ಸಮರ್ಪಿಸಿದರು. ಡಾ. ರಾಧಾಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ